ನನ್ನ ಮೂರ್ಖ ಮಗುವೇ ಮೌನವಾಗಿರು: ಅಮೋಘವಾಗಿ ಅಭಿನಯಿಸಿರುವ ಶಕುನಿ ಪಾತ್ರದಾರಿ ಯಾರು ಗೊತ್ತಾ? ಕನ್ನಡದ ಧ್ವನಿ ಇವರೇ ನೋಡಿ

Kannada News
Advertisements

ನಮಸ್ತೇ ಸ್ನೇಹಿತರೆ, ಭಾರತದ ಕಿರುತೆರೆ ಇತಿಹಾಸದಲ್ಲಿಯೇ ಹೊಸ ಮೈಲಿಗಲ್ಲು ಸ್ಥಾಪಿಸಿದ್ದ ಮಹಾನ್ ದೃಶ್ಯಕಾವ್ಯ ಮಹಾಭಾರತ ಈಗ ಕನ್ನಡದಲ್ಲಿಯೂ ಪ್ರಸಾರವಾಗುತ್ತಿದ್ದು ಹಿಂದೆಂದೂ ಕಂಡುಕೇಳರಿಯದ ದೃಶ್ಯ ವೈಭವವನ್ನು ಕನ್ನಡಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಮಹಾಭಾರತದ ಪ್ರತಿಯೊಂದು ಪಾತ್ರಗಳು ಅದ್ಭುತವಾಗಿ ಮೂಡಿಬಂದಿವೆ. ಮಹಾಭಾರತ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆಯೋ ಎಂಬಂತೆ ಭಾಸವಾಗಿಟ್ಟಿದೆ. ಇನ್ನು ಮಹಾಭಾರತದ ದುಷ್ಟ ಕಪಟಿ ಶಕುನಿಯ ಪಾತ್ರವಂತೂ ಅಮೋಘವಾಗಿ ಮೂಡಿಬಂದಿದೆ. ಪ್ರೇಕ್ಷಕರ ಮನಗೆದ್ದಿದೆ ಈ ಶಕುನಿಯ ಪಾತ್ರ. ಇನ್ನು ಅದಕ್ಕೆ ತಕ್ಕಂತ ಕೊಟ್ಟಿರುವ ಕನ್ನಡದ ಧ್ವನಿ ಶಕುನಿಯ್ ಅಪಾತ್ರವನ್ನ ಇನ್ನು ಅಮೋಘವಾಗಿಸಿದೆ. ನಿಜವಾದ ಶಕುನಿ ನಮ್ಮ ಮುಂದೆ ಮಾತನಾಡುತ್ತಿದ್ದಾನೆಯೇ ಎಂಬಷ್ಟರ ಮಟ್ಟಿಗೆ ಈ ಪಾತ್ರ ಮೂಡಿಬಂದಿದೆ.

Advertisements

ಸ್ನೇಹಿತರೆ ತಮ್ಮ ಅದ್ಭುತ ಅಭಿನಯ ವಿಭಿನ್ನ ಶೈಲಿಯ ಮಾತಿನ ಮೂಲಕವೇ ಶಕುನಿ ಪಾತ್ರಕ್ಕೆ ಜೀವ ತುಂಬಿದ ನಟ ಪ್ರಣೀತ್ ಭಟ್ ಎಂದು. 2013 ರಿಂದ 2014ರವರೆಗೆ ಪ್ರಸಾರವಾದ ಹಿಂದಿಯ ಮಹಾಭಾರತದಲ್ಲಿ ಶಕುನಿ ಪಾತ್ರದಾರಿಯಾಗಿ ಅಭಿನಯಿಸಿದ ಪ್ರಣೀತ್ ಭಟ್ ಈ ಪಾತ್ರದ ಮೂಲಕವೇ ದೇಶದಾದ್ಯಂತ ಫೇಮಸ್ ಆದರೂ. ಇಂಜಿನಿಯರಿಂಗ್ ಓದಿರುವ ನಟ ಪ್ರಣೀತ್ ಭಟ್ ವಿಪ್ರೋ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರು ಆಗಿಯೂ ಕೆಲಸ ಮಾಡಿದ್ದಾರೆ..ಇನ್ನು 2002ರಲ್ಲಿ ಮುಂಬೈಗೆ ಹೋದ ಪ್ರಣೀತ್ ಮಾಡೆಲಿಂಗ್ ಕೂಡ ಮಾಡಿದ್ದಾರೆ. ಇನ್ನು 2004ರಲ್ಲಿ ಕಿರುತೆರೆಗೆ ಎಂಟ್ರಿ ಕೊಟ್ಟ ಪ್ರಣೀತ್ ಭಟ್ ಹಲವಾರು ಟಿವಿ ಶೋಗಳಲ್ಲಿ ಕೂಡ ಪಾಲ್ಗೊಂಡಿದ್ದಾರೆ. ಇನ್ನು 2014ರ ಹಿಂದಿ ರಿಯಾಲಿಟಿ ಷೋ ಬಿಗ್ ಬಾಸ್ ನ ಸಂಚಿಕೆ 18ರಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದಾರೆ.

ಇನ್ನು 2015ರಲ್ಲಿ ತಾವು ಬಹುಕಾಲದಿಂದ ಪ್ರೀತಿಸುತ್ತಿದ್ದ ಕಾಂಚನ ಶರ್ಮ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಅಲ್ಲಾದ್ದೀನ್ ಸೇರಿದಂತೆ ಹಿಂದಿಯ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಪ್ರಣೀತ್ ಭಟ್. ಇನ್ನು ಇವರ ಶಕುನಿಯ ಪಾತ್ರಕ್ಕೆ ಅದ್ಭುತವಾಗಿ ಕನ್ನಡದ ಧ್ವನಿ ಕೊಟ್ಟವರು ಸುಮನ್ ಜಾದೂಗಾರ್. ವಿಭಿನ್ನ ಶೈಲಿಯ ಮಾತುಕತೆ ಹೊಂದಿರುವ ಶಕುನಿ ಪಾತ್ರಕ್ಕೆ ಕನ್ನಡದ ಧ್ವನಿ ಮೂಲಕ ಜೀವ ತುಂಬಿದ್ದಾರೆ. ಇನ್ನು ಶಕುನಿ ಪಾತ್ರಕ್ಕೆ ಧ್ವನಿಯಾಗಿ ಕನ್ನಡಿಗರ ಮನ ಗೆದ್ದಿರುವ ಸುಮನ್ ಜಾದೂಗಾರ್ ರಂಗಭೂಮಿ ಕಲಾವಿದರು ಹೌದು. ಇನ್ನು ನಿರ್ದೇಶನದ ಜೊತೆಗೆ ಡಬ್ಬಿಂಗ್ ಕಲಾವಿದರಾಗಿಯೂ ಕೆಲಸಮಾಡುತ್ತಿದ್ದಾರೆ.

ಕನ್ನಡ ಸೇರಿದಂತೆ ಪರಭಾಷೆಗಳಲ್ಲಿ ಅಭಿನಯಿಸಿರುವ ಸುಮನ್ ಜಾದೂಗಾರ್ ತಮಿಳು ಸ್ಟಾರ್ ನಟ ಕಮಲ್ ಹಾಸನ್ ಅಭಿನಯದ ಉತ್ತಮ್ ವಿಲನ್ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಇನ್ನು ಸುಮನ್ ಜಾದೂಗಾರ್ ಅವರ ಧ್ವನಿಯಲ್ಲಿ ಮೂಡಿಬಂದಿರುವ ಓ ನನ್ನ ಮೂರ್ಖ ಮಗುವೇ ಮೌನವಾಗಿರು ಎಂದು ಹೇಳುವ ಡೈಲಾಗ್ ಅಂತೂ ತುಂಬಾ ಫೇಮಸ್ ಆಗಿಬಿಟ್ಟಿದೆ..ಇನ್ನು ಶಕುನಿಯ ನಗು ಸುಮನ್ ಅವರ ಧ್ವನಿಯಲ್ಲಿ ಮೂಡಿಬಂದಿದ್ದು ಯುವಕರಿಂದ ಹಿಡಿದು ಮುದುಕರವರೆಗೂ ಶಕುನಿಯ ಪಾತ್ರ ಮತ್ತು ಸಂಭಾಷಣೆಗೆ ಮರು ಹೋಗಿದ್ದಾರೆ. ಇನ್ನು ಶಕುನಿಯ ಪಾತ್ರಕ್ಕೆ ಧ್ವನಿ ನೀಡಿದ ಮೇಲೆ ಬೇಡಿಕೆ ಹೆಚ್ಚಾಗಿದ್ದು ಜವಾಬ್ದಾರಿ ಹೆಚ್ಚಾಗಿದೆ ಎಂದು ಸುಮನ್ ಜಾದೂಗಾರ್ ಹೇಳಿದ್ದಾರೆ.