ವಿರಾಟ್ ಕೊಹ್ಲಿಯನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ವಿಚಿತ್ರ ಕಂಡೀಷನ್ ಇಟ್ಟ ರಾಜಸ್ಥಾನ ರಾಯಲ್ಸ್ !

Sports
Advertisements

ಪ್ರತೀ ವರ್ಷದಂತೆ ಬಹುನಿರೀಕ್ಷಿತ ಐಪಿಎಲ್ ಕ್ರಿಕೆಟ್ ಲೀಗ್ ಈ ವರ್ಷ ಕೂಡ ನಡೆಯಲಿದ್ದು ಕೊ’ರೋನಾ ಕಾರಣದಿಂದಾಗಿ ಆರಂಭವಾಗುವುದು ತಡವಾಗಿದೆ. ಇನ್ನೆನು ಐಪಿಎಲ್ ಆರಂಭಕ್ಕೆ ದಿನಗಣನೆ ಪ್ರಾರಂಭವಾಗಿದ್ದು IPL ಜ್ವರ ಕಾವೇರುತ್ತಿದ್ದಂತೆ ನೆಚ್ಚಿನ ತಂಡಗಳ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾಗಳಲ್ಲಿ ವಾಕ್ಸಮರ ಪ್ರಾರಂಭವಾಗಿದೆ. ತಮ್ಮ ತಮ್ಮ ನೆಚ್ಚಿನ ತಂಡಗಳು ಹಾಗೂ ಆಟಗಾರರ ಫ್ಯಾನ್ಸ್ ನಡುವೆ ಈ ವಾಕ್ಸಮರ ಮಾಮೂಲಿಯೇ. ಇನ್ನು ಕ್ರಿಕೆಟ್ ಅಭಿಮಾನಿಗಳು ಬಹಳ ಕುತೂಹಲದಿಂದ ಕಾಯುತ್ತಿರುವ ಐಪಿಎಲ್ ಟೂರ್ನಿಯ ೧೩ ನೇ ಆವೃತ್ತಿಯು ಸೆಪ್ಟೆಂಬರ್ ೧೯ ರಿಂದ ನವೆಂಬರ್ ೧೦ನೇ ತಾರೀಖಿನವರೆಗೆ ದುಬೈನಲ್ಲಿ ನಡೆಯಲಿದೆ

ಇನ್ನು ರಾಜಸ್ಥಾನ ರಾಯಲ್ಸ್ ತಂಡದ ಅಭಿಮಾನಿಯೊಬ್ಬ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಕ್ಯಾಪ್ಟನ್ ಆಗಿರುವ ವಿರಾಟ್ ಕೊಹ್ಲಿಯ ಫೋಟೋವನ್ನ ರಾಜಸ್ಥಾನ ರಾಯಲ್ಸ್ ತಂಡದ ಜೆರ್ಸಿ ತೊಟ್ಟಂತೆ ಫೋಟೋ ಎಡಿಟ್ ಮಾಡಿದ್ದು ರಾಯಲ್ಸ್ ವೆಲ್‌ಕಮ್ಸ್‌ ದ ಕಿಂಗ್ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾನೆ. ಇನ್ನು IPL ಶುರುವಾದಾಗಿನಿಂದಲೂ ಒಂದೇ ತಂಡದ ಪರ ಆಡಿದ ಏಕೈಕ ಆಟಗಾರ ಎಂಬ ದಾಖಲೆ ಕೊಹ್ಲಿ ಹೆಸರಿನಲ್ಲಿದೆ.

ಇನ್ನು 2008ರಿಂದಲೂ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಆಡಿರುವ ಕೊಹ್ಲಿ ೨೦೧೩ರಲ್ಲಿ ತಂಡದ ಕ್ಯಾಪ್ಟನ್ ಆಗಿ ಆಯ್ಕೆಯಾದವರು. ಆದರೆ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ಕೊಟ್ಟಿದ್ದರೂ ತಮ್ಮ ನಾಯಕತ್ವದಲ್ಲಿ ಕೊಹ್ಲಿಗೆ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಇದುವರೆಗೂ ಕಪ್ ನ್ನ ಗೆದ್ದು ಕೊಡಲು ಆಗಲಿಲ್ಲ. ಇನ್ನು ರಾಜಸ್ತಾನ ರಾಯಲ್ಸ್ ತಂಡದ ಅಭಿಮಾನಿ ಕೊಹ್ಲಿ ಫೋಟೋವನ್ನ ರಾಜಸ್ತಾನ ರಾಯಲ್ಸ್ ತಂಡದ ಜೆರ್ಸಿ ತೊಟ್ಟಂತೆ ಎಡಿಟ್ ಮಾಡಿದ್ದು ಇದನ್ನ ಗಮನಿಸಿರುವ ರಾಯಲ್ಸ್ ತಂಡ ನಮ್ಮ ಈ ಕಂಡೀಷನ್ ನ್ನ ಪೂರೈಸಿದರೆ ಮಾತ್ರ ಕೊಹ್ಲಿಯನ್ನ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದೆ.

ಏನದು ವಿಚಿತ್ರ ಕಂಡೀಷನ್ ಅಂತ ನೋಡಿದ್ರೆ ಮಿಸ್ಟರ್ ನ್ಯಾಗ್ಸ್ ಅವರನ್ನ ಕರೆದುಕೊಂಡು ಬಂದರೆ ಮಾತ್ರ ಕೊಹ್ಲಿಯನ್ನ ನಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಈ ಮಿಸ್ಟರ್ ನಾಗ್ಸ್ ಬೇರೆ ಯಾರೂ ಅಲ್ಲ ಅವರೇ ಡ್ಯಾನಿಶ್ ಶೆಟ್ಟಿ. ಇವರು ತಮ್ಮ ಶೋಗಳ ಮೂಲಕವೇ ಆರ್ಸಿಬಿ ಅಭಿಮಾನಿಗಳನ್ನ ರಂಜಿಸುತ್ತಾ ಬಂದಿದ್ದಾರೆ. ಇನ್ನು ಕಳೆದ ವರ್ಷ ನಡೆದ ಕ್ರಿಕೆಟಿಗರ ಹರಾಜಿಗೂ ಮುಂಚೆ ಕೊಹ್ಲಿ ಮತ್ತೆ ಎಬಿ ಡಿವಿಲಿಯರ್ಸ್ ಅವರನ್ನ ನಮಗೆ ಕೊಡಿ ಎಂದು ರಾಜಸ್ಥಾನ ರಾಯಲ್ಸ್ ಕೇಳಿತ್ತು. ಆಗ ಬೆಂಗಳೂರು ರಾಯಲ್ಸ್ ನಿಮಗೆ ಬೇಕಿದ್ದರೆ ಮಿಸ್ಟರ್ ನ್ಯಾಗ್ಸ್ ಅವರನ್ನ ತೆಗೆದುಕೊಂಡು ಹೋಗಿ ಎಂದು ತಿರುಗೇಟು ನೀಡಿದ್ದರು. ಈಗ ಅದೇ ಕಾರಣವನ್ನಿಟ್ಟುಕೊಂಡಿರುವ ರಾಜಸ್ಥಾನ ರಾಯಲ್ಸ್ ನಾಗ್ಸ್ ಜೊತೆ ಕೊಹ್ಲಿ ಬಂದರೆ ಮಾತ್ರ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ ಎಂಬ ಕೌಂಟರ್ ಕೊಟ್ಟಿದೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244