ಪ್ರಿಯ ಸ್ನೇಹಿತರೆ, ಈ ಇಡೀ ಭೂಮಂಡಲವೇ ಕೌತುಕಗಳ ಆಗರ, ಸಂಶೋಧನೆಯ ಕೇಂದ್ರಬಿಂದುವಾಗಿದೆ. ಇನ್ನು ನಮ್ಮ ದೇಶದ ಸನಾತನ ಧಾರ್ಮ ಸಂಸ್ಕೃತಿ ಬಗ್ಗೆ ಅನೇಕ ಕಡೆ ಸಂಶೋಧನೆಗಳು ನಡೆಯುತ್ತಲೇ ಇವೆ. ಬಗೆದಷ್ಟು ಮಾಹಿತಿಗಳು ಹೊರಬರುತ್ತಲೆ ಇರುತ್ತವೆ. ಇನ್ನು ಆಗಿನ ಕಾಲದ ಜನರ ಬುದ್ದಿ ಎಷ್ಟಮಟ್ಟಿಗೆ ಇತ್ತಂದೆರೆ ಕುಕ್ಯ ಸುಬ್ರಮಣ್ಯದ ಕುಮಾರ ಪರ್ವತ ಸರ್ಪದ ಹೆಡೆಯಂತೆ ಕಾಣುತ್ತದೆ, ಭಗವಾನ್ ಶ್ರೀಕೃಷ್ಣನಿದ್ದ ದ್ವಾರಕೆಯನ್ನ ಒಂದು ಕೋನದಿಂದ ಸ್ಯಾಟಲೈಟ್ ನಿಂದ ವೀಕ್ಷಣೆ ಮಾಡಿದ್ರೆ ಕೃಷ್ಣನಿಗೆ ಪ್ರಿಯವಾದ ನವಿಲುಗರಿಯಂತೆ ಕಾಣುತ್ತೆ ಎಂದು ಹೇಳ್ಳಾಗಿತ್ತೇ..ಇನ್ನು ತಿರುಪತಿಯ ಬೆಟ್ಟವನ್ನ ನೋಡಿದ್ರೆ ತಿಮ್ಮಪ್ಪನ ಮುಖದಂತೆ ಕಾಣುತ್ತಾದೆ..ಇದೆಲ್ಲವೂ ಯಾವುದೊ ಕಾಲದಲ್ಲಿಯೇ ಆಗಿರವುದು..ಹೀಗೆ ಹಲವಾರು ಕೌತುಕಗಳು ನಮ್ಮಲ್ಲಿ ಕಾಣಸಿಗುತ್ತವೆ.
ಆದರೆ ಬೇಜಾರಿನ ಸಂಗತಿ ಏನೆಂದರೆ ನಮ್ಮವರೇ ಇದ್ರ ಬಗ್ಗೆ ತಲೆ ಕೆಡಿಸಿಕೊಳ್ಳೋದಕ್ಕೆ ಹೋಗೋದಿಲ್ಲ. ತಾತ್ಸಾರ ಮನೋಭಾವ..ಆದರೆ ಬೇರೆ ದೇಶದವರು ನಮ್ಮ ದೇವಸ್ಥಾನಗಳು ಸಂಸ್ಕೃತಿಯ ಬಗ್ಗೆ ಸಂಶೋಧನೆ ಮಾಡುತ್ತಲೇ ಇದ್ದಾರೆ. ಸ್ನೇಹಿತರೆ ನಾವು ಇಲ್ಲಿ ಬಹುಮುಖ್ಯವಾಗಿ ಹೇಳುತ್ತಿರುವ ವಿಷಯ ಏನೆಂದರೆ ಜಗತ್ತಿನ ಭೂಪಟವನ್ನ ಮೊದಲು ಕಂಡುಹಿಡಿದವರು ಯಾರೆಂದು? ಇನ್ನು ವಿಶ್ವ ಭೂಪಟದ ಬಗ್ಗೆ ಹಿಂದೂಗಳ ಮಹಾಗ್ರಂಥ ಮಹಾಭಾರತದಲ್ಲಿ ಉಲ್ಲೇಖ ಮಾಡಿರುವುದನ್ನ ನೋಡಿರುತ್ತೇವೆ. ಆದರೆ ಮೊದಲ ವಿಶ್ವ ಭೂಪಟ ರಚನೆ ಮಾಡಿದ್ದೂ ಗ್ರೀಕರು ಎಂದು ಕೂಡ ಹೇಳಾಗುತ್ತೆ.

ಆದರೆ ಸಂತರಾಗಿದ್ದ ರಾಮಾನುಜಾಚಾರ್ಯರು ಮಹಾಭಾರತವನ್ನ ಉಲ್ಲೇಖಿಸಿ ವಿಶ್ವ ಭೂಪಟವನ್ನ ರಚನೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಇನ್ನು ಮಹಾಭಾರತದ ವಿಷಯಕ್ಕೆ ಬಂದಾಗ ಕೌರವರ ಪಾಂಡವರ ನಡುವೆ ಕುರುಕ್ಷೇತ್ರ ಯುದ್ಧ ಆರಂಭವಾದಾಗ ಸಂಜನಯನು ದೃತರಾಷ್ಟ್ರ ಮಹಾರಾಜನಿಗೆ ಭೂಪಟ ಹೇಗೆ ಕಾಣುತ್ತದೆ ಎಂಬುದರ ಬಗ್ಗೆ ಕೇಳುವ ಉಲ್ಲೇಖಗಳಿವೆ. ಆಗ ಸಂಜಯನು ಒಬ್ಬ ವ್ಯಕ್ತಿ ತನ್ನಣ್ಣ ಕನ್ನಡಿಯಲ್ಲಿ ಹೇಗೆ ನೋಡಿಕೊಳ್ಳುತ್ತಾನೋ ಆಗೇಯೇ ಬ್ರಹ್ಮಾಂಡದಲ್ಲಿ ಭೂಮಿ ಕಾಣುತ್ತದೆ ಎಂದು ಹೇಳುತ್ತಾನೆ. ಇನ್ನು ಭೂಪಟದಲ್ಲಿ ಭೂಮಿಯ ಮೊದಲ ಭಾಗ ಆಲದ ಮರದ ಎಳೆಯ ರೀತಿಯಲ್ಲಿ ಕಂಡರೆ ಉಳಿದ ಭಾಗ ಮೊಲದ ಆಕೃತಿಯಲ್ಲಿ ಕಾಣುತ್ತೆ ಎಂದು ಸಂಜಯ ದೃತರಾಷ್ಟ್ರ ತಿಳಿಸುತ್ತಾನೆ. ಇನ್ನು ಇದನ್ನೇ ಆಧಾರವಾಗಿಟ್ಟುಕೊಂಡು ರಾಮಾನುಜಾಚಾರ್ಯರು ವಿಶ್ವ ಭೂಪಟವನ್ನ ರಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ.