ಜಯದ್ರಥನ ಮೇಲೆ ಇಂತಹ ಪ್ರತಿಜ್ಞೆ ಮಾಡಿಬಿಟ್ಟಿದ್ದ ಅರ್ಜುನನಿಗೆ ಅದು ಅಷ್ಟು ಸಲಭವಾಗಿರಲಿಲ್ಲ ! ಕೃಷ್ಣನಿಗೆ ಮಾತ್ರ ಗೊತ್ತಿದ್ದ ರಹಸ್ಯ ಅದು ?

Adhyatma
Advertisements

ನಮಸ್ತೆ ಸ್ನೇಹಿತರೆ, ಮಹಾಭಾರತ ಕೌತುಕಗಳ ಆಗರವಾಗಿದೆ. ಬಗೆದಷ್ಟು ಕುತೂಹಲಕಾರಿಯಾದ ವಿಷಯಗಳು ಹೊರಬರುತ್ತವೆ. ಗಾಂಡೀವಿ ಅರ್ಜುನನ ಮಗ ಅಭಿಮನ್ಯು ಮಹಾವೀರ. ಕೌರವರ ಸಹಸ್ರಾರು ಸೈನಿಕರನ್ನ ನೋಡ ನೋಡುತ್ತಿದಂತಯೇ ತನ್ನ ತೀಕ್ಷ್ಣವಾದ ಬಾಣಗಳಿಂದ ನಾ’ಶ ಮಾಡಿದವನು. ಅಭಿಮನ್ಯು ಎಂತಹ ಮಹಾವೀರನೆಂದರೆ ಎದುರಿಗೆ ನಿಂತು ಎದುರಿದಲಾರದ ಕೌರವ ಮಹಾವೀರರಾದ ಕೃಪಾಚಾರ್ಯ, ದ್ರೋಣಾಚಾರ್ಯ, ಕರ್ಣ, ದುರ್ಯೋಧನ, ಕೃತವರ್ಮ, ಅಶ್ವತ್ಥಾಮ, ಶಕುನಿ ಸೇರಿದಂತೆ ಇನ್ನು ಹಲವು ರಾಜರು ವೀರ ಅಭಿಮನ್ನ್ಯುವನ್ನ ರಣರಂಗದಲ್ಲಿ ಮೋಸದಿಂದ ಸಾ’ಯಿ’ಸುತ್ತಾರೆ. ಅತ್ತ ಸಂಶಪ್ತಕರನ್ನ ಸೋಲಿಸಿ ವಿಜಯದಾನದಿಂದ ಬಂದ ಅರ್ಜುನನಿಗೆ ಮಗ ಮ’ರ’ಣ’ಹೊಂದಿರುವುದನ್ನ ಕಂಡು ದುಃಖದಿಂದ ಅಳುತ್ತಾನೆ. ಇನ್ನು ಕೌರವರು ಅಭಿಮನ್ಯುವನ್ನ ಮೋಸದಿಂದ ಸಾ’ಯಿ’ಸಿರುವುದು ಹಾಗೂ ಇದಕ್ಕೆ ಮೂಲ ಕಾರಣ ಜಯದ್ರಥನೆಂದು ತಿಳಿದಿರುತ್ತದೆ.

ಏಕೆಂದರೆ ಗುರು ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹವನ್ನ ಭೇದಿಸಲು ಅದರೊಳಗೆ ಪ್ರವೇಶ ಮಾಡಿದ. ಅಭಿಮನ್ಯುವಿಗೆ ಚಕ್ರವ್ಯೂಹದೊಳಗೆ ಪ್ರವೇಶ ಮಾಡುವುದು ಗೊತ್ತಿತ್ತೇ ವಿನಃ ಹೊರಗೆ ಬರುವುದರ ಬಗ್ಗೆ ಗೊತ್ತಿರಲಿಲ್ಲ. ಸ್ನೇಹಿತರೆ ಚಕ್ರವ್ಯೂಹವನ್ನ ಭೇದಿಸುವುದರ ಬಗ್ಗೆ ಅಭಿಮನ್ಯು ಸೇರಿದಂತೆ ಕೇವಲ ನಾಲ್ಕು ಜನಕ್ಕೆ ಮಾತ್ರ ಗೊತ್ತಿತ್ತು. ಅದು ಕೃಷ್ಣ, ಅರ್ಜುನ, ಕೃಷ್ಣನ ಮಗ ಪ್ರದ್ಯುಮ್ನ. ಆದರೆ ಪ್ರದ್ಯುಮ್ನ ಈ ಯುದ್ಧದಲ್ಲಿ ಭಾಗವಹಿಸಿರಲಿಲ್ಲ.

Advertisements

ಇನ್ನು ಅಭಿಮನ್ಯುವಿನ ರಕ್ಷಣೆಗಾಗಿ ಭೀಮ ದೃಷ್ಟ್ಯದ್ಯುಮ್ನ ಸೇರಿದಂತೆ ಪಾಂಡವರು ಹಿಂದೆಯೇ ಹೋದರು. ಆದರೆ ಜಯದ್ರಥನು ಅವರನ್ನ ಚಕ್ರವ್ಯೂಹದೊಳಗೆ ಹೋಗದಂತೆ ಅವರನ್ನ ತಡೆದು ಅಭಿಮನ್ಯುವಿನ ಸಾ’ವಿ’ಗೆ ಕಾರಣನಾಗುತ್ತಾನೆ. ಇದು ಅರ್ಜುನನ ಕೋಪಕ್ಕೆ ಕಾರಣವಾಗಿದ್ದು ಭಯಂಕರ ಸಿಟ್ಟಿನಿಂದ ಹಲ್ಲು ಕ’ಡಿಯುತ್ತಾ ನಾಳೆ ಸೂರ್ಯ ಮುಳುಗುವುದರಳೊಗೆ ಆ ಜಯದ್ರಥನನ್ನ ಕೊ’ಲ್ಲ’ದಿದ್ದರೆ ನಾನು ಅರ್ಜುನನೇ ಅಲ್ಲ ಎಂದು ಪ್ರತಿಜ್ನ್ಯೆ ಮಾಡುತ್ತಾನೆ..ಹಾಗೂ ಮತ್ತೊಂದು ಮಾಹಿತಿಯ ಪ್ರಕಾರ ಜಯದ್ರಥನನ್ನ ನಾಳೆ ಸೂರ್ಯಾಸ್ತದೊಳಗೆ ನಾ’ಶ ಮಾಡದಿದ್ದರೆ ಅ’ಗ್ನಿ ಪ್ರವೇಶ ಮಾಡುವೆ ಅಂತ ಪ್ರತಿಜ್ಞೆ ಮಾಡಿರುವುದು ಇದೆ.

ಇನ್ನು ಅರ್ಜುನನ ಪ್ರತಿಜ್ಞೆ ತಿಳಿದ ಜಯದ್ರಥ ಭ’ಯಗೊಳ್ಳುತ್ತಾನೆ. ಇನ್ನು ಈ ಜಯದ್ರಥ ದುರ್ಯೋಧನನ ತಂಗಿಯ ಗಂಡ. ಸಿಂಧುರಾಜನಾಗಿದ್ದು ಇವನಿಗೆ ಸೈನ್ಧವನೆಂದು ಸಹ ಕರೆಯುತ್ತಾರೆ. ಇನ್ನು ಇದೆ ಜಯದ್ರಥ ಪಾಂಡವರು ವನವಾಸವಿದ್ದ ಸಮಯದಲ್ಲಿ ದ್ರೌಪದಿಯನ್ನ ಅ’ಪಹರಣ ಮಾಡಲು ಯತ್ನಿಸಿ ಪಾಂಡವರಿಂದ ಪೆಟ್ಟು ತಿಂದು ಅ’ವಮಾನಿತನಾಗಿರುತ್ತಾನೆ. ಇನ್ನು ಇದೆ ಅವಮಾನದ ಪ್ರತೀಕಾರವಾಗಿ ಚಕ್ರವ್ಯೂಹದೊಳಗೆ ಪ್ರವೇಶ ಮಾಡಿದ ಅಭಿಮನ್ಯುವನ್ನ ಹಿಂಬಾಲಿಸಿದ ಪಾಂಡವರನ್ನ ತಡೆದು ವೀರ ಅಭಿಮನ್ಯುವಿನ ಸಾ’ವಿ’ಗೆ ಕಾರಣನಾಗುತ್ತಾನೆ.

ಇನ್ನು ಕುರುಕ್ಷೇತ್ರದ ೧೪ನೇ ದಿನ ಯುದ್ಧ ಆರಂಭವಾದಾಗ ತನ್ನ ಮಗನನ್ನ ಕಳೆದುಕೊಂಡಿದ್ದ ಕೋಪದಲ್ಲಿದ್ದ ಅರ್ಜುನ ಕೌರವರ ಸೈನ್ಯವನ್ನ ಛಿ’ದ್ರ ಛಿ’ದ್ರ ಮಾಡುತ್ತಾ ಎದುರಾಳಿಗಳ ಹೃದಯದಲ್ಲಿ ಭೀ’ತಿಯುನ್ನುಂಟು ಮಾಡುತ್ತಾ ಗುರು ದ್ರೋಣ, ದುಶ್ಯಾಸನ, ಕೃತವರ್ಮನನ್ನ ಯುದ್ದದಿಂದ ಹಿಮ್ಮೆಟ್ಟುವಂತೆ ಮಾಡಿ ಅನೇಕ ಕೌರವ ವೀರರನ್ನ ರ’ಣರಂಗದಿಂದ ಓಡಿಹೋಗುವಂತೆ ಮಾಡುತ್ತಾನೆ. ಇಷ್ಟಾಗಿಯೂ ಜಯದ್ರಥ ಮಾತ್ರ ಅರ್ಜುನನ ಕಣ್ಣಿಗೆ ಬಿದ್ದಿರಲಿಲ್ಲ. ಅವನು ಅರ್ಜುನನ ಭ’ಯದಿಂದ ಆರು ಜನ ಮಹಾರಥರ ಮಧ್ಯೆ ಅಡಗಿಕೊಂಡಿರುತ್ತಾನೆ. ಆಗ ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ..ಈ ಅನ್ಯಾಯಿಯನ್ನ ಮೋಸದಿಂದಲೇ ಸಂ’ಹಾರ ಮಾಡಬೇಕು ಎಂದು ತನ್ನ ಯೋಗ ಮಾಯೆಯ ಭಲದಿಂದ ಗಾಡಾಂಧಕಾರವನ್ನ ಸೃಷ್ಟಿ ಮಾಡುತ್ತಾನೆ. ಆಗ ಸೂರ್ಯಾಸ್ತವಾಯಿತು ಎಂದು ತಿಳಿದು ಜಯದ್ರಥ ಇನ್ನು ಅರ್ಜುನನಿಂದ ತನಗೆ ಭಯವಿಲ್ಲ ಎಂದು ತಾನು ಅ’ಡಗಿಕೊಂಡಿದ್ದ ಸ್ಥಳದಿಂದ ತಲೆಯೆತ್ತುತ್ತಾನೆ.

ಇನ್ನು ಶ’ಸ್ತ್ರಗಳು ಘ’ರ್ಷಣೆಯಿಂದ ಉಂಟಾಗುತ್ತಿದ್ದ ಬೆಳಕಿನಲ್ಲಿ ಜಯದ್ರಥನ ತಲೆ ಕಾಣುತ್ತದೆ. ಆಗ ಕೃಷ್ಣನು ಅರ್ಜುನನಿಗೆ ತೋರಿಸಿ ನೀನೀಗಲೇ ಅವನ ತಲೆ ಕ’ತ್ತ’ರಿಸು..ಆದರೆ ಒಂದು ಎಚ್ಚರಿಕೆ..ಜಯದ್ರಥನ ತಲೆಯನ್ನ ಯಾರೂ ನೆ’ಲಕ್ಕೆ ಬೀಳಿಸುವರೋ ಅವರ ತಲೆ ನೂರು ಹೋ’ಳಾಗಲಿ ಎಂದು ಅವನ ತಂದೆ ವೃದ್ಧಕ್ಷತ್ರನ ಶಾ’ಪವಿದೆ. ಆ ವೃದ್ಧಕ್ಷತ್ರನು ಈಕುರುಕ್ಷೇತ್ರದ ಸಮೀಪದಲ್ಲೇ ಇರುವ ಸಮಂತಪಂಚಕದ ಬಳಿ ತಪಸ್ಸು ಮಾಡುತ್ತಿದ್ದಾನೆ. ನೀನು ನಿನ್ನ ಬಾಣ ಪ್ರಯೋಗ ಕೌಶಲ್ಯದಿಂದ ಜಯದ್ರಥನ ತಲೆಯು ಅವನ ತಂದೆಯ ತೊಡೆಯ ಮೇಲೆಯೇ ಬೀಳುವಂತೆ ಮಾಡು ಎಂದು ಶ್ರೀ ಕೃಷ್ಣ ಹೇಳಿದಾಗ, ಆ ಕೂಡಲೇ ಅರ್ಜುನನು ತನ್ನ ಗಾಂಡೀವಕ್ಕೆ ಮಹಾ ಅ’ಸ್ತ್ರವೊಂದನ್ನ ಹೂಡಿ ಜಯದ್ರಥನ ಮೇಲೆ ಬಿಡುತ್ತಾನೆ. ಆ ಬಾಣವು ಜಯದ್ರಥನ ತಲೆಯನ್ನ ಗಾಳಿಯಲ್ಲಿ ಹಾ’ರಿಸಿಕೊಂಡು ಹೋಗಿ ಅರಣ್ಯದಲ್ಲಿ ತಪಸ್ಸು ಮಾಡುತ್ತಿದ್ದ ವೃದ್ಧಕ್ಷತ್ರನ ತೊಡೆಯ ಮೇಲೆ ಬೀ’ಳುತ್ತದೆ. ಹೀಗೆ ಧಿಡೀರನೆ ತನ್ನ ತೊಡೆಯ ಮೇಲೆ ಬಂದು ಬಿದ್ದ ಜಯದ್ರಥನ ತಲೆಯನ್ನ ವೃದ್ಧಕ್ಷತ್ರನು ಗಾ’ಬರಿಯಿಂದ ಕೆಳಗೆ ಕೊಡುವುತ್ತಾನೆ. ಆಗ ಆತನ ಶಾಪದಂತಯೇ ವೃದ್ಧಕ್ಷತ್ರನ ತಲೆ ನೂರು ಹೋ’ಳಾಗುತ್ತಾದೆ.

ಬಳಿಕ ಶ್ರೀಕೃಷ್ಣನು ಮಾಯೆಯಿಂದ ಆವರಿಸಿದ್ದ ಗಾಡಾಂಧಕಾರವನ್ನ ಮಾಯವಾಗಿ ಸೂರ್ಯನು ಪ್ರಜ್ವಲಿಸತೊಡಗುತ್ತಾನೆ. ಅಲ್ಲಿಗೆ ಅರ್ಜುನ ಮಾಡಿದ್ದ ಪ್ರತಿಜ್ಞೆ ನೆರವೇರಿರುತ್ತದೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244