ಅಮೇಜಾನ್ ನಲ್ಲಿ ಖರೀದಿ ಮಾಡಿದ್ದು ಪವರ್ ಬ್ಯಾಂಕ್..ಆದ್ರೆ ಮನೆಗೆ ಬಂದ ಆರ್ಡರ್ ನೋಡಿ ಆತ ಶಾಕ್ !

Advertisements

[widget id=”custom_html-4″]

ಪ್ರಿಯ ಸ್ನೇಹಿತರೆ, ತಂತ್ರಜ್ನ್ಯಾನ ಮುಂದುವರಿದಂತೆ ಆಯ್ಕೆಗಳು ಸಹ ಹೆಚ್ಚಾಗುತ್ತಿವೆ. ಇಂದು ನಮ್ಮ ಕೈನಲ್ಲಿ ಒಂದು ಸ್ಮಾರ್ಟ್ ಮೊಬೈಲ್ ಇದ್ದರೆ ಸಾಕು ಕುಳಿತ ಜಾಗಕ್ಕೆ ಆನ್ಲೈನ್ ನಲ್ಲಿ ಏನನ್ನಾದರೂ ತರಿಸಿಕೊಳ್ಳಬಹುದಾಗಿದೆ. ಆದರೆ ಆನ್ಲೈನ್ ವಸ್ತುಗಳನ್ನ ಕೊಳ್ಳುವಾಗ ನಾವು ಎಷ್ಟೇ ಜಾಗರೂಕರಾಗಿದ್ದರು ಮೋಸವುಂಟಾಗಿ ಹಣ ಕಳೆದುಕೊಂಡವರನ್ನು ನೋಡಿದ್ದೇವೆ. ನಾವು ಖರೀದಿ ಮಾಡಿದ ವಸ್ತು ಒಂದಾದರೆ ಕೆಲವೊಂದು ವೇಳೆ ನಮಗೆ ಬಂದು ತಲುಪುವ ವಸ್ತು ಬೇರೆಯದೇ ಆಗಿರುತ್ತದೆ. ಒಂದು ವೇಳೆ ಆ ವಸ್ತು ನಾವು ಖರೀದಿ ಮಾಡಿದ ವಸ್ತುಗಿಂತ ದುಬಾರಿಯಾಗಿದ್ದರೆ..ಹೌದು ಇಲ್ಲಿ ನಬಿಲ್ ಎಂಬ ಯುವಕನೊಬ್ಬ ಅಮೆಜಾನ್ ನಲ್ಲಿ 1400 ರೂಪಾಯಿ ಮೊತ್ತದ ಪವರ್ ಬ್ಯಾಂಕ್ ನ್ನ ಆರ್ಡರ್ ಮಾಡುತ್ತಾನೆ. ಇನ್ನು ಆಗಸ್ಟ್ ೧೫ರ ಸ್ವಾತಂತ್ರ್ಯ ದಿನಾಚರಣೆಯೆಂದು ಆತ ಮಾಡಿದ್ದ ಆರ್ಡರ್ ಆತನ ಮನೆಗೆ ಬಂದು ತಲುಪುತ್ತದೆ. ಆದರೆ ನಬೀಲ್ ಅದನ್ನ ಬಿಚ್ಚಿ ನೋಡಿದಾಗ ಅವನಿಗೆ ನಂಬಲಾರದ ಅಚ್ಚರಿಯೊಂದು ಅಲ್ಲಿ ಕಾದಿರುತ್ತದೆ.

[widget id=”custom_html-4″]

Advertisements

ಹೌದು, ಕೇರಳದ ಮಲ್ಲಪುರಂ ಕೋಟಕ್ಕಲ್ ನ ನಬೀಲ್ ಎಂಬ ಯುವಕ ಆನ್ಲೈನ್ ಮೂಲಕ ಅಮೆಜಾನ್ ನಲ್ಲಿ ೧೪೦೦ರೂಗಳ ಪವರ್ ಬ್ಯಾಂಕ್ ಆರ್ಡರ್ ಮಾಡಿದ್ದು ಮನೆಗೆ ಬಂದ ಪಾರ್ಸೆಲ್ ನ್ನ ತೆಗೆದು ನೋಡಿದಾಗ ತಾನು ಆರ್ಡರ್ ಮಡಿದ ವಸ್ತುವಿಗಿಂತ ದುಬಾರಿ ವಸ್ತು ಅದರಲ್ಲಿ ಇರುತ್ತದೆ. 8 ಸಾವಿರ ರೂ ಮೌಲ್ಯದ ರೆಡ್ ಮಿ 8A ಡ್ಯುಯಲ್ ಫೋನ್ ಅದರಲ್ಲಿರುತ್ತದೆ. ಅಚ್ಚರಿಗೊಂಡ ಆತ ನಾನು ಖರೀದಿ ಮಾಡಿದ್ದೂ ಪವರ್ ಬ್ಯಾಂಕ್ ನೀವು ಮೊಬೈಲ್ ಕಳುಹಿಸಿದ್ದೀರಿ ಎಂದು ಅದನ್ನ ಇಟ್ಟುಕೊಳ್ಳುವುದೋ ಇಲ್ಲ ವಾಪಾಸ್ ಕಳುಹಿಸುವುದೋ ಎಂದು ಅಮೆಜಾನ್ ಗೆ ಟ್ವೀಟ್ ಮೂಲಕ ತಿಳಿಸಿದ್ದಾನೆ.

[widget id=”custom_html-4″]

ಇನ್ನು ಆ ಯುವಕನ ಪ್ರಾಮಾಣಿಕತೆಯನ್ನ ಮೆಚ್ಚಿಕೊಂಡ ಅಮೆಜಾನ್ ಕಂಪನಿ ಅದನ್ನ ನೀವು ಇಟ್ಟುಕೊಳ್ಳಬಹುದು ಅಥ್ವಾ ಯಾರಿಗಾದರೂ ಡೊನೇಟ್ ಮಾಡಬಹುದು ಎಂದು ರೀ ಟ್ವೀಟ್ ಮಾಡಿದೆ. ಇನ್ನು ಯುವಕನ ಪ್ರಾಮಾಣಿಕತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳು ವ್ಯಕ್ತವಾಗಿವೆ.