ಗರುಡ ಪುರಾಣ ಹೇಳಿರುವಂತೆ ಈ 3ನ್ನ ಬಿಟ್ಟರೆ ಮಾತ್ರ ಜೀವನದಲ್ಲಿ ಸುಖವಾಗಿರಲು ಸಾಧ್ಯ !

Adhyatma
Advertisements

ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬರಿಗೂ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು, ಸುಖವಾಗಿರಬೇಕೆಂಬ ಆಸೆ ಇದ್ದೆ ಇರುತ್ತದೆ. ಅದಕ್ಕಾಗಿ ಜೀವನ ಪರ್ಯಂತ ಹೋರಾಟ ಕೂಡ ಮಾಡುತ್ತಾರೆ. ಆದರೆ ತಾವು ಕಷ್ಟಪಟ್ಟು ಮಾಡುವ ಕೆಲಸಕ್ಕೆ ಸರಿಯಾದ ಪ್ರತಿಫಲ ಸಿಗುತ್ತಿದೆಯೇ ? ಎಲ್ಲರೂ ಸುಖವಾಗಿದ್ದಾರೆಯೇ ? ಎಂಬ ಪ್ರಶ್ನೆಗಳು ಕಾಡುವುದು ಸಹಜ. ಆದರೆ ಆಧ್ಯಾತ್ಮಿಕ ವಿಚಾರಗಳು ನಮ್ಮ ಜೀವನ ಸುಖವಾಗಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹಿರಿಯರು ಹೇಳುತ್ತಾರೆ. ಇನ್ನು ಗರುಡ ಪುರಾಣದಲ್ಲಿ ವ್ಯಾಖ್ಯಾನ ಮಾಡಿರುವಂತೆ ಈ ಮೂರು ವಿಚಾರಗಳನ್ನ ನಮ್ಮ ಜೀವನದಲ್ಲಿ ಸಂಪೂರ್ಣವಾಗಿ ಬಿಟ್ಟು ಬಿಟ್ಟರೆ ಜೀವನದಲ್ಲಿ ಸಂತೋಷವಾಗಿರಬಹುದು ಎಂದು ಹೇಳಲಾಗಿದೆ..ಹಾಗಾದ್ರೆ ಏನದು ಆ ಮೂರು ವಿಷಯಗಳು ಅಂತ ನೋಡೋಣ ಬನ್ನಿ..

Advertisements

*ಕಷ್ಟ ಪಟ್ಟು ದುಡಿದ್ರೆ ಮಾತ್ರ ನಾವು ಜೀವನದಲ್ಲಿ ಸುಖವಾಗಿರಲು ಸಾಧ್ಯ. ಆದರೆ ಅನೇಕರು ತಮ್ಮ ನಂಬಿಕಸ್ತರು ಬಂದು ಬಾಂಧವರಲ್ಲಿ ಸಾಲ ಮಾಡಿ ಸುಖವಾಗಿರಲು ಬಯಸುತ್ತಾರೆ. ಹಣ ಹಿಂದಿರುಗಿಸದೆ ಅವರಿಗೆ ಮೋಸ ಮಾಡುತ್ತಾರೆ. ಸಾಲ ಕೊಟ್ಟವರ ಕಣ್ಣಿಗೆ ಬೀಳಬಾರದೆಂದು ತಲೆ ಮರೆಸಿಕೊಂಡು ಓಡಾಡುತ್ತಾರೆ. ಸಂತೋಷವಾಗಿರಬೇಕೆಂದುಕೊಳ್ಳುವವರು ಸಾಲ ಮಾಡಿ ತಮ್ಮ ಜೀವನದ ನೆಮ್ಮದಿಯನ್ನೇ ಕಳೆದುಕೊಳ್ಳುತ್ತಾರೆ. ಎಲ್ಲಿ ಸಿಕ್ಕಿಬಿಡುತ್ತೇವೋ ಎಂಬ ಆತಂಕ ಒತ್ತಡದಲ್ಲೇ ಜೀವನವನಂ ಕಳೆಯುತ್ತಾರೆ. ಗರುಡ ಪುರಾಣದ ಪ್ರಕಾರ ಇಂತಹ ಮನಸ್ಥಿತಿಯನ್ನ ಬಿಟ್ಟಲ್ಲಿ ಮಾತ್ರ ಜೀವನದಲ್ಲಿ ಸುಖವಾಗಿರಲು ಸಾಧ್ಯ ಎಂದು ಹೇಳಲಾಗಿದೆ.

*ಹೆಣ್ಣು ದೇವತಾ ಸ್ವರೂಪಿ, ಮಾತೃ ಸ್ವರೂಪಿ. ಹಾಗಾಗಿ ಮಹಿಳೆಯರಿಗೆ ಗೌರವ ಕೊಡದ ಪುರುಷರು ಜೀವನದಲ್ಲಿ ಸುಖವಾಗಿರಲು ಸಾಧ್ಯವಿಲ್ಲ. ಮಹಿಳೆಯರಿಗೆ ಅವಮಾನವಾಗುವಂತೆ ನಡೆದುಕೊಳ್ಳುವವರು ಜೀವನದಲ್ಲಿ ಮೇಲೆ ಬರಲು ಸಾಧ್ಯವೇ ಇಲ್ಲ ಎಂಬುದು ಗರುಡ ಪುರಾಣದ ವ್ಯಾಖ್ಯಾನ. ಮಹಿಳೆಯರಿಗೆ ಯಾರೂ ಗೌರವ ಕೊಡುತ್ತಾರೋ ಅಂಥವರಿಗೆ ಮಾತ್ರ ಸಮಾಜದಲ್ಲಿ ಒಳ್ಳೆಯ ಗೌರವ ಸಿಗುತ್ತದೆ ಜೊತೆಗೆ ಜೀವನ ಸುಖವಾಗಿರುತ್ತದೆ ಎಂದು ಗರುಡ ಪುರಾಣ ಹೇಳುತ್ತದೆ.

*ಸಾಮಾನ್ಯವಾಗಿ ಚಟಗಳಿಗೆ ಅಂಟಿಕೊಳ್ಳುದಿರುವವರು ತುಂಬಾ ಕಡಿಮೆ. ಸಪ್ತ ಚಟ (ವ್ಯಸನ)ಗಳಲ್ಲಿ ಒಂದಾದ ಜೂಜಿನ ಚಟಕ್ಕೆ ಬಿದ್ದವರು ಜೀವನದಲ್ಲಿ ಸಂತೋಷವಾಗಿರಲು ಸಾಧ್ಯವಿಲ್ಲ. ಅವರು ಜೀವನಪರ್ಯಂತ ನ’ರಕಯಾ’ತನೆ ಅನುಭವಿಸುತ್ತಾರೆ ಎಂದು ಗರುಡ ಪುರಾಣ ಹೇಳುತ್ತದೆ. ಈ ಜೂನಿಜ ಚಟದಿಂದ ಕೇವಲ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಕೂಡ ಮನುಷ್ಯ ಹೆಚ್ಚಿನ ಸಮಸ್ಯಗಳಲ್ಲಿ ಸಿಲುಕಿ ಕುಗ್ಗಿ ಹೋಗುತ್ತಾನೆ ಎಂದು ಹೇಳಲಾಗಿದೆ. ಹಾಗಾಗಿ ಜೀವನವನ್ನೇ ನಾಶ ಮಾಡುವ ಜೂಜಿನ ವ್ಯಸನದಿಂದ ದೂರ ಇರಬೇಕು ಎಂದು ಗರುಡ ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ.