ಧೋನಿ ನಿವೃತ್ತಿ ಘೋಷಣೆ ಮಾಡಿದ ಬೆನ್ನಲ್ಲೇ ಅತೀ ದೊಡ್ಡ ನಿರ್ಧಾರ ಮಾಡಿದ ಪಾಕ್ ಅಭಿಮಾನಿ !

Advertisements

ಭಾರತದ ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿದ್ದ ದೇಶಕ್ಕೆ ಎರಡು ವಿಶ್ವಕಪ್ ಗಳನ್ನ ಗೆದ್ದು ಕೊಟ್ಟ ಮಹೇಂದ್ರ ಸಿಂಗ್ ಧೋನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿಧಾಯ ಘೋಷಿಸಿದ್ದಾರೆ. ಇನ್ನು ಧೋನಿಯವರು ಇದ್ದಕಿದ್ದಂತೆ ತೆಗೆದುಕೊಂಡ ಈ ನಿರ್ಧಾರ ವಿಶ್ವದಲ್ಲಿರುವ ಕೋಟ್ಯಾಂತರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇನ್ನು ಧೋನಿಯವರ ಈ ನಿರ್ಧಾರದಿಂದಾಗಿ ಪಾಕಿಸ್ತಾನದ ಅಭಿಮಾನಿಯೊಬ್ಬ ತುಂಬಾ ಬೇಸರಗೊಂಡಿದ್ದು ದೊಡ್ಡ ನಿರ್ಧಾರವೊಂದನ್ನೇ ಮಾಡಿದ್ದಾನೆ.

ಧೋನಿಗೆ ಭಾರತದಲ್ಲಿ ಅಭಿಮಾನಿಗಳಿರುವಂತೆ ಪಾಕಿಸ್ಥಾನದಲ್ಲಿಯೂ ಕೂಡ ಅಭಿಮಾನಿಯೊಬ್ಬ ಇದ್ದಾರೆ. ಅವರೇ ಕ್ರಿಕೆಟ್ ಜಗತ್ತಿನಲ್ಲಿ ಚಾಚಾ ಚಿಕಾಗೋ ಎಂದು ಕರೆಸಿಕೊಂಡಿರುವ ಕ್ರಿಕೆಟ್ ಆಟದ ಕಟ್ಟಾ ಅಭಿಮಾನಿ ಮೊಹಮದ್ ಬಶೀರ್ ಬೊಜೈ. ಇನ್ನು ವಿಶ್ವ ಕ್ರಿಕೆಟ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡದ ನಡುವಿನ ಪಂದ್ಯಗಳೆಂದರೆ ವಿಶ್ವದೆಲ್ಲೆಡೆ ಇರುವ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ವೀಕ್ಷಣೆ ಮಾಡುತ್ತಾರೆ. ಇನ್ನು ಮೊಹಮದ್ ಬಶೀರ್ ಅವರೂ ಕೂಡ ಜಗತ್ತಿನ ಯಾವ ದೇಶದಲ್ಲೇ ಆಗಲು ಭಾರತ ಪಾಕ್ ನಡುವಿನ ಪಂದ್ಯ ನಡೆದರೆ ಅಲ್ಲಿ ಹಾಜರಿರುತ್ತಾರೆ.

Advertisements

ವಿಶೇಷ ಎಂದರೆ ಹೆಚ್ಚಾಗಿ ಧೋನಿಯನ್ನ ಬೆಂಬಲಿಸಿದ ಇವರು ಪಾಕ್ ಅಭಿಮಾನಿಗಳಿಂದ ನಿಂದನೆಗೂ ಒಳಗಾಗಿದ್ದಾರೆ. ಮೊಹಾಲಿಯಲ್ಲಿ ನಡೆದ ಭಾರತ ಪಾಕ್ ನ ಪಂದ್ಯವೊಂದರ ವೇಳೆ ಟಿಕೆಟ್ ಸಿಗದೇ ಬಶೀರ್ ಪರದಾಡುತ್ತಿದ್ದರು. ಆಗ ಇವರಿಗೆ ಟಿಕೆಟ್ ವ್ಯವಸ್ಥೆ ಮಾಡಿದ್ದರು ಧೋನಿ. ಇಷ್ಟೇ ಅಲ್ಲದೆ ೨೦೧೮ರ ಏಷ್ಯಾಕಪ್ ಕ್ರಿಕೆಟ್ ಪಂದ್ಯದ ವೇಳೆಯೂ ಸಹ ತಾನು ವಾಸವಾಗಿದ್ದ ಹೋಟೆಲ್ ರೂಮ್ ಗೆ ಬಷೀರ್ ಅವರನ್ನ ಕರೆಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಅವರಿಗೆ ತಮ್ಮ ಜೆರ್ಸಿ ನೀಡಿದ್ದರು. ಇನ್ನು ಈಗ ಧೋನಿ ವಿಧಾಯ ಘೋಷಣೆ ಮಾಡಿರುವುದನ್ನ ತಿಳಿದ ಬಷೀರ್ ಅವರು ಇದು ನನಗೆ ತುಂಬಾ ಬೇಸರದ ವಿಚಾರ. ಧೋನಿಗೆ ವಿಧಾಯದ ವೇಳೆ ಭರ್ಜರಿ ಬೀಳ್ಕೊಡುಗೆ ಸಿಗಬೇಕಿತ್ತು ಎಂದು ಬಶೀರ್ ಅವರು ಹೇಳಿದ್ದಾರೆ. ಇನ್ನು ಅಮೇರಿಕಾದ ಚಿಕೋಗೋದಲ್ಲಿ ರೆಸ್ಟೋರೆಂಟ್ ನ್ನ ಹೊಂದಿದ್ದಾರೆ.

ಇನ್ನು ಧೋನಿ ಕ್ರಿಕೆಟ್ ನಿಂದ ನಿವೃತ್ತಿಯಾಗಿರುವ ಕಾರಣ ನಾನು ಇನ್ನು ಮುಂದೆ ಕ್ರಿಕೆಟ್ ನೋಡುವ ಸಲುವಾಗಿ ಎಲ್ಲಿಗೂ ಪ್ರಯಾಣ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಇನ್ನು ೨೦೧೫ರ ವಿಶ್ವಕಪ್ ವೇಳೆ ನಾನು ಬಿಸಿಲಿನಲ್ಲಿ ಪಂದ್ಯ ವೀಕ್ಷಣೆ ಮಾಡುತ್ತಿದ್ದಾಗ ಧೋನಿ ಕೊಟ್ಟರೆಂದು ಸುರೇಶ್ ರೈನಾ ಸನ್ ಗ್ಲಾಸ್ ತಂದು ಕೊಟ್ಟಿದ್ದರು ಎಂದು ಧೋನಿಯ ಅಭಿಮಾನಿಯಾಗಿರುವ ಬಶೀರ್ ಹೇಳಿದ್ದಾರೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244