ಗಣೇಶ ಹಬ್ಬದ ದಿನದಂದು ಅಪ್ಪಿತಪ್ಪಿಯೂ ಈ ಒಂದು ಕೆಲಸ ಮಾಡಲೇಬೇಡಿ ?

Adhyatma
Advertisements

ಗಣೇಶ ಎಲ್ಲರಿಗೂ ಪ್ರಿಯ ದೈವ. ಹಿಂದೂ ಕುಲದ ಸರ್ವರೂ ಇವನನ್ನು ಆರಾಧಿಸುತ್ತಾರೆ. ಭಾದ್ರಪದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶನ ವ್ರತ ಆಚರಣೆ ಮತ್ತು ಹಬ್ಬ ಮಾಡಲಾಗುತ್ತದೆ. ಮತ್ತು ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇನ್ನು ಗಣೇಶ ಹಬ್ಬ ಬಂತೆಂದರೆ ಅದರ ಸಡಗರವೇ ಬೇರೆ. ಗಲ್ಲಿ ಗಲ್ಲಿಗಳಲ್ಲಿ ಶಿವ ಪಾರ್ವತಿ ಪುತ್ರ ವಿನಾಯಕ ಸ್ವಾಮಿಯನ್ನ ಪ್ರತಿಷ್ಠಾಪನೆ ಮಾಡಿ ಪೂಜಿಸಿ ಸಂಭ್ರಮ ಪಡುತ್ತಾರೆ. ಆದರೆ ಗಣೇಶ ಹಬ್ಬದ ಶುಭದಿನ ಅಂದರೆ ಭಾದ್ರಪದ ಮಾಸದ ಶುಕ್ಲ ಪಕ್ಷ ಚತುರ್ಥಿಯ ದಿನ ಚಂದ್ರನನ್ನು ನೋಡುವಂತಿಲ್ಲ. ಒಂದು ವೇಳೆ ನೋಡಿದರೆ ಸುಳ್ಳು ಆಪಾದನೆಗೆ ಸಿಲುಕುತ್ತಾರೆ ಎಂಬ ನಂಬಿಕೆ ಇದೆ.

ಆಕಸ್ಮಿಕವಾಗಿಯೂ ಅಂದು ಚಂದ್ರನನ್ನು ನೋಡುವಂತಿಲ್ಲ. ನೋಡಿದರೆ ಶೋಕ ಕಟಿಟ್ಟ ಗಂಟು. ಪರಮಾತ್ಮ ಶ್ರೀ ಕೃಷ್ಣನೂ ಇದಕ್ಕೆ ಹೊರತಲ್ಲ. ಅವನು ಗಣೇಶ  ಚತುರ್ಥಿಯ ದಿನ ಚಂದ್ರನನ್ನು ನೋಡಿದ ದೋಷಕ್ಕಾಗಿ ಕಳ್ಳ ತನದ ಆರೋಪ ಎದುರಿಸಬೇಕಾಯಿತು. ನಿಂ’ದನೆಯ ಮಾತುಗಳಿಂದ ಮುಕುಂದ ಬಹಳ ನೊಂದಿದ್ದ. ಕ’ಳ್ಳತನದ ಆರೋಪ ಮಾತ್ರವಲ್ಲ ಕೊ’ಲೆ’ಯ ಆರೋಪವನ್ನೂ ಎದುರಿಸಬೇಕಾಯಿತು. ಶಮಂತಕ ಮಣಿಯನ್ನು ಹುಡುಕಿ ತರಲು ತುಂಬಾ ಶ್ರಮ ಪಟ್ಟ. 

Advertisements

ಶ್ರೀ ಕೃಷ್ಣನ ಈ ಸೂರ್ಯ ಮಣಿಯ ಕಥೆಯನ್ನು ಕೇಳಿದರೆ ಚಂದ್ರ ದರ್ಶನದ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಆ ದಿನ ಚಂದ್ರನನ್ನು ನೋಡಬಾರದು ಎಂಬುದಕ್ಕೆ ಏನೋ ವೈಜ್ಞಾನಿಕ ಕಾರಣವೂ ಇರಬಹುದು. ಅದೇನೇ ಇರಲಿ ಗಣೇಶ ಚತುರ್ಥಿ ಯಂದು ಚಂದ್ರನ ದರ್ಶನ ಮಾಡದಿರುವುದೇ ಒಳಿತು.