ಜನಮೆಚ್ಚಿದ ಕನ್ನಡದ ರಾಧಾ ಕೃಷ್ಣ ಧಾರಾವಾಹಿಯ ರಾಧಾ ಕೃಷ್ಣನಿಗೆ ಮುದ್ದಾದ ವಾಯ್ಸ್ ಕೊಟ್ಟಿರೋದು ಇವರೇ ನೋಡಿ

Entertainment

ನಮಸ್ತೇ ಸ್ನೇಹಿತರೆ, ಈಗಂತೂ ಕನ್ನಡ ಕಿರುತೆರೆಯಲ್ಲಿ ಡಬ್ಬಿಂಗ್ ಸಿರಿಯಗಳದ್ದೇ ಹವಾ. ಅದರಲ್ಲೂ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನ್ ದೃಶ್ಯಕಾವ್ಯ ಮಹಾಭಾರತ ಸೇರಿದಂತೆ ರಾಧಾ ಕೃಷ್ಣ ಧಾರಾವಾಹಿಗಳು ಪ್ರಸಾರವಾಗುತ್ತಿದ್ದು ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಇಂದಿನ ಯುವ ಜನತೆ ಇಷ್ಟರ ಮಟ್ಟಿಗೆ ಪೌರಾಣಿಕ ಕಥಾ ಹಂದರವುಳ್ಳ ಸೀರಿಯಲ್ ಗಳನ್ನ ಎಷ್ಟರ ಮಟ್ಟಿಗೆ ಇಷ್ಟಪಡುತ್ತಾರೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಕತೆಯ ಕುರಿತಾದ ನಡೆಯುವ ಚರ್ಚೆಗಳೇ ಸಾಕ್ಷಿ. ಕನ್ನಡಿಗರಂತೂ ಈ ಎರಡೂ ಪೌರಾಣಿಕ ಧಾರಾವಾಹಿಗಳಿಗೆ ಫಿದಾ ಆಗಿದ್ದಾರೆ.

ಇನ್ನು ರಾಧಾ ಕೃಷ್ಣ ಧಾರಾವಾಹಿಯ ಬಗ್ಗೆ ಹೇಳಬೇಕೆಂದರೆ ಭಗವಾನ್ ಶ್ರೀ ಕೃಷ್ಣ ಹಾಗೂ ರಾಧಾ ದೇವಿಯ ಜನ್ಮವೃತ್ತಾಂತದಿಂದ ಹಿಡಿದು ಅವರ ಪ್ರೇಮ ಪ್ರಸಂಗಗಳನ್ನ ಆವರಿಸಿದ ಕತೆಯಾಗಿದೆ. ಇನ್ನು ಕೃಷ್ಣ ಮತ್ತು ರಾಧೆಯ ಪಾತ್ರಗಳಿಗೆ ಕನ್ನಡದಲ್ಲಿ ಕೊಟ್ಟಿರುವ ಧ್ವನಿಯಂತೂ ಅದ್ಭುತವಾಗಿ ಮೂಡಿಬಂದಿದೆ. ಅಷ್ಟೊಂದು ಮುದ್ದು ಮುದ್ದಾಗಿ ಕಂಠದಾನ ಮಾಡಿರುವ ಆ ಕನ್ನಡದ ಧ್ವನಿಗಳು ಯಾರದ್ದು ಎಂಬುದರ ಬಗ್ಗೆ ಪ್ರೇಕ್ಷಕರಲ್ಲಿ ತುಂಬಾ ಕುತೂಹಲ ಇದೆ.

ಸ್ನೇಹಿತರೆ, ತನ್ಮಯತೆ, ಸಾತ್ವಿಕತೆ, ಮಧುರತೆಯಿಂದ ಕೂಡಿರುವ ದೈವಿಕ ಅನುಭ ನೀಡುವ ರಾಧಾ ಕೃಷ್ಣ ಧಾರಾವಾಹಿಯ ಕೃಷ್ಣವಾಣಿ ನಮ್ಮ ಕನ್ನಡದ ಡಬ್ಬಿಂಗ್ ಆರ್ಟಿಸ್ಟ್ ನಿಪುಣ್. 2008 ಮೇ ನಲ್ಲಿ ಚಿಂಟೂ ಟಿವಿಯ ಕಾರ್ಟೂನ್ ಪಾತ್ರಗಳಿಗೆ ಡಬ್ಬಿಂಗ್ ಮಾಡುವ ಮೂಲಕ ಡಬ್ಬಿಂಗ್ ಆರ್ಟಿಸ್ಟ್ ಆಗಿ ಎಂಟ್ರಿ ಆಗುತ್ತಾರೆ ನಿಪುಣ್. ಮಿಮಿಕ್ರಿ ಕಲಾವಿದರೂ ಕೂಡ ಆಗಿರುವ ಇವರು ನಂದಿನಿ ಸೇರಿದಂತೆ ಹಲವಾರು ಧಾರಾವಾಹಿಗಳ ಕಿರುತೆರೆ ನಟರಿಗೆ ಕಂಠದಾನ ಮಾಡಿದ್ದು ಈಗ ರಾಧಾ ಕೃಷ್ಣ ಧಾರಾವಾಹಿಯ ಕೃಷ್ಣನಿಗೆ ಡಬ್ಬಿಂಗ್ ಮಾಡುವ ಮುಖಾಂತರ ತುಂಬಾ ಫೇಮಸ್ ಆಗಿದ್ದಾರೆ.

ಇನ್ನು ಮುದ್ದುಮುದ್ದಾಗಿ ಮಾತನಾಡುವ ರಾಧಾ ದೇವಿಗೆ ವಾಯ್ಸ್ ಕೊಟ್ಟವರು ಬೆಂಗಳೂರಿನವರಾದ ಆಶಿಕಾ. ಇದೆ ಅಲ್ಲದೆ ಇದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಧಾರಾವಾಹಿಯ ಕುಂತಿ ಪಾತ್ರಕ್ಕೂ ಕೂಡ ಇವರದ್ದೇ ಹಿನ್ನಲೆ ಧ್ವನಿ. ಹಾಗೂ ಉದಯಟೀವಿಯಲ್ಲಿ ಪ್ರಸಾರವಾಗುವ ಗಣೇಶ ಸೀರಿಯಲ್ ನ ಒಂದು ಪಾತ್ರಕ್ಕೂ ಇವರ ಕಂಠದಾನವಿದೆ.

ಇನ್ನು ನಿರೂಪಕಿಯಾಗಿಯೂ ಸೈ ಎನಿಸಿಕೊಂಡಿರುವ ಕಿರುತೆರೆ ಮಾತ್ರವಲ್ಲದೆ ಹಿರಿ ತೆರೆಯ ಹಲವಾರು ಚಿತ್ರಗಳಿಗೂ ವಾಯ್ಸ್ ಕೊಟ್ಟಿದ್ದಾರೆ. ಜೊತೆಗೆ ಕೆಲವೊಂದು ಜಾಹಿರಾತುಗಳಿಗೂ ಇವರ ಹಿನ್ನಲೆ ಧ್ವನಿ ಇದೆ. ಇನ್ನು ವಿಶೇಷ ಎಂದರೆ ಶಿಕ್ಷಕಿಯಾಗಿಯೂ ಕೆಲಸ ಮಾಡಿರುವ ಆಶಿಕಾ ರಂಗಭೂಮಿಯ ಕಲಾವಿದೆಯೂ ಹೌದು. ಹೀಗೆ ಬಹುಮುಖ ಪ್ರತಿಭೆಯಾಗಿರುವ ಆಶಿಕಾ ರಾಧಾ ಕೃಷ್ಣ ಧಾರಾವಾಹಿಯ ರಾಧಾ ಧ್ವನಿಯ ಮೂಲಕ ಖ್ಯಾತಿ ಪಡೆದಿದ್ದಾರೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244