ಮಹಾಭಾರತ ಪ್ರಸಾರ ಮಾಡುತ್ತಿರುವ ಕನ್ನಡ ವಾಹಿನಿ ವಿರುದ್ಧ ಪ್ರೇಕ್ಷಕರ ಆಕ್ರೋಶ ! ಏಕೆ ಗೊತ್ತಾ ?

News
Advertisements

ಪ್ರಿಯ ಸ್ನೇಹಿತರೆ, ಕನ್ನಡದ ಕಿರುತೆರೆವಾಹಿನಿಯಲ್ಲಿ ಮೂಡಿಬರುತ್ತಿರುವ ಮಹಾನ್ ದೃಶ್ಯಕಾವ್ಯ ಮಹಾಭಾರತ ಧಾರಾವಾಹಿಗೆ ಕನ್ನಡಿಗರು ಫಿದಾ ಆಗಿದ್ದು ಕರುನಾಡಿನ ಮನೆ ಮನೆಗಳಲ್ಲೂ ಅದ್ಭುತವಾಗಿ ಪ್ರಸಾರವಾಗುತ್ತಿದೆ. ಇಂದಿನ ಯುವ ಪೀಳಿಗೆಯವರಿಂದ ಹಿಡಿದು ವಯಸ್ಸಾದವರವರೆಗೆ ಮಹಾಭಾರತವನ್ನ ವೀಕ್ಷಿಸುತ್ತಿದ್ದಾರೆ. ಅದ್ಭುತ ಸೆಟ್ ಗಳು, ಭಾರತದ ಬೇರೆ ಬೇರೆ ರಾಜ್ಯಗಳ ಲೊಕೇಶನ್ ಗಳಲ್ಲಿ ಚಿತ್ರೀಕರಣ ಮಾಡಿರುವುದು, ಒಂದಕ್ಕಿಂತ ಮತ್ತೊಂದು ಅದ್ಭುತ ಎನಿಸುವ ಪಾತ್ರಗಳು, ಮನಸೂರೆಗೊಳ್ಳುವ ಸಂಭಾಷಣೆ ಇವೆಲ್ಲವೂ ಲಕ್ಷಾಂತರ ಪ್ರೇಕ್ಷಕರು ಮಹಾಭಾರತವನ್ನ ವೀಕ್ಷಿಸಲು ಕಾರಣವಾಗಿದೆ. ಇಂದಿನ ಯುವ ಜನಾಂಗ ನಮ್ಮ ಸನಾತನ ಸಂಸ್ಕೃತಿ ಗ್ರಂಥಗಳು ಅದರಲ್ಲಿ ಬರುವ ಕತೆಗಳ ಬಗ್ಗೆ ಚರ್ಚೆ ಮಾಡುವಷ್ಟರ ಮಟ್ಟಿಗೆ ಮಹಾಭಾರತ ಸೀರಿಯಲ್ ಯಶಸ್ವಿಯಾಗಿದೆ.

ಸ್ನೇಹಿತರೆ ಮಹಾಭಾರತದ ಶ್ರೀಕೃಷ್ಣನಿಂದ ಹಿಡಿದು ಶಕುನಿಯವರೆಗೂ ಅಚ್ಚುಕಟ್ಟಾಗಿ ಆಯ್ಕೆ ಮಾಡಲಾಗಿರುವ ಪಾತ್ರಗಳು ಇವೆಲ್ಲವೂ ಸೇರಿ ನಮ್ಮ ಕಣ್ಣ ಮುಂದೆಯೇ ಮಹಾಭಾರತ ನಡೆಯುತ್ತಿದೆಯೇ ಎಂಬಂತೆ ಮನೋಹರವಾಗಿದೆ. ನಾವು ಮಹಾಭಾರತವನ್ನ ಸಿನಿಮಾ ಸೀರಿಯಲ್ ಗಳಲ್ಲಿ ಹಲವು ಬರಿ ನೋಡಿದ್ದರೂ ಮುಂದೇನು ಆಗುತ್ತೋ ಎಂಬ ಕುತೂಹಲವನ್ನ ಹುಟ್ಟುಹಾಕುತ್ತಿದೆ. ಇನ್ನು ಇಂತಹ ಮಹಾನ್ ದ್ರಶ್ಯಕಾವ್ಯವನ್ನ ಕನ್ನಡದಲ್ಲಿ ಡಬ್ ಮಾಡಿ ಪ್ರಸಾರ ಮಾಡುತ್ತಿರುವುದ್ಕಕೆ ಸುವರ್ಣ ವಾಹಿನಿಗೆ ವೀಕ್ಷಕರು ಧನ್ಯವಾದ ಹೇಳುತ್ತಿದ್ದಾರೆ. ಆದರೆ ಆದರ ಜೊತೆಗೆ ಪ್ರೇಕ್ಷಕ ವರ್ಗ ವಾಹಿನಿಯವರ ಮುನಿಸಿಕೊಂಡಿದ್ದು ಬೇಸರ ವ್ಯಕ್ತಪಡಿಸಿದ್ದಾರೆ.

Advertisements

ಮಹಾಭಾರತ ಕನ್ನಡದಲ್ಲಿ ಪ್ರಸಾರವಾದ ಶುರುವಿನಲ್ಲಿ ಸುವರ್ಣ ವಾಹಿನಿಯವರು ಒಂದುವರೆ ಗಂಟೆಗಳ ಕಾಲ ಪ್ರಸಾರ ಮಾಡುತ್ತಿದ್ದರು. ಬರ ಬರುತ್ತಾ ಒಂದು ಗಂಟೆಗಳ ಕಾಲ ಭಾನುವಾರವೂ ಸೇರಿ ಮಹಾಭಾರತವನ್ನ ಪ್ರೇಕ್ಷಕರಿಗೆ ಉಣಬಡಿಸಿದರು. ಆದರೆ ಈಗ ಒಂದು ವಾರದಿಂದ ಕೇವಲ ಅರ್ಧ ಗಂಟೆಗಳ ಕಾಲ ಪ್ರಸಾರ ಮಾಡುತ್ತಿದ್ದಾರೆ. ಇದುವೇ ಪ್ರೇಕ್ಷಕರು ಕೋಪ ಹಾಗೂ ಬೇಸರಗೊಳ್ಳಲು ಕಾರಣವಾಗಿದ್ದು ಒಂದು ಗಂಟೆಗಳ ಕಾಲ ಪ್ರಸಾರ ಮಾಡಿ ಎಂದು ಸಾಮಾಜಿಕಾ ಜಾಲಾತಾಣಗಳಲ್ಲಿ ವಾಹಿನಿಯವರಿಗೆ ಕೇಳಿಕೊಳ್ಳುತ್ತಿದ್ದಾರೆ.

ಇನ್ನು ಪ್ರೇಕ್ಷಕರೊಬ್ಬರು ವಾಹಿನಿಯ ವಿರುದ್ಧ ಹೀಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು ‘ಪಾತಾಳಕ್ಕೆ ಬಿದ್ದಿದ್ದ ನಿಮ್ಮ TRP ಯನ್ನ ಮತ್ತೆ ಮೇಲಕ್ಕೆ ಎತ್ತಿದ್ದು.. ಇದೆ ಮಹಾಭಾರತ..ಅದನ್ನ ಉಳಿಸಿಕೊಳ್ಳಿ ಅತೀ ಬುದ್ಧಿವಂತಿಕೆ ಉಪಯೋಗಿಸಿ ಪ್ರೇಕ್ಷಕ ಪ್ರಭುವಿನ ಮನಸ್ಸಿಗೆ ನೋಯಿಸಿದ್ರೆ..ಮತ್ತೆ ಅದೇ ಪರಿಸ್ಥಿತಿ ಬರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಸಾವಿರಾರು ಪ್ರೇಕ್ಷಕರು ಒಡನು ಗಂಟೆ ಪ್ರಸಾರ ಮಾಡಿ ಎಂದು ವಾಹಿನಿಯವರ ಬಳಿ ಕೇಳಿಕೊಳ್ಳುತ್ತಿದ್ದಾರೆ.