ಭಾಷಾ ನೀತಿ ವಿರುದ್ಧದ ಆಕ್ರೋಶಕ್ಕೆ ಧ್ವನಿಗೂಡಿಸಿದ ನಿಖಿಲ್ ಹೇಳಿದ್ದೇನು ಗೊತ್ತಾ ?

Advertisements

ಸ್ಯಾಂಡಲ್ವುಡ್ ಯುವರಾಜ ನಟ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಮತ್ತೆ ಸಕ್ರೀಯ ರಾಜಕಾರಣಕ್ಕೆ ಮರಳುತ್ತಿದ್ದಾರೆಯೇ.?ಹೌದು ಹೀಗೊಂದು ಅನುಮಾನ ಕಾಡಲು ಕಾರಣವೂ ಇದೆ. ಲಾಕ್ ಡೌನ್ ವೇಳೆ ತಮ್ಮ ಪತ್ನಿ ರೇವತಿಯವರೊಂದಿಗೆ ಕಾಲ ಕಳೆಯುತ್ತಿದ್ದ ನಿಖಿಲ್ ಈಗ ಮತ್ತೆ ರಾಜಕೀಯಕ್ಕೆ ಮರಳುತ್ತಿರುವ ಸೂಚನೆ ಕೊಟ್ಟಿದ್ದಾರೆ. ಹೌದು, ದಕ್ಷಿಣ ಭಾರತದ ರಾಜ್ಯಗಳ ಮೇಲೆ ಆಗುತ್ತಿರುವ ಹಿಂದಿ ಹೇರಿಕೆ ವಿರುದ್ಧ ಹಲವಾರು ವರ್ಷಗಳಿಂದ ಆ’ಕ್ರೋಶ ಪ್ರ’ತಿಭಟನೆಗಳು ನಡೆಯುತ್ತಲೇ ಇವೆ. ಹೌದು, ಈಗ ಹಿಂದಿ ಹೇರಿಕೆಯ ವಿರುದ್ಧ ರಾಜಕಾರಣಿ ನಿಖಿಲ್ ಕೂಡ ಧ್ವನಿಗುಡಿಸಿದ್ದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ.

‘ಹಲವು ದಶಕಗಳಿಂದ ಕರ್ನಾಟಕದ ಪಠ್ಯಕ್ರಮದಲ್ಲಿ ಹಿಂದಿ ವಿಷಯವನ್ನು ಕಡ್ಡಾಯವಾಗಿ ಕಲಿಯಲೇಬೇಕೆನ್ನುವ ನಿಯಮವಿದೆ. ಒಂದು ವಿಷಯವಾಗಿ ಕಡ್ಡಾಯವಾಗಿ ಹಿಂದಿಯನ್ನು ಕಲಿಯಲೇಬೇಕೆನ್ನುವ ನಿಯಮ ಹಿಂದಿ ಹೇರಿಕೆಯಲ್ಲದೆ ಮತ್ತೇನು.? ಕರ್ನಾಟಕ ಪಠ್ಯದಲ್ಲಿ ಹಿಂದಿ ಸೇರಿಸಿರುವುದು ಹಿಂದಿ ಹೇರಿಕೆಯ ಮಹಾ ಹುನ್ನಾರ..ಪಠ್ಯಕ್ರಮದಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಿರುವುದು ಶಾಲಾ ಮಕ್ಕಳಿಗೆ ಅನಗತ್ಯ ಹೊರೆಯಾಗಿದೆ. ಹಿಂದಿ ಕಲಿಕೆಗೆ ಮೀಸಲಿಡುವ ಸಮಯವನ್ನು ಜೀವನ ಕೌಶಲ್ಯಗಳನ್ನು ಕಲಿಯಲು ಉಪಯೋಗಿಸಿಕೊಳ್ಳಬಹುದು.

ಇಂಗ್ಲಿಷ್ ಅನ್ನು ಇಡೀ ಜಗತ್ತು ಸಂಪರ್ಕ ಭಾಷೆಯಾಗಿ ಒಪ್ಪಿರುವಾಗ, ಮತ್ತೊಂದು ಸಂಪರ್ಕ ಭಾಷೆಯಾಗಿ ಹಿಂದಿಯ ಅವಶ್ಯಕತೆಯಿಲ್ಲ. ಈ ನೀತಿಯನ್ನು ಕನ್ನಡಿಗರು ಇಷ್ಟು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವುದೇ ದುರ್ದೈವ. ಹಿಂದಿ ಹೇರಿಕೆಯ ವಿರುದ್ಧ ಜ್ವಾಲೆ ಎದ್ದಿರುವ ಇದೇ ಸಂದರ್ಭದಲ್ಲಿ ಈ ಹುನ್ನಾರ ಕೊನೆಗಾಣಲಿ ಎಂದು ಆಶಿಸುತ್ತೇನೆ.

Advertisements

ಈ ನಮ್ಮ ಹೋರಾಟಕ್ಕೆ ಯಶಸ್ಸು ಸಿಗುವವರೆಗೂ ನಾನು ನಿಮ್ಮ ಜೊತೆಯಲ್ಲಿ ನಿಲ್ಲುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹಿಂದಿ ಹೇರಿಕೆಯ ವಿರುದ್ಧ ಬರೆದುಕೊಂಡಿದ್ದು ನಮಗೆ ಹೊಸದಾದ ಕಾಯ್ದೆ ಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244