ಧೃತರಾಷ್ಟ್ರನಾಗಿ ಅದ್ಭುತವಾಗಿ ನಟಿಸಿರುವ ಈ ನಟ ಕನ್ನಡದ ಚಿತ್ರಗಳಲ್ಲೂ ಅಬ್ಬರಿಸಿದ್ದಾನೆ ! ಯಾರು ಗೊತ್ತಾ ?

Advertisements

ನಮಸ್ತೇ ಸ್ನೇಹಿತರೆ, ಕನ್ನಡ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಧಾರವಾಹಿ ಅದ್ಭುತವಾಗಿ ಮೂಡಿಬರುತ್ತಿದೆ. ಪ್ರತಿಯೊಂದು ಪಾತ್ರಗಳನ್ನ ತುಂಬಾ ವಿವೇಚನೆಯಿಂದ ಆಯ್ಕೆ ಮಾಡಲಾಗಿದೆ. ನಟರೂ ಕೂಡ ಅದ್ಭುತವಾಗಿ ನಟಿಸಿದ್ದಾರೆ. ಮಹಾಭಾರತದ ಯುದ್ಧಕ್ಕೆ ಮಹಾರಾಜ ಧೃತರಾಷ್ಟ್ರ ಕೂಡ ಕಾರಣರಾಗಿದ್ದಾರೆ ಎಂದರೆ ತಪ್ಪಾಗೊದಿಲ್ಲ. ಪುತ್ರ ದುರ್ಯೋಧನನ ಮೇಲಿನ ಕುರುಡು ಪ್ರೀತಿಯಿಂದಾಗಿ ಮಗ ಮಾಡಿದ ಎಲ್ಲಾ ಅಧರ್ಮಕ್ಕೂ ಸಪೋರ್ಟ್ ಆಗಿ ನಿಲ್ಲುತ್ತಾನೆ ಧೃತರಾಷ್ಟ್ರ. ಇನ್ನು ಈ ಪಾತ್ರವನ್ನ ತುಂಬಾ ಅಚ್ಚುಕಟ್ಟಾಗಿ ಅದ್ಭುತವಾಗಿ ನಿರ್ವಹಿಸಿದವರು ಕನ್ನಡ ಚಿತ್ರಗಳಲ್ಲಿ ನಟಿಸಿದ ನಟ ಠಾಕೂರ್ ಅನೂಪ್ ಸಿಂಗ್.

Advertisements

ಹೌದು, ಮಹಾಭಾರತದ ಧೃತರಾಷ್ಟ್ರ ಪಾತ್ರದ ಮೂಲಕ ಮನೆಮಾತಾದ ಅನೂಪ್ ಸಿಂಗ್ ರೋಗ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ಖಡಕ್ ವಿಲನ್ ಆಗಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಉದ್ಘರ್ಷ ಚಿತ್ರದಲ್ಲಿ ನಾಯಕ ನಟನಾಗಿಯೂ ನಟಿಸಿದ್ದಾರೆ. ತೆಲುಗು ತಮಿಳಿನ ಸ್ಟಾರ್ ನಟರ ಚಿತ್ರಗಳಲ್ಲೂ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ.

ಇನ್ನು ನಟ ಠಾಕೂರ್ ಅನೂಪ್ ಸಿಂಗ್ ಸ್ವತಃ ಬಾಡಿ ಬಿಲ್ಡರ್ ಆಗಿದ್ದು ೨೦೧೫ರಲ್ಲಿ ಬ್ಯಾಂಕಾಕ್ ನಲ್ಲಿ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲ್ ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲದೆ ಬಹುಮುಖ ಪ್ರತಿಭೆಯಾಗಿರುವ ಅನೂಪ್ ಸಿಂಗ್ ಸಿಂಗರ್ ಜೊತೆಗೆ ಪೈಲೆಟ್ ಕೂಡ ಹೌದು.