ಕೆಜಿಎಫ್ ಚಿತ್ರದಿಂದ ಹೊರಹೋದ್ರಾ ಅನಂತ್ ನಾಗ್ ! KGF 2ಗೆ ಎಂಟ್ರಿ ಕೊಟ್ಟ ಪ್ರಕಾಶ್ ರಾಜ್ ?

Advertisements

ಕನ್ನಡ ಚಿತ್ರಗಳೆಂದರೆ ಮೂಗುಮುರಿಯುತ್ತಿದ್ದ ಪರ ಭಾಷಿಕರನ್ನ ಸ್ಯಾಂಡಲ್ವುಡ್ ಕಡೆ ನೋಡುವಂತೆ ಮಾಡಿದ್ದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ. ಕನ್ನಡ ಚಿತ್ರರಂಗದಲ್ಲಿ ಇಂದೆಂದೂ ಮಾಡದ ದಾಖಲೆಗಳನ್ನ ಮಾಡಿತು ಈ ಚಿತ್ರ. ಇನ್ನು ಈಗ ಇಡೀ ಭಾರತೀಯ ಚಿತ್ರರಂಗ ಕೆಜಿಎಫ್ ಭಾಗ ೨ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದೆ. ಇನ್ನು ಈಗಾಗಲೇ ಮತ್ತೆ ಚಿತ್ರೀಕರಣ ಆರಂಭವಾಗಿದ್ದು ಇದರ ಬಗ್ಗೆ ನಟ ಪ್ರಕಾಶ್ ರಾಜ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಮಾಹಿತಿ ನೀಡಿದ್ದಾರೆ.

ಇದೇನಪ್ಪಾ ಕೆಜಿಎಫ್ ಸಿನಿಮಾದಲ್ಲಿ ಪ್ರಕಾಶ್ ರಾಜ್ ಹೇಗೆ ಬಂದರು ಎಂಬುದರ ಬಗ್ಗೆ ನಿಮಗೆ ಅಚ್ಚರಿಯಾಗುತ್ತಿರುವುದಲ್ಲವೇ..ಹೌದು, ಕೆಜಿಎಫ್ ಭಾಗ ಎರಡರಲ್ಲಿ ಪ್ರಕಾಶ್ ರಾಜ್ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್ ಚಿತ್ರದ ಚಿತ್ರೀಕರಣದ ಫೋಟೋಗಳನ್ನ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು ಬ್ಯಾಕ್ ಟೂ ವರ್ಕ್ ಎಂದು ಬರೆದುಕೊಂಡಿದ್ದಾರೆ. ಇನ್ನು ಇದೇ ದೃಶ್ಯದಲ್ಲಿ ನಟಿ ಮಾಳವಿಕಾ ಕೂಡ ಇದ್ದಾರೆ.

Advertisements

ಆದರೆ ಪ್ರಕಾಶ್ ರಾಜ್ ಮಾಡುತ್ತಿರುವ ಪಾತ್ರ ಕೆಜಿಎಫ್ ಭಾಗ ಒಂದರಲ್ಲಿ ಮಾಡಿದ್ದ ಹಿರಿಯ ನಟ ಅನಂತ್ ನಾಗ್ ಅವರ ಪಾತ್ರಕ್ಕೆ ಹೋಲಿಕೆಯಾಗಿದ್ದು ಕುತೂಹಲ ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಆ’ಕ್ರೋಶ ಕೂಡ ವ್ಯಕ್ತವಾವಾಗಿದೆ. ಅನಂತ್ ನಾಗ್ ರವರು ಮಾಡಿದ್ದ ಆನಂದ್ ಇಂಗಳಿಗಿ ಪಾತ್ರ ಬಾರೀ ಫೇಮಸ್ ಆಗಿತ್ತು. ಅನಂತ್ ನಾಗ್ ರವರು ಮಾತನಾಡುತ್ತಿದ್ದ ಆ ಮಾತಿನ ಶೈಲಿ ಎಲ್ಲರಿಗೂ ಇಷ್ಟವಾಗಿತ್ತು. ಇನ್ನು ಇದೇ ಪಾತ್ರದಲ್ಲಿ ಪ್ರಕಾಶ್ ರಾಜ್ ಕಾಣಿಸಿಕೊಳ್ಳುತ್ತಿದ್ದಾರೆಯೇ ಎಂಬ ಕುತೂಹಲ ಕಾಡುತ್ತಿದ್ದು ಹಿರಿಯ ನಟ ಅನಂತ್ ನಾಗ್ ರವರು ಕೆಜಿಎಫ್ ಚಿತ್ರದಿಂದ ಹೊರ ಹೋದ್ರಾ ಎಂಬ ಅನುಮಾನಗಳು ಕಾಡುತ್ತಿವೆ.

ಕೆಜಿಎಫ್ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಎಂದರೆ ಅನಂತ್ ನಾಗ್ ರವರ ಧ್ವನಿ ಎಂದರೆ ತಪ್ಪಾಗೋದಿಲ್ಲ. ಆದರೆ ಇಂತಹ ತೂಕದ ಪಾತ್ರಕ್ಕೆ ಪ್ರಕಾಶ್ ರಾಜ್ ಏಕೆ ಕರೆತಂದರು ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು ಕೆಜಿಎಫ್ 2 ಸಿನಿಮಾವನ್ನ ನೋಡಬೇಡಿ ಎಂಬ ಅಭಿಯಾನವನ್ನ ಕೂಡ ಮಾಡುತ್ತಿದ್ದಾರೆ. ಇನ್ನು ಇದರ ಬಗ್ಗೆ ಚಿತ್ರತಂಡ ಮಾತ್ರ ಸ್ಪಷ್ಟನೆ ಕೊಡಬೇಕಾಗಿದೆ.