ಇತ್ತೀಚೆಗಷ್ಟೇ ಹುಟ್ಟಿದ ಆನೆ ಮರಿಗೆ ಸುಧಾ ಮೂರ್ತಿಯವರ ಹೆಸರು

News

ಐಟಿ ದಿಗ್ಗಜ ಇನ್ಫೋಸಿಸ್ ಫೌಂಡೇಶನ್ ನ ಅಧ್ಯಕ್ಷೆ ಆಗಿರುವ ಸುಧಾಮೂರ್ತಿಯವರನ್ನ ಕರುನಾಡಿನ ಅಮ್ಮ ಎಂದರೆ ತಪ್ಪಾಗೊದಿಲ್ಲ. ಇನ್ಫೋಸಿಸ್ ಫೌಂಡೇಶನ್ ಕಂಪನಿಯು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಇದರ ಜೊತೆಗೆ ವನ್ಯಜೀವಿ ಸಂರಕ್ಷಣೆಗಾಗಿ ಇನ್ಫೋಸಿಸ್ ಫೌಂಡೇಶನ್ ಸುಧಾಮೂರ್ತಿಯವರು ಹಲವಾರು ಕೊಡುಗೆಗಳನ್ನ ನೀಡಿದ್ದಾರೆ. ಸದಾ ಸಂಕಷ್ಟದಲ್ಲಿರುವ ಜನರ ನೆರವಿಗೆ ನಿಂತಿರುವ ಸುಧಾ ಮೂರ್ತಿಯವರಿಗೆ ಈಗ ಮತ್ತೊಂದು ಗೌರವ ಸಿಕ್ಕಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸುಧಾಮೂರ್ತಿಯವರು ನೀಡಿರುವ ಕೊಡುಗೆಗಳನ್ನ ಗೌರವಿಸುವ ಹಾಗೂ ಗುರುತಿಸುವ ಸಲುವಾಗಿ ಅಲ್ಲಿನ ಆನೆಮರಿಗೆ ಸುಧಾ ಅವರ ಹೆಸರಿಡಲು ಆಡಳಿತ ಮಂಡಳಿ ತೀರ್ಮಾನ ಮಾಡಿದೆ. ಇನ್ನು ಈ ಪ್ರಸ್ತಾಪಕ್ಕೆ ಸುಧಾಮೂರ್ತಿಯವರು ಕೂಡ ಸಮ್ಮತಿ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ೪೫ ವರ್ಷದ ಸುವರ್ಣ ಎಂಬ ಆನೆ ಆಗಸ್ಟ್ ೧೭ಕ್ಕೆ ಹೆಣ್ಣು ಆನೆ ಮರಿಗೆ ಜನ್ಮ ನೀಡಿತ್ತು.

ಇನ್ನು ಸುಧಾಮೂರ್ತಿಯವರು ಆಗಸ್ಟ್ ೧೯ರಂದು ತಮ್ಮ ಹುಟ್ಟಿದ ಹಬ್ಬವನ್ನ ಆಚರಿಸಿಕೊಂಡಿದ್ದರು. ಈ ಕಾರಣದಿಂದಾಗಿಯೇ ಆನೆಮರಿಗೆ ಸುಧಾಮೂರ್ತಿಯವರ ಹೆಸರಿಡಲು ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ಇನ್ನು ಈಗಾಗಲೇ ಬನ್ನೇರುಘಟ್ಟ ಉದ್ಯಾನವನದಲ್ಲಿ ಇನ್ಫೋಸಿಸ್ ಫೌಂಡೇಶನ್ ಸಹಯೋಗದೊಂದಿಗೆ ಅನೇಕ ಕಾರ್ಯಗಳನ್ನ ಕೈಗೊಳ್ಳಲಾಗಿದೆ. ಈ ನಾಡಿಗಾಗಿ ಸುಧಾ ಮೂರ್ತಿಯವರ ಸಾಮಾಜಿಕ ಕಾರ್ಯಗಳು ಸದಾ ಹೀಗೆ ಸಾಗಲಿ ಎಂದು ಆ ದೇವರಲ್ಲಿ ನಾವು ಕೇಳಿಕೊಳ್ಳೋಣ..