ಸ್ನೇಹಿತರೆ ನಾವು ಜಗತ್ತಿನಲ್ಲಿ ಪ್ರತೀದಿನ ಹಲವಾರು ವಿಚಿತ್ರ ಸುದ್ದಿಗಳನ್ನ ಕೇಳಿರುತ್ತೇವೆ ನೋಡಿರುತ್ತೇವೆ. ಸಾಮಾನ್ಯವಾಗಿ ಸ್ವಲ್ಪ ತಲೆ ಕೂದಲು ಹೆಚ್ಚಾದರೆ ಸಾಕು ನೇರವಾಗಿ ಕಟಿಂಗ್ ಶಾಪ್ ಗೆ ಹೋಗಿ ಕಟ್ಟಿಂಗ್ ಮಾಡಿಸಿಬಿಡುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ ೮೦ ವರ್ಷಗಳಿಂದ ತನ್ನ ತಲೆಕೂದಲನ್ನ ಕಟ್ ಮಾಡಿಸದೇ ಹಾಗೆ ಬೆಳೆಯಲು ಬಿಟ್ಟಿದ್ದಾನೆ.
ಹೌದು ಈ ವಿಚಿತ್ರ ವ್ಯಕ್ತಿ ಇರುವುದು ವಿಯೆಟ್ನಾಮ್ ದೇಶದಲ್ಲಿ. ಈಗ ಈತನಿಗೆ 92 ವರ್ಷ. ಈತನ ಹೆಸರು ಗುಯೆನ್ ವಾನ್ ಚಿಯೆನ್ ಎಂದು. ಒಂದು ತಿಂಗಳು ಎರಡು ತಿಂಗಳಲ್ಲಾ..ಬರೋಬ್ಬರಿ 80 ವರ್ಷದಿಂದ ಕಟ್ಟಿಂಗ್ ಮಾಡಿಸದೇ ಇರುವ ಈತ ಈಗ ಬಾರೀ ಸುದ್ದಿಯಲ್ಲಿದ್ದಾನೆ. ಈತ ಇದಕ್ಕೆ ಕೊಡುವ ಕಾರಣ ಪ್ರಕೃತಿ ದತ್ತವಾಗಿ ಸಿಗುವುದೆಲ್ಲವನ್ನ ಹಾಗೆಯೆ ಬಿಟ್ಟುಬಿಡಬೇಕಂತೆ.

ತಾನು ಮೂರನೇ ತರಗತಿ ಓದುತ್ತಿರುವಾಗ ಕೂದಲನ್ನ ಕೊನೆಯ ಬಾರಿ ಕಟ್ ಮಾಡಿಸಿದ್ದು ಎಂದು ಹೇಳುವ ಈತ ಬರೋಬ್ಬರಿ ೫ ಮೀಟರ್ ಉದ್ದದ ಕೂದಲನ್ನ ಹೊಂದಿದ್ದಾರೆ. ಈತ ತನ್ನ ಕೂದಲನ್ನ ಬಾಚುವುದೇ ಇಲ್ಲವಂತೆ. ಕೂದಲನ್ನ ಚೆನ್ನಾಗಿ ಒಳಗಿಸಿ ಸ್ವಚ್ಛವಾಗಿಡುವುದರ ಜೊತೆಗೆ ಸ್ಕಾರ್ಫ್ ನಿಂದ ಮುಚ್ಚಿ ಕೂದಲನ್ನ ಪೋಷಣೆ ಮಾಡುತ್ತಾರಂತೆ ಚಿಯಾನ್.