ಹಣಬೆ ತಿನ್ನೋದ್ರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ಅಂತ ಗೊತ್ತಾದ್ರೆ ಈಗಿನಿಂದಲೇ ತಿನ್ನೋಕೆ ಶುರುಮಾಡ್ತೀರಾ

Kannada News
Advertisements

ಇಂದಿನ ಬದಲಾದ ಜೀವನ ಶೈಲಿ ಆಹಾರದ ಕ್ರಮದಿಂದಾಗಿ ನಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತಲೇ ಇರುತ್ತವೆ. ಆದರೆ ಪ್ರಕೃತಿ ದಟ್ಟವಾಗಿ ಸಿಗುವ ಪದಾರ್ಥಗಳನ್ನ ನಾವು ಸೇವಿಸುವುದರಿಂದ ದೇಹಕ್ಕೆ ಬೇಕಾದ ಹಲವಾರು ಪ್ರೊಟೀನ್ ಗಳು ನಮ್ಮ ದೇಹಕ್ಕೆ ಸಿಗುತ್ತವೆ. ಅದರಲ್ಲಿ ಹಣಬೆ ಕೂಡ ಒಂದು. ಹಣಬೆಗಳು ಹೆಚ್ಚಾಗಿ ಮಳೆಗಾಲದ ಸಮಯದಲ್ಲಿ ಹೊಲಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅಣಬೆಗಳನ್ನ ತಿನ್ನುವುದರಿಂದ ದೇಹದಲ್ಲಿ ನಿರೋಧಕ ಶಕ್ತಿಯನ್ನ ವೃದ್ಧಿ ಮಾಡಿ ಯಾವುದೇ ಕಾಯಿಲೆಗಳು ಬರದಂತೆ ತಡೆಯುತ್ತದೆ.

ಅಣಬೆಗಳು ಸೂರ್ಯನ ಬೆಳಕಿನಲ್ಲಿ ಹೆಚ್ಚಾಗಿ ಬೆಳೆಯುವುದರಿಂದ ಇದರಲ್ಲಿ ಪ್ರೊಟೀನ್ ಡಿ ಹೇರಳವಾಗಿರುತ್ತದೆ. ಹಾಗಾಗಿ ಇದನ್ನು ದೇಹಕ್ಕೆ ಸೇವಿಸುವುದರಿಂದ ದೇಹದಲ್ಲಿ ಪ್ರೊಟೀನ್ ಡಿ ಅಂಶ ಕೂಡ ಹೆಚ್ಚಾಗುತ್ತದೆ. ಇನ್ನು ಅಣಬೆಗಳಲ್ಲಿ ಹೇರಳವಾಗಿರುವ ಆಂಟಿ ಆಕ್ಸಿಡೆಂಟ್ಗಳು ಕ್ಯಾನ್ಸರ್ ಸೇರಿದಂತೆ ಹೃದ್ರೋಗದಂತಹ ಕಾಯಿಲೆಗಳು ಬೆಳವಣಿಗೆಯಾಗುವುದನ್ನ ತಡೆಯುತ್ತದೆ.

Advertisements

ಮನುಷ್ಯನ ದೇಹಕ್ಕೆ ಕಬ್ಬಿಣಾಂಶ ಬಹಳ ಅತ್ಯವಶ್ಯಕ. ಇನ್ನು ಇದು ಹಣಬೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಾಗಾಗಿ ನಮ್ಮ ದೇಹದ ಹಿಮೋಗ್ಲೋಬಿನ್ ಪ್ರಮಾಣವನ್ನ ಹೆಚ್ಚಿಸುವುದರ ಜೊತೆಗೆ ಆಮ್ಲಜನಕ ದೇಹದ ಎಲ್ಲಾ ಭಾಗಗಳಿಗೂ ಹರಡಲು ಅಣಬೆಗಳು ಕಾರಣವಾಗುತ್ತವೆ. ಪ್ರೊಟೀನ್ ಗಳ ಆಗರವಾಗಿರುವ ಹಣಬೆಗಳಲ್ಲಿ ಪ್ರೊಟೀನ್ ಬಿ ಕೂಡ ಹೇರಳವಾಗಿದೆ. ಇದು ನಮ್ಮ ಚಯಾಪಚಯ ಕ್ರಿಯೆಯನ್ನ ಉತ್ತಮವಾಗಿಸುವುದರ ಜೊತೆಗೆ ದೇಹಕ್ಕೆ ಶಕ್ತಿಯನ್ನ ನೀಡುತ್ತದೆ. ಹೀಗೆ ನಮ್ಮ ದೇಹ ಸುಗುಮವಾಗಿ ಕೆಲಸ ಮಾಡಲು ಬೇಕಾದ ಹಲವಾರು ಪ್ರೊಟೀನ್ ಗಳು ಹಣಬೆಗಳಲಿದ್ದು ಇಂದಿನಿಂದಲೇ ತಿನ್ನಲು ಶುರು ಮಾಡಿ..