ಸುರೇಶ್ ರೈನಾ ಐಪಿಎಲ್ ಆಡದೆ ಭಾರತಕ್ಕೆ ಹಿಂತಿರುಗಲು ಆ ಹೋಟೆಲ್ ರೂಮ್ ಕಾರಣ ?

Sports
Advertisements

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಐಪಿಎಲ್ ಲೀಗ್ ಆಡಲು ದುಬೈಗೆ ತೆರಳಿದ್ದು ಏಕಾಏಕಿ ಮತ್ತೆ ಭಾರತಕ್ಕೆ ವಾಪಾಸ್ ಆಗಿದ್ದು ಚರ್ಚೆಗೆ ಕಾರಣವಾಗಿತ್ತು. ಕೌಟಂಬಿಕ ಕಾರಣಗಳಿಂದಾಗಿ ಸುರೇಶ ರೈನಾರವರು ಈ ಐಪಿಎಲ್ ಟೂರ್ನಿಯಿಂದ ಹೊರಹೋಗಿದ್ದಾರೆ ಎಂದು ಸಿಎಸ್‍ಕೆ ಮ್ಯಾನೇಜ್ಮೆಂಟ್ ಹೇಳಿತ್ತು. ಆದರೆ ಅಸಲಿ ಕಾರಣ ಬೇರೆಯೇ ಇದೆ..

ಹೌದು, ಸುರೇಶ್ ರೈನಾ ೨೦೨೦ರ ಐಪಿಎಲ್ ಟೂರ್ನಿಯಲ್ಲಿ ಆಡದೆ ದುಬೈನಿಂದ ಹಿಂದಿರುಗಿರುವುದು ಕೌಟಂಬಿಕ ಕಾರಣಕ್ಕಲ್ಲ. ಬದಲಿಗೆ ಹೋಟೆಲ್ ರೂಮ್ ನ ವಿಚಾರವಾಗಿ ಸಿಎಸ್‍ಕೆ ತಂಡದ ಮ್ಯಾನೇಜ್ಮೆಂಟ್ ನೊಂದಿಗೆ ರೈನಾರವರಿಗೆ ಮನಸ್ತಾಪ ಉಂಟಾಗಿದ್ದು ಅವರು ಟೂರ್ನಿ ಬಿಟ್ಟು ವಾಪಾಸ್ ಬರಲು ಕಾರಣ ಎಂದು ಹೇಳಲಾಗಿದೆ. ಸಿಎಸ್‍ಕೆ ಟೀಮ್ ನ ಕ್ಯಾಪ್ಟನ್ ಆಗಿರುವ ಮಹೇಂದ್ರ ಸಿಂಗ್ ಧೋನಿಯವರಿಗೆ ನೀಡಲಾಗಿದ್ದ ಸುಸ್ಸಜಿತ ಹೋಟೆಲ್ ರೂಮ್ ನಂತಯೇ ನಮಗೂ ರೂಮ್ ನೀಡಬೇಕು ಎಂದು ಮ್ಯಾನೇಜ್ಮೆಂಟ್ ಗೆ ಕೇಳಿದ್ದರು.

Advertisements

ಸೋಂಕಿನ ಭಯದ ಹಾಗೂ ಕುಟುಂಬದ ಸುರಕ್ಷತೆಗೋಸ್ಕರ ರೈನಾ ಸುಸ್ಸಜಿತ ಹೋಟೆಲ್ ರೂಮ್ ಕೊಡಿ ಎಂದು ಕೇಳಿದ್ದರು. ಆದರೆ ಇದಕ್ಕೆ ಮ್ಯಾನೇಜ್ಮೆಂಟ್ ಸ್ಪಂಧಿಸದಿರುವುದೇ ರೈನಾ ಬೇಸರಕ್ಕೆ ಕಾರಣವಾಗಿದ್ದು ಅವರು ಹಿಂತಿರುಗಿದ್ದಾರೆ ಎಂದು ಹೇಳಲಾಗಿದೆ. ಧೋನಿ ಸಹ ಇದರ ಬಗ್ಗೆ ರೈನಾ ಅವರೊಂದಿಗೆ ಮಾತನಾಡಿ ಮನವರಿಕೆ ಮಾಡಲಿ ಪ್ರಯತ್ನಿಸಿದ್ದು ಅದು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ. ಇದರ ನಡುವೆಯೇ ಸಿಎಸ್‍ಕೆ ತಂಡದ ಮಾಲೀಕರಾಗಿರುವ ಶ್ರೀನಿವಾಸನ್ ಅವರು ರೈನಾ ಕುರಿತಂತೆ ಆಡಿರುವ ಮಾತುಗಳು ಹಲವು ಅನುಮಾನಗಳಿಗೆ ಕಾರಣವಾಗಿದೆ ಕ್ರಿಕೆಟ್ ಅಭಿಮಾನಿಗಳಲ್ಲಿ ಹಲವಾರು ಪ್ರಶ್ನೆಗಳನ್ನ ಹುಟ್ಟುಹಾಕಿದೆ.