ನಮಸ್ತೇ ಸ್ನೇಹಿತರೇ, ಸಾಹಸಮಯ ಸನ್ನಿವೇಶಗಳನ್ನ ಅತೀ ರೋಚಕವಾಗಿ ಚಿತ್ರೀಕರಿಸುವ ಜಗತ್ತಿನ ಪ್ರಸಿದ್ಧ ಟಿವಿ ಚಾನೆಲ್ ಆದ ಡಿಸ್ಕವರಿಯ ಪ್ರಸಿದ್ಧ ಕಾರ್ಯಕ್ರಮವಾದ ಇಂಟು ದಿ ವೈಲ್ಡ್ಸ್ ವಿಥ್ ಬೇರ್ ಗ್ರಿಲ್ಸ್ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸೂಪರ್ ಸ್ಟಾರ್ ರಜನೀಕಾಂತ್ ಕೂಡ ಬೇರ್ ಗ್ರಿಲ್ಸ್ ಜೊತೆ ಕಾಣಿಸಿಕೊಂಡಿದ್ದರು. ಈಗ ಬಾಲಿವುಡ್ ನ ಕಿಲಾಡಿಯೊಂಕ ಕಿಲಾಡಿ ನಟ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ.
ಇನ್ನು ಈಗಾಗಲೇ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣವಾಗಿದ್ದು ಪ್ರೊಮೋ ಕೂಡ ಬಿಡುಗಡೆಯಾಗಿದೆ. ಇನ್ನು ಈ ದೃಶ್ಯಗಳಲ್ಲಿ ನಟ ಅಕ್ಷಯ್ ಕುಮಾರ್ ಬೇರ್ ಗ್ರಿಲ್ಸ್ ಜೊತೆ ಭಾಗವಹಿಸಿದ್ದಾರೆ. ಇನ್ನು ನಟ ಅಕ್ಷಯ್ ಪ್ರೋಮೋದಲ್ಲಿ ಆನೆ ಲದ್ದಿಯ ಚಹಾ ಕುಡಿಯುತ್ತಿರುವುದು ವಿಡಿಯೋದಲ್ಲಿ ಮೂಡಿಬಂದಿದೆ. ಇನ್ನು ಅಕ್ಷಯ್ ಹಾಗೂ ಬೇರ್ ಗ್ರಿಲ್ಸ್ ಇಬ್ಬರು ಸೇರಿ ಕಾಡಿನಲ್ಲಿ ಸಾಹಸಮಯ ದೃಶ್ಯಗಳಲ್ಲಿ ಪಾಲ್ಗೊಂಡಿದ್ದು ರಿಯಲ್ ಸ್ಟಾರ್ ಎಂದರೆ ಅದು ಬೇರ್ ಗ್ರಿಲ್ಸ್ ಎಂದು ಅಕ್ಷಯ್ ಹೊಗಳಿದ್ದಾರೆ.

ಇನ್ನು ದೇಶದ ಅರೆಸೇನಾ ಪಡೆಗಳಿಗೋಸ್ಕರ ನಿಧಿ ಸಂಗ್ರಹ ಮಾಡುವ ಸರ್ಕಾರದ ಭಾರತ್ ಕೆ ವೀರ್ ಕಾರ್ಯಕ್ರಮದಲ್ಲಿ ನಟ ಅಕ್ಷಯ್ ಕುಮಾರ್ ಭಾಗವಹಿಸಿದ್ದು ಈಗಾಗಲೇ ಚಿತ್ರೀಕರಣವವಾಗಿರುವ ಈ ಕಾರ್ಯಕ್ರಮ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಸೆಪ್ಟೆಂಬರ್ ೧೪ರಂದು ಡಿಸ್ಕವರಿ ಟಿವಿಯಲ್ಲಿ ಪ್ರಸಾರವಾಗಲಿದೆ ಎಂದು ಹೇಳಲಾಗಿದೆ.