ಹೊಸ ಲುಕ್ ನಲ್ಲಿ ಫುಡ್ ಟ್ರಕ್ ನ್ನ ಮತ್ತೆ ರೀ ಓಪನ್ ಮಾಡಿದ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ

Entertainment

ನಮಸ್ತೇ ಸ್ನೇಹಿತರೇ, ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಸೋಂಕಿನ ಕಾರಣದಿಂದಾಗಿ ಇಷ್ಟು ದಿವಸ ಮುಚ್ಚಿದ್ದ ತಮ್ಮ ಫುಡ್ ಟ್ರಕ್ ನ್ನ ಹೊಸ ರೂಪದೊಂದಿಗೆ ಮತ್ತೆ ಪ್ರಾರಂಭಿಸಿದ್ದಾರೆ. ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಶೈನ್ ಸಿನಿಮಾಗಳಲ್ಲಿ ನಟಿಸಬೇಕೆಂಬ ಇಚ್ಛೆಯಿಂದ ಸೀರಿಯಲ್ ಗಳನ್ನ ಬಿಟ್ಟಿದ್ದರು. ಆದರೆ ಸಿನಿಮಾಗಳಲ್ಲಿ ಸರಿಯಾದ ಅವಕಾಶಗಳು ಸಿಗದೇ ಇದ್ದಾಗ ಗಲ್ಲಿ ಕಿಚನ್ ಹೆಸರಿನ ಫುಡ್ ಟ್ರಕ್ ವ್ಯಾಪಾರ ಸ್ಟಾರ್ಟ್ ಮಾಡಿ ಜೀವನ ನಡೆಸುತ್ತಿದ್ದರು.

ಇದೆ ವೇಳೆ ಅವರಿಗೆ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗುವ ಅವಕಾಶ ಒದಗಿಬಂತು. ಇನ್ನು ಈ ಸಮಯದಲ್ಲಿ ಅವರ ತಾಯಿ ಫುಡ್ ಟ್ರಕ್ ವ್ಯಾಪಾರವನ್ನ ನಿಭಾಯಿಸುತ್ತಿದ್ದರು. ಇನ್ನು ಬಿಗ್ ಬಾಸ್ ನಲ್ಲಿ ವಿನ್ನರ್ ಆಗಿ ಬಂದ ಶೈನ್ ಶೆಟ್ಟಿಗೆ ಅವರು ಕನಸು ಕಂಡಂತೆ ಸಿನಿಮಾ ಅವಕಾಶಗಳು ಕೂಡ ಹುಡುಕಿಕೊಂಡು ಬರುತ್ತಿವೆ. ಇನ್ನು ಸೋಂಕಿನ ಕಾರಣದಿಂದಾಗಿ ಜೀವನಾಧಾರಕ್ಕೆ ಶುರು ಮಾಡಿದ್ದ ಫುಡ್ ಟ್ರಕ್ ನ್ನ ಮುಚ್ಚಲಾಗಿತ್ತು.

ನಟ ರಿಷಬ್ ಶೆಟ್ಟಿ ಅವರ ಬಹು ನಿರೀಕ್ಷಿತ ಚಿತ್ರವಾದ ರುದ್ರಪ್ರಯಾಗದಲ್ಲಿ ನಟಿಸುತ್ತಿದ್ದಾರೆ ಶೈನ್ ಶೆಟ್ಟಿ. ಈಗ ತಮ್ಮ ಗಲ್ಲಿ ಕಿಚನ್ ಗೆ ಹೊಸ ರೂಪ ನೀಡಿರುವ ಶೈನ್ ಮತ್ತೆ ಪ್ರಾರಂಭಮಾಡಿದ್ದಾರೆ. ಇನ್ನು ಹಳೆಯ ಗಲ್ಲಿ ಕಿಚನ್ ಗಿಂದ ಇದು ದೊಡ್ಡದಾಗಿದ್ದು ನಟ ನಿರ್ದೇಶಕ ರಿಷಬ್ ಶೆಟ್ಟಿ ಉದ್ಘಾಟನೆ ಮಾಡಿದ್ದಾರೆ. ಈ ಸಂಭ್ರಮದಲ್ಲಿ ಬಿಗ್ ಬಾಸ್ ನಲ್ಲಿ ಪ್ರತಿ ಸ್ಪರ್ಧಿಗಳಾಗಿದ್ದ ಚಂದನಾ, ಚೈತ್ರ ವಾಸುದೇವನ್ ಹಾಗೂ ಚಂದನ್ ಆಚಾರ್ ಸೇರಿದಂತೆ ಶೈನ್ ಅವರು ಮಿತ್ರರು ಪಾಲ್ಗೊಂಡು ಶುಭ ಕೋರಿದ್ದಾರೆ.