ಸುರೇಶ್ ರೈನಾ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮತ್ತೊಬ್ಬ ಆಟಗಾರ ಔಟ್ ?

Sports
Advertisements

ಇತ್ತೀಚೆಗಷ್ಟೇ ಕ್ರಿಕೆಟ್ ಆಟಗಾರ ಸುರೇಶ್ ರೈನಾ ೨೦೨೦ರ ಐಪಿಎಲ್ ಟೂರ್ನಿ ಆಡದೇ ದುಬೈನಿಂದ ಹಿಂದಿರುಗಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಐಪಿಎಲ್ ಆಡುತ್ತಿದ್ದ ಸುರೇಶ ರೈನಾ ಸುಸಜ್ಜಿತ ಹೋಟೆಲ್ ರೂಮ್ ಕೊಡಲಿಲ್ಲ ಎಂದು ಸಿಎಸ್ ಕೆ ತಂಡದ ಮ್ಯಾನೇಜ್ಮೆಂಟ್ ಜೊತೆ ಮನಸ್ತಾಪ ಉಂಟಾಗಿದ್ದು ಭಾರತಕ್ಕೆ ಹಿಂತಿರುಗಿದ್ದರು. ಈಗ ಐಪಿಎಲ್ ತಂಡದ ಮತ್ತೊಬ್ಬ ಆಟಗಾರ 2020ರ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.

ಹೌದು, ಸ್ಪಿನ್ ಬೌಲರ್ ಹರಭಜನ್ ಸಿಂಗ್ ಅವರು ತಮ್ಮ ವೈಯುಕ್ತಿಕ ಕಾರಣಗಳಿಂದಾಗಿ ಈ ಸಲದ ಐಪಿಎಲ್ ಆವೃತ್ತಿಯಲ್ಲಿ ಭಾಗವಹಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಾಗಿರುವ ಹರಭಜನ್ ಸಿಂಗ್ ಕ್ರಿಕೆಟ್ ಆಡಲೆಂದು ದುಬೈಗೆ ಹೋಗಿರಲಿಲ್ಲ. ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ೨೦೨೦ರ ಐಪಿಎಲ್ ಟೂರ್ನಿಯಿಂದ ಹೊರಗುಳಿಯಲು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Advertisements

ಸುರೇಶ್ ರೈನಾ ಅವರ ಬಳಿಕ ೨೦೨೦ರ ಟೂರ್ನಿಯಿಂದ ಹೊರಗುಳಿಯುತ್ತಿರುವ ಎರಡನೇ ಆಟಗಾರ ಹರಭಜನ್ ಸಿಂಗ್ ಆಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ಕೆಲ ಆಟಗಾರರು ೧೪ ದಿನಗಳ ಕ್ವಾರಂಟೈನ್ ಗೆ ಒಳಗಾಗಿದ್ದರು.