ಕಣ್ಣೀರು ತರಿಸುವ ಈರುಳ್ಳಿಯಲ್ಲಿದೆ ನೀವು ನಂಬಲಾರದ ಹಲವಾರು ಪ್ರಯೋಜನಗಳು !

Kannada News

ಈರುಳ್ಳಿಯನ್ನ ಹಸಿಯಾಗಿ ಮತ್ತು ಬೇಯಿಸಿ ಎರಡೂ ರೀತಿಯೂ ದೇಹಕ್ಕೆ ಸೇವಿಸಬಹುದು. ಕೀಟಾಣುಗಳನ್ನ ನಾಶ ಮಾಡುವ ಶಕ್ತಿ ಹೊಂದಿರುವ ಈರುಳ್ಳಿಯಿಂದ ಕಣ್ಣು ಉರಿ, ತಲೆ ನೋವು, ಮೊದಲಾದವುಗಳು ಗುಣವಾಗುತ್ತವೆ. ಈರುಳ್ಳಿಯನ್ನ ಬೆಲ್ಲದ ಜೊತೆ ತಿನ್ನುವುದರಿಂದ ಸಣ್ಣಗೆ ಇರುವವರು ದಪ್ಪಗಾಗುತ್ತಾರೆ. ರಕ್ತ ಶುದ್ಧಿಕರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತೆ. ಕಿವಿ ಸೋರುತ್ತಿದ್ದರೆ ಅಥ್ವಾ ಕಿವಿ ನೋವು ಏನಾದರು ಇದ್ದರೆ ಬಿಳಿ ಈರುಳ್ಳಿ ರಸ ತೆಗೆದು ಸ್ವಲ್ಪ ಸ್ವಲ್ಪ ಹಾಕಿದರೆ ವಾಸಿಯಾಗುತ್ತೆ.

ಪ್ರತೀ ದಿನ ಊಟದ ಜೊತೆಗೆ ಈರುಳ್ಳಿ ತಿನ್ನುವುದರಿಂದ ಹೃದಯಕ್ಕೆ ಸಂಭಂದಿಸಿದ ಕಾಯಿಲೆಗಳು ಬರೋದಿಲ್ಲ. ಇನ್ನು ಜೇನುಹುಳಗಳು ಕಚ್ಚಿ ಗಾಯ ಮಾಡಿದಾಗ ಕೂಡಲೇ ಹಸಿ ಈರುಳ್ಳಿ ಹಚ್ಚುವುದರಿಂದ ನೋವು ಗುಣವಾಗುತ್ತೆ. ಈರುಳ್ಳಿ ರಸದೊಂದಿಗೆ ಹರಿಶಿನ ಮಿಕ್ಸ್ ಮಾಡಿ ಹಚ್ಚುವುದರಿಂದ ಇಸುಬು ಕಜ್ಜಿ ಮೊದಲಾದ ಚರ್ಮ ರೋಗಗಳು ವಾಸಿಯಾಗುತ್ತವೆ.

ಇನ್ನು ಹಲ್ಲು ನೋವಿನ ಕಾರಣದಿಂದಾಗಿ ಗಲ್ಲ ಹಾಗೂ ಕೆನ್ನೆ ಊದಿದ್ದರೆ ಆ ಭಾಗದಲ್ಲಿ ಈರುಳ್ಳಿ ರಸ ಹಾಕಿ ಉಜ್ಜುವುದರಿಂದ ಊಟ ಕಡಿಮೆಯಾಗುತ್ತೆ. ಈರುಳ್ಳಿಯಲ್ಲಿ ಅತೀ ಹೆಚ್ಚು ಕಬ್ಬಿಣದ ಅಂಶ ಇರುವ ಕಾರಣ ಕಾಮಾಲೆ, ಅಜೀರ್ಣದ ತೊಂದ್ರೆ ಸೇರಿದಂತೆ ಮೂಲವ್ಯಾಧಿ ರೋಗಗಳನ್ನ ಗುಣಪಡಿಸುವ ಶಕ್ತಿ ಹೊಂದಿದೆ. ಇನ್ನು ಕೆಮ್ಮು ಇರುವವರು ಕೆಂಡದ ಮೇಲೆ ಈರುಳ್ಳಿಯನ್ನ ಸುತ್ತು ತಿನ್ನುವುದರಿಂದ ಕೆಮ್ಮು ಗುಣವಾಗುತ್ತದೆ.