ಪರೀಕ್ಷೆ ಬರೆಯುವ ಸಲುವಾಗಿ ಬರೋಬ್ಬರಿ 75 ಕಿಮೀ ಸೈಕಲ್ ತುಳಿದ ತಂದೆ ಮಗ

News
Advertisements

ನಮಸ್ತೇ ಸ್ನೇಹಿತರೇ, ಒಂದು ಕಡೆ ಮಳೆ ಹೆಚ್ಚಾಗಿ ಬಿದ್ದಿರುವ ಕಾರಣದಿಂದ ಪ್ರವಾಹದ ಪರಿಸ್ಥಿತಿ ಮತ್ತೊಂದೆಡೆ ಸೋಂಕು.. ಶುರುವಾಗಿರುವ ನೀಟ್ ಪರೀಕ್ಷೆಗಳು. ಇನ್ನು ಈ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನ ಬರೆಯುವ ಸಲುವಾಗಿ ಕೋಲ್ಕತ್ತಾದ ೧೯ ವರ್ಷದ ಯುವಕನೋರ್ವ ತನ್ನ ತಂದೆಯ ಜೊತೆ ಬರೋಬ್ಬರಿ 75 ಕಿಮೀ ಸೈಕಲ್ ತುಳಿದಿದ್ದಾನೆ. ಹೌದು, ಹೀಗೆ ಸೈಕಲ್ ತುಳಿದು ಪರೀಕ್ಷಾ ಕೆಂದ್ರಕ್ಕೆ ಹೋದವನು ದಿಗಂತ್ ಮಂಡಲ್ ಎಂದು. ಇನ್ನು ಮಗನ ಜೊತೆ ಆತನ ತಂದೆ ಕೂಡ ಸಾತ್ ನೀಡಿದ್ದು 75 ಕಿಮೀಗಳ ದೂರ ತಂದೆ ಮಗ ಇಬ್ಬರು ಸೈಕಲ್ ಹೊಡೆದಿದ್ದಾರೆ.

ದಿಗಂತ್ ಅವರ ತಂದೆ ರಬಿ ಬಡಗಿಯ ಕೆಲಸ ಮಾಡುತ್ತಿದ್ದಾರೆ. ಇನ್ನು ಏನೇ ತೊಂದರೆಗಳಿದ್ದರೂ ಜಗ್ಗದ ದಿಗಂತ್ ಮತ್ತು ಆತನ ತಂದೆ ಎರಡು ಸೈಕಲ್ ಗಳಲ್ಲಿ ತಾವು ವಾಸ ಮಾಡುತ್ತಿದ್ದ ಸುಂದರಬನದ ಗೋಸಬಾ ಎಂಬ ಸ್ಥಳದಿಂದ ಕಳೆದ ಮಂಗಳವಾರ ಸಂಜೆಯಷ್ಟೇ ಹೊರಟರು. ಬಳಿಕ ಮಾರ್ಗ ಮಧ್ಯ ಸಿಕ್ಕ ನದಿಯನ್ನ ತೆಪ್ಪದ ಮುಖಾಂತರ ದಾಟಿ ಅಲ್ಲಿಂದ ತಮ್ಮ ಸಂಬಂಧಿಕರಿದ್ದ ಹಳ್ಳಿಗೆ ತಲುಪಿ ರಾತ್ರಿ ಅಲ್ಲಿಯೇ ಉಳಿದುಕೊಂಡಿದ್ದಾರೆ.

ಇನ್ನು ಮಾರನೇ ದಿನ ಬುಧವಾರದಂದು ದಿಗಂಟೆ ತನ್ನ ತಂದೆಯ ಸೈಕಲ್ ನಲ್ಲಿಯೇ ಕುಳಿತು ಹೋಗಿದ್ದಾನೆ. ತಂದೆ ಸೈಕಲ್ ತುಳಿಯುತ್ತಿದ್ದರೆ ದಿಗಂತ್ ಓದುತ್ತಾ ಸೋನಾರ್ ಪುರ ಎಂಬ ಸ್ಥಳಕ್ಕೆ ಸುಮಾರು ೯ ಗಂಟೆಗೆ ತಲುಪಿದ್ದಾರೆ. ಬಳಿಕ ಅಲ್ಲಿಂದ ಆಟೋದಲ್ಲಿ ಹನ್ನೊಂದು ಗಂಟೆಯ ಹೊತ್ತಿಗೆ ಪರೀಕ್ಷಾ ಕೇಂದ್ರ ತಲುಪಿದ್ದಾರೆ. ಪ್ರವಾಹ ಪರಿಸ್ಥಿತಿ ಮತ್ತು ಸೋಂಕಿನಿಂದಾಗಿ ಸಾರ್ವಜನಿಕ ಸಾರಿಗೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.