10ನೇ ತರಗತಿ ಉತ್ತೀರ್ಣರಾದವರಿಗೆ ಪೋಸ್ಟ್ ಆಫೀಸ್ ನಲ್ಲಿ 5 ಸಾವಿರ ಹುದ್ದೆಗಳಿಗೆ ನೇಮಕಾತಿ

News
Advertisements

ನಮಸ್ತೇ ಸ್ನೇಹಿತರೇ, ಕೇಂದ್ರಸರ್ಕಾರದ ಅಧೀನದಲ್ಲಿರುವ ಅಂಚೆ ಇಲಾಖೆಯಿಂದ ನಿರುದ್ಯೋಗಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಭಾರತೀಯ ಅಂಚೆ ಇಲಾಖೆಯಲ್ಲಿ ಹತ್ತನೇ ತರಗತಿ ಉತ್ತೀರ್ಣರಾದವರಿಗೆ ಐದು ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಕರೆಯಲಾಗಿದೆ. ಗ್ರಾಮೀಣ ಡಾಕ್ ಸೇವಕ್ (GDS) ನೇಮಕಾತಿಯ ಮೂರನೇ ಸುತ್ತಿನ ಪ್ರಕ್ರಿಯೆ ಆರಂಭವಾಗಿದ್ದು, ಇನ್ನು ಈಗಾಗಲೇ ಮೊದಲ ಹಂತವಾಗಿ ತಮಿಳುನಾಡು ಮತ್ತು ಒರಿಸ್ಸಾ ಅಂಚೆ ಇಲಾಖೆಯಲ್ಲಿ ೫ ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯುವುದು ಎಂದು ಭಾರತೀಯ ಅಂಚೆ ಇಲಾಖೆ ತಿಳಿಸಿದೆ.

ಇನ್ನು ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ೩೦ ಕೊನೆಯ ದಿನವಾಗಿದ್ದು ೧೦ ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇನ್ನು ಸ್ಥಳೀಯ ಭಾಷೆ ಸೇರಿದಂತೆ ಗಣಿತ ಮತ್ತು ಇಂಗ್ಲಿಷ್ ನಲ್ಲಿ ಪಾಸಿಂಗ್ ಮಾರ್ಕ್ಸ್ ನ್ನ ಪಡೆದಿರುವುದು ಅವಶ್ಯಕ. ಇನ್ನು ಇದೆಲ್ಲದರ ಜೊತೆಗೆ ಎರಡು ತಿಂಗಳ ಕಂಪ್ಯೂಟರ್ ಬೇಸಿಕ್ ತರಭೇತಿಯ ಪ್ರಮಾಣ ಪತ್ರವನ್ನು ಸಹ ಅಭ್ಯರ್ಥಿಗಳು ಹೊಂದಿರಬೇಕು.

ಇನ್ನು ಬೈಕ್ ಸವಾರಿ ಕಲಿತಿರಬೇಕು. ಜೊತೆಗೆ ತಮಿಳುನಾಡಿ ಮತ್ತು ಒರಿಸ್ಸಾ ಅಭ್ಯರ್ಥಿಗಳು ಸ್ಥಳೀಯ ಭಾಷೆಗಳಾದ ತಮಿಳು ಮತ್ತು ಒಡಿಯಾ ಭಾಷೆಗಳನ್ನ ಕಲಿತಿರಬೇಕು. ಇಷ್ಟೆಲ್ಲಾ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನ ಸೆಪ್ಟೆಂಬರ್ ೩೦ನೇ ತಾರೀಖಿನ ಒಳಗೆ ಸಲ್ಲಿಸಬಹುದಾಗಿದೆ.