ಇದೇ ತಿಂಗಳಲ್ಲಿ ನಡೆಯಲಿದೆ ನಟ ವಿಷ್ಣುವರ್ಧನ್ ಸ್ಮಾರಕದ ಗುದ್ದಲಿ ಪೂಜೆ..CM ಭೇಟಿ ಮಾಡಿದ ನಟಿ ಭಾರತಿ ಹೇಳಿದ್ದೇನು ಗೊತ್ತಾ ?

Cinema

ನಮಸ್ತೇ ಸ್ನೇಹಿತರೆ, ಅಭಿನವ ಭಾರ್ಗವ ನಟ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ತುಂಬಾ ದಿನಗಳಿಂದ ಕಾಯುತ್ತಿದ್ದ ವಿಷ್ಣುವರ್ಧನ್ ರವರ ಸ್ಮಾರಕದ ಕೆಲಸಗಳು ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಸ್ವತಃ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರೇ ಇದರ ಬಗ್ಗೆ ಹೇಳಿದ್ದು ಇದೇ ತಿಂಗಳು ಅಂದರೆ ಸೆಪ್ಟೆಂಬರ್ 15 ರಂದು ಸಾಹಸಸಿಂಹನ ಸ್ಮಾರಕದ ಗುದ್ದಲಿ ಪೂಜೆ ನೆರವೇರಲಿದೆಯಂತೆ. ಇನ್ನು ಗುದ್ದಲಿಪೂಜೆ ನೆರವೇರಿಸುವ ವಿಚಾರವಾಗಿ ಭಾರತಿ ವಿಷ್ಣುವರ್ಧನ್ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನ ಭೇಟಿ ಮಾಡಿದ್ದು, ಗುದ್ದಲಿ ಪೂಜೆ ನೆರವೇರಿಸಲು ಮನವಿ ಮಾಡಿದ್ದಾರೆ.

ದಾದಾ ವಿಷ್ಣುವರ್ಧನ್ ರವರ ಹನ್ನೊಂದನೇ ವರ್ಷದ ಪುಣ್ಯ ಸ್ಮರಣೆಗೆ ಆಹ್ವಾನ ನೀಡಿದ್ದು ಸ್ಮಾರಕದ ಗುದ್ದಲಿ ಪೂಜೆಯ ಉದ್ಘಾಟನೆಗೆ ಆಹ್ವಾನ ಕೂಡ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಇನ್ನು ಇದೆ ಸಮಯದಲ್ಲಿ ಜೊತೆ ಜೊತೆಯಲಿ ಖ್ಯಾತಿಯ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ದ್ ಕೂಡ ಹಾಜರಿದ್ದರು. ಇನ್ನು ಇದೇ ವೇಳೆ ಸೆಪ್ಟೆಂಬರ್ ೧೫ರಂದು ನಡೆಯುವ ಸ್ಮಾರಕದ ಗುದ್ದಲಿ ಪೂಜೆಗೆ ಭದ್ರತೆ ಒದಗಿಸುವಂತೆ ಕೂಡ ಸಿಎಂ ಯಡಿಯೂರಪ್ಪನವರಲ್ಲಿ ಭಾರತಿ ವಿಷ್ಣುವರ್ಧನ್ ಅವರು ಮನವಿ ಮಾಡಿಕೊಂಡಿದ್ದಾರೆ.

ಆದರೆ ಸೋಂಕಿನ ಕಾರಣದಿಂದಾಗಿ ವೈದ್ಯರು ಹೇಳಿರುವಂತೆ ಯಡಿಯೂರಪ್ಪನವರು ಸ್ಮಾರಕದ ಉದ್ಘಾಟನ ಕಾರ್ಯಕ್ರಮದಲ್ಲಿ ನೆರವಾಇ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ ಆನ್ಲೈನ್ ಮುಖಾಂತರವೇ ಈ ಕಾರ್ಯಕ್ರಮದಲ್ಲಿ ಪಲ್ಗೊಳ್ಳಲಿದ್ದಾರೆ ಎಂದು ವಿಷ್ಣು ವರ್ಧನ್ ರವರ ಪತ್ನಿ ಭಾರತಿಯವರು ಹೇಳಿದ್ದಾರೆ.