ಕಪ್ಪು ಉಪ್ಪಿನಲ್ಲಿದೆ ನೀವು ನಂಬಲಾರದ ಹಲವಾರು ಪ್ರಯೋಜನಗಳು

Kannada News

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಗಾದೆ ಮಾತಿದೆ. ಉಪ್ಪಿಲ್ಲದೆ ಬಹುತೇಕ ಅಡುಗೆಗಳು ತಯಾರಾಗುವುದೇ ಇಲ್ಲ. ಇನ್ನು ಸಾಮಾನ್ಯವಾಗಿ ನಾವು ಹೆಚ್ಚಾಗಿ ಬಿಳಿ ಉಪ್ಪನ್ನ ಅಡುಗೆಯಲ್ಲಿ ಉಪಯೋಗಿಸುತ್ತೇವೆ. ಆದರೆ ಕಪ್ಪು ಉಪ್ಪಿನ ಬಗ್ಗೆ ನೀವು ಕೇಳಿದ್ದೀರಾ..ಹೌದು ಬಹಳ ಹಿಂದಿನಿಂದಲೇ ಭಾರತೀಯರು ಕಪ್ಪು ಉಪ್ಪನ್ನ ಬಳಸುತ್ತಿದ್ದಾರೆ.ಆದರೆ ನೋಡಲು ಕಪ್ಪಾಗಿರುವ ಈ ಉಪ್ಪಿನಲ್ಲಿ ಔಷಧೀಯ ಗುಣಗಳ ಆಗರವೇ ಅಡಗಿದೆ.ಇನ್ನು ನಮ್ಮ ಆಯುರ್ವೇಧದಲ್ಲಿ ಕೂಡ ಕಪ್ಪು ಉಪ್ಪಿನ ಬಗ್ಗೆ ದೇಹ ತಂಪಾಗಿಸುವ ಪದಾರ್ಥ ಎಂದು ವ್ಯಾಖ್ಯಾನ ಮಾಡಲಾಗಿದೆ.

ಇನ್ನು ಪಚನ ಕ್ರಿಯೆಯಲ್ಲಿ ಬಹುಮುಖ್ಯ ಪಾತ್ರವಹಿಸುವ ಈ ಕಪ್ಪು ಉಪ್ಪು ಎದೆಯುರಿ ಹಾಗೂ ವಾಯುವನ್ನ ನಿವಾರಣೆ ಮಾಡಲು ಬಳಸಲಾಗುತ್ತದೆ. ಹೊಟ್ಟೆನೋವು ಮಲಬದ್ಧತೆ ಸೇರಿದಂತೆ ಉದರಕ್ಕೆ ಸಂಬಂದಿಸಿದ ಕಾಯಿಲೆಗಳನ್ನ ನಿಯಂತ್ರಣ ಮಾಡುವಲ್ಲಿ ಇದು ಬಹುಮುಖ್ಯ ಪಾತ್ರವಹಿಸುತ್ತದೆ.ಇನ್ನು ಕಲ್ಲು ಉಪ್ಪು ಗಂಟಲು ನೋವು ಹಾಗೂ ಉಸಿರಾಟದ ತೊಂದರೆಗಳಿದ್ದಲ್ಲಿ ಇದು ನಿವಾರಕವಾಗಿ ಕೆಲಸ ಮಾಡಲಿದೆ. ಇನ್ನು ಮಧುಮೇಹದಿಂದ ತೊಂದರೆ ಪಡುತ್ತಿರುವವರಿಗೆ ಈ ಕಲ್ಲು ಉಪ್ಪು ದೇಹದಲ್ಲಿನ ಸಕ್ಕರೆ ಅಂಶವನ್ನ ನಿಯಂತ್ರಿಸುವಲ್ಲಿ ತುಂಬಾ ಸಹಕಾರಿಯಾಗಿದೆ.

ಇನ್ನು ನೀವು ಸ್ನಾನ ಸಮಯದಲ್ಲಿ ನೀರಿಗೆ ಕಲ್ಲು ಉಪ್ಪನ್ನ ಸ್ನಾನ ಮಾಡುವುದರಿಂದ ಚರ್ಮದ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದಾಗಿದೆ. ಜೊತೆಗೆ ಮೊಡವೆಗಳು ಹಾಗೂ ಬಿರುಕು ಬಿಟ್ಟಿರುವ ಪಾದಗಳ ನಿವಾರಣೆಯಲ್ಲಿ ಸಹಕಾರಿಯಾಗಿದೆ. ಇನ್ನು ಕೂದಲಿನ ಬೆಳವಣಿಗೆಗೆ ಇದು ಸಹಕಾರಿಯಾಗಿದ್ದು ತಲೆ ಹೊಟ್ಟನ್ನ ನಿವಾರಿಸುತ್ತದೆ. ಹೀಗೆ ಹಲವಾರು ಪ್ರಯೋಜನಗಳನ್ನ ಹೊಂದಿರುವ ಕಲ್ಲು ಉಪ್ಪನ್ನ ಇಂದಿನಿಂದಲೇ ಬಳಸಲು ಶುರು ಹಚ್ಚಿಕೊಳ್ಳಿ..