ಚಿರಂಜೀವಿಯ ಹೊಸ ಅವತಾರ ಕಂಡು ದಂಗಾದ ಟಾಲಿವುಡ್ ! ಸನ್ಯಾಸಿಯಾದ್ರಾ ಮೆಗಾಸ್ಟಾರ್ ?

Cinema
Advertisements

ನಮಸ್ತೇ ಸ್ನೇಹಿತರೇ, ಇಷ್ಟು ದಿವಸ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಈಗ ಇದ್ದಕಿದ್ದಂತೆ ಹೊಸ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಅಚ್ಚರಿಗೊಳ್ಳುವಂತೆ ಮಾಡಿದ್ದಾರೆ. ಹೌದು’ ಕೆಲ ದಿನಗಳ ಬಳಿಕ ಹಲವಾರು ನಟರು ತಮ್ಮ ಉದ್ದುದ್ದ ಗಡ್ಡ ಕೂದಲು ಬಿಟ್ಟಿರುವ ಲುಕ್ ನಲ್ಲಿ ಕಾಣಿಸಿಕೊಂಡಿದ್ದರೆ ನಟ ಚಿರಂಜೀವಿ ಮಾತ್ರ ಸಂಪೂರ್ಣವಾಗಿ ತಮ್ಮ ತಲೆ ಕೂದಲನ್ನ ಬೋಳಿಸಿಕೊಂಡಿದ್ದು ಆ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನು ತಮ್ಮ ನೆಚ್ಚಿನ ನಟನ ಹೊಸ ಅವತಾರ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಇನ್ನು ಈ ಫೋಟೋವಂತೂ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ೬೫ ವರ್ಷದ ನಟ ಚಿರಂಜೀವಿಯ ಹೊಸ ಲುಕ್ ಗೆ ಅಭಿಮಾನಿಗಳಲ್ಲಿ ಕುತೂಹಲದ ಜೊತೆಗೆ ಏಕೆ ಎನ್ನುವ ಪ್ರಶ್ನೆ ಕಾಡುತ್ತಿದ್ದು ಇದು ಹೊಸ ಸಿನಿಮಾಗಾಗಿಯೋ ಅಥವಾ ಮತ್ತೆ ಬೇರೆ ಏನಾದರೂ ವಿಷಯ ಇದೆಯಾ ಎಂಬುದರ ಬಗ್ಗೆ ನಡುವೆ ಚರ್ಚೆ ನಡೆಯುತ್ತಿದೆ.

Advertisements

ಇನ್ನು ಹೊಸ ಲುಕ್ ನ ಫೋಟೋವನ್ನ ಇನ್ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿರುವ ಚಿರಂಜೀವಿ ಅರ್ಬನ್ ಮಾಂಕ್ ಎಂದು ಕ್ಯಾಪ್ಶನ್ ಕೊಟ್ಟಿದ್ದು ನಾನು ಸನ್ಯಾಸಿ ರೀತಿ ಥಿಂಕ್ ಮಾಡಬಲ್ಲನೆ ಎಂಬ ಪ್ರಶ್ನೆಯನ್ನ ಕೇಳಿದ್ದಾರೆ ಕೂಡ. ಅಭಿಮಾನಿಗಳು ಮಾತ್ರವಲ್ಲದೆ ತೆಲುಗು ಚಿತ್ರರಂಗದ ನಟ ನಟಿಯರು ಕೂಡ ಈ ಫೋಟೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಸ್ವತಃ ಪುತ್ರ ರಾಮಚರಣ್ ತೇಜ ಕೂಡ ತನ್ನ ತಂದೆಯ ಹೊಸ ಲುಕ್ ಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ. ಕೆಲ ಮಾಹಿತಿಗಳ ಪ್ರಕಾರ ಚಿರಂಜೀವಿ ತಾವು ಮುಂದೆ ನಟಿಸಲಿರುವ ಆಚಾರ್ಯ ಚಿತ್ರಕ್ಕಾಗಿ ನಡೆಸುತ್ತಿರುವ ತಯಾರಿ ಎಂದು ಹೇಳಲಾಗುತ್ತಿದೆ.