BPL ಕಾರ್ಡ್ ಇದ್ದವರಿಗೆ ಉಚಿತ ಗ್ಯಾಸ್ ಸಿಲಿಂಡರ್ ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಪ್ರಕಟ ? ಅರ್ಜಿ ಸಲ್ಲಿಸೋದು ಹೇಗೆ ?

News

ಈಗಂತೂ ದೇಶದ ಪ್ರತೀ ಹಳ್ಳಿಗಾಡಿನ ಮನೆಗಳ ಅಡುಗೆಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ನದ್ದೇ ಆಧಿಪತ್ಯ. ಆದರೆ ಇನ್ನು ಗ್ಯಾಸ್ ಸಿಲಿಂಡರ್ ಕೊಳ್ಲಲು ಹಣ ಇಲ್ಲದೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುತ್ತಿರುವ ಎಷ್ಟೋ ಕುಟುಂಬಗಳು ನಮ್ಮ ನಡುವೆ ಇವೆ. ಅಂತಹವರಿಗೆ ಅನುಕೂಲವಾಗಲೆಂದು ಕೇಂದ್ರಸರ್ಕಾರದ ಮಹತ್ವದ ಯೋಜನೆಯಾಗಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕ ನೀಡಲಾಗುಗುತ್ತಿದೆ.

ಇನ್ನು ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸುವ ಈ ಯೋಜನೆಯ ಏಪ್ರಿಲ್ ೩೦ಕ್ಕೆ ಕೊನೆಯಾಗಬೇಕಿತ್ತು. ಆದರೆ ಬಡವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರಸರ್ಕಾರ ಇದೆ ತಿಂದಳು ಸೆಪ್ಟೆಂಬರ್ ೩೦ನೇ ತಾರೀಖಿನವರೆಗೆ ವಿಸ್ತರಣೆ ಮಾಡಿತ್ತು. ಇನ್ನೇನು ಕೊನೆಯ ದಿನಾಂಕ ಮುಗಿಯಲು ಕೇವಲ ಒಂದು ವಾರಗಳ ಕಾಲ ಬಾಕಿಯಿದ್ದು ಫಲಾನುಭವಿಗಳು ವಾರದೊಳೆಗೆ ಅರ್ಜಿ ಸಲ್ಲಿಸಬೇಕಾಗಿದೆ. ಇನ್ನು ಉಚಿತ ಗ್ಯಾಸ್ ಪಡೆಯಲು ಅರ್ಜಿ ಸಲ್ಲಿಸಲು ಇಚ್ಛಿಸುವ ಫಲಾನುಭವಿಗಳು ಏನೆಲ್ಲಾ ದಾಖಲಾತಿಗಳನ್ನಹೊಂದಿರಬೇಕೆಂದು ನೋಡೋಣ ಬನ್ನಿ..

ಮೊದಲನೆಯದಾಗಿ BPL ಕಾರ್ಡ್ ಹೊಂದಿರುವ ಹದಿನೆಂಟು ವರ್ಷ ಮೇಲ್ಪಟ್ಟ ಮಹಿಳೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರ ಕುಟುಂಬದ ಯಾರ ಹೆಸರಿನಲ್ಲಿಯೂ ಹೆಸರಿನಲ್ಲಿಯೂ ಗ್ಯಾಸ್ ಸಂಪರ್ಕ ಇರಬಾರದು. ಇನ್ನು ಅರ್ಜಿ ಸಲ್ಲಿಸುವ ವೇಳೆ ಅರ್ಜಿದಾರರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಾಸ್ಪೋರ್ಟ್ ಫೋಟೋಗಳು ಹಾಗೂ ಮೊಬೈಲ್ ನಂಬರ್ ಕೂಡ ಹೊಂದಿರಬೇಕು.

ಇನ್ನು ಈ ಎಲ್ಲಾ ದಾಖಲೆಗಳು ನಿಮ್ಮಲ್ಲಿ ಇದ್ದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ವೆಬ್ಸೈಟ್ ಆದ www.pmujjwalayojana.com ಲಿಂಕ್ ನ್ನ ಗೂಗಲ್ ಕ್ರೋಮ್ ನಲ್ಲಿ ಓಪನ್ ಮಾಡಿ ಅಪ್ಲಿಕೇಶನ್ ನ್ನ ಡೌನ್ ಲೋಡ್ ಮಾಡಿಕೊಳ್ಳಿ. ಆ ಅರ್ಜಿಯಲ್ಲಿ ಮಾಹಿತಿಗಳನ್ನೆಲ್ಲಾ ತುಂಬಿ. ಬಳಿಕ ನೀವು ಭರ್ತಿ ಮಾಡಿದ ಅಪ್ಲಿಕೇಶನ್ ಜೊತೆಗೆ ಬೇಕಾಗಿರುವ ಎಲ್ಲಾ ದಾಖಲೆಗಳನ್ನ ಲಗತ್ತಿಸಿ ನಿಮ್ಮ ಹತ್ತಿರದ LPG ಕೇಂದ್ರಕ್ಕೆ ನೀಡಿ. ಇನ್ನು ನಿಮ್ಮ ಅರ್ಜಿ ಹಾಗೂ ದಾಖಲೆಗಳನ್ನ ಪರಿಶೀಲನೆ ಮಾಡಿದ ಬಳಿಕ ನೀವು ಉಚಿತ ಗ್ಯಾಸ್ ಯೋಜನೆಗೆ ಅರ್ಹರಾಗಿದ್ದಲ್ಲಿ ಉಚಿತವಾಗಿಯೇ ಅನಿಲ ಸಂಪರ್ಕ ನೀಡುತ್ತಾರೆ.