ಆಟೋ ಡ್ರೈವರ್ ಗೆ ಬರೋಬ್ಬರಿ 47500ರೂ ದಂಡ ಹಾಕಿದ ಪೊಲೀಸರು ! ಆದ್ರೆ ಆಟೋ ಡ್ರೈವರ್ ಮಾಡಿದ್ದನ್ನ ನೋಡಿ ಪೋಲೀಸ್ರೇ ಶಾಕ್ !

Kannada News
Advertisements

ಸ್ನೇಹಿತರೇ, ಸಂಚಾರಿ ನಿಯಮಗಳನ್ನ ಅನುಸರಿಸದವರಿಗೆ ಟ್ರಾಫಿಕ್ ಪೊಲೀಸರು ರಸ್ತೆಯ ಮಧ್ಯೆ ತಡೆದು ದಂಡ ಹಾಕುವುದು ಮಾಮೂಲಿನ ವಿಷಯವೆಯೇ. ಹೌದು, ನಾವು ಇರೋದೇ ಟ್ರಾಫಿಕ್ ರೂಲ್ಸ್ ಗಳನ್ನ ಬ್ರೇಕ್ ಮಾಡೋದಕ್ಕೆ ಅನ್ನೋರು ಸರಿಯಾದ ದಾಖಲಾತಿಗಳು ಇಲ್ಲದೆ, ಸಂಚಾರಿ ನಿಯಮಗಳನ್ನ ಉಲ್ಲಂಘನೆ ಮಾಡುವವರಿಗೆ ಸಂಚಾರಿ ಪೊಲೀಸರು ಸಾವಿರ ಗಟ್ಟಲೆ ದಂಡ ಹಾಕುವುದನ್ನ ರಸ್ತೆಗಳಲ್ಲಿ ಪ್ರತೀ ದಿನ ನೋಡುತ್ತಲೇ ಇರುತ್ತೇವೆ. ಇನ್ನು ಇದೆ ರೀತಿ ಟ್ರಾಫಿಕ್ ಪೊಲೀಸರು ಆಟೋ ಚಾಲಕರೊಬ್ಬರನ್ನ ಹಿಡಿದು ಬರೋಬ್ಬರಿ ೪೭೫೦೦ರೂ ದಂಡವನ್ನ ಹಾಕಿದ್ದಾರೆ. ಆದರೆ ಇಷ್ಟೊಂದು ಹಣ ಫೈನ್ ಹಾಕಿದಕ್ಕೆ ಆ ಆಟೋ ಡ್ರೈವರ್ ಮಾಡಿದ ಕೆಲಸ ನೋಡಿ ಪೊಲೀಸ್ ಕಮಿಷನರ್ ಅವರೇ ದಂಗಾಗಿ ಹೋಗಿದ್ದಾರೆ. ಹಾಗಾದ್ರೆ ಆ ಆಟೋಡ್ರೈವ್ರ್ ಗೆ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನ ಸಂಚಾರಿ ಪೊಲೀಸರು ದಂಡ ಹಾಕಲು ಕಾರಣವೇನು? ಅಸಲಿಗೆ ಆಟೋ ಡ್ರೈವರ್ ಮಾಡಿದ್ದೇನು ಎಂಬ ಕುತೂಹಲ ಕಾಡುತ್ತಿದೆಯಲ್ಲಾ..

[widget id=”custom_html-4″]

Advertisements

ಹೌದು, ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಮೋಟಾರು ವಾಹನ ಕಾಯಿದೆ ಅನ್ವಯ ಸಂಚಾರಿ ನಿಯಮಗಳನ್ನ ಉಲ್ಲಂಘನೆ ಮಾಡಿದವರಿಗೆ ದುಪ್ಪಟ್ಟು ದಂಡವನ್ನ ವಿಧಿಸಲಾಗುತ್ತಿದೆ. ಅದರಂತೆ ಆಟೋ ಡ್ರೈವರ್ ಗೆ ಪೊಲೀಸರು 47500ದಂಡ ಹಾಕಿರುವ ಒರಿಸ್ಸಾದ ಭುವನೇಶ್ವರದಲ್ಲಿ ನಡೆದಿದೆ. ಇನ್ನು ಎಂದಿನಂತೆ ಆಟೋ ಚಾಲಕ ರಮೇಶ್ ಎನ್ನುವವರು ಗ್ರಾಹಕರನ್ನ ತನ್ನ ಆಟೋದಲ್ಲಿ ಕುಳ್ಳರಿಸಿಕೊಂಡು ರಸ್ತೆಯಲ್ಲಿ ಹೋಗುತ್ತಿರುವಾಗ ರಸ್ತೆ ಮದ್ಯದಲ್ಲಿ ಸಂಚಾರಿ ಪೊಲೀಸರು ಆಟೋವನ್ನ ತಡೆದು ದಾಖಲಾತಿಗಳನ್ನ ಪರಿಶೀಲನೆ ಮಾಡಿದ್ದಾರೆ. ಆದರೆ ಆಟೋಗೆ ಸಂಬಂಧಪಟ್ಟ ಸೂಕ್ತ ದಾಖಲೆಗಳು ಇಲ್ಲದ ಕಾರಣ ಸಂಚಾರಿ ಪೊಲೀಸ್ರು ಬರೋಬ್ಬರಿ ೪೭೫೦೦ರೂ ದಂಡ ಹಾಕಿದ್ದಾರೆ.

[widget id=”custom_html-4″]

ದಿನವಿಡೀ ಕಷ್ಟಪಟ್ಟು ದುಡಿದರೂ ೫೦೦ರುಗಳನ್ನ ಸಂಪಾದನೆ ಮಾಡಲು ಕಷ್ಟಪಡುವ ಆಟೋ ಡ್ರೈವರ್ ಇಷ್ಟೊಂದು ದೊಡ್ಡ ಮೊತ್ತದ ದಂಡ ಕಟ್ಟಲು ಎಲ್ಲಿಂದ ಸಾಧ್ಯ ಹೇಳಿ. ಇನ್ನು ದಂಡದ ಮೊತ್ತ ನೋಡಿದ ಆಟೋ ಚಾಲಕ ರಮೇಶ್ ರಸ್ತೆ ಮಧ್ಯೆಯೇ ಜೋರಾಗಿ ಕಿರುಚಾಡುತ್ತಾ, ಅಲ್ಲೇ ಧರಣಿ ಕುಳಿತು ಕಣ್ಣೀರಿಟ್ಟದ್ದಾರೆ. ನಾನು ಆಟೋ ತೆಗೆದುಕೊಂಡಿರುವುದೇ ಲೋನ್ ನಲ್ಲಿ. ದಿನಕ್ಕೆ ೫೦೦ ರೂ ಸಂಪಾದನೆ ಮಾಡುವುದೇ ಕಷ್ಟವಿರುವ ಪರಿಸ್ಥಿತಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಎಲ್ಲಿಂದ ತರಲಿ ನಾನು. ಆಟೋವನ್ನೇ ಇಟ್ಟುಕೊಂಡು, ನಿಮ್ಮ ದಂಡವನ್ನ ಅದರಲ್ಲಿ ಹಿಡಿಯುಕೊಂಡು ಉಳಿದ ಹಣವನ್ನ ನನಗೆ ಕೊಡಿ ಎಂದು ಆಟೋ ಚಾಲಕ ರಮೇಶ್ ಕಣ್ಣೀರಿಟ್ಟಿದ್ದಾನೆ. ಹೀಗೆ ಪೊಲೀಸರಿಗೆ ಹೇಳುತ್ತಲೇ ರಸ್ತೆ ಮಧ್ಯೆಯೇ ಧರಣಿ ಕುಳಿತಿದ್ದಾನೆ.

[widget id=”custom_html-4″]

ಪೊಲೀಸರಿಗೂ ಏನೂ ತೋಚದೆ ಸುಮ್ಮನಿರುವಾಗ ಅಲ್ಲಿದ್ದ ಜನರು ಮಿಡಿಯಾದವರಿಗೆ ಫೋನ್ ಮಾಡಿದ್ದು, ಅಲ್ಲಿಗೆ ಬಂದ ಮಾಧ್ಯಮವರು ಈ ದೇಶದಲ್ಲಿ ಬಡವರು ಬದಕಲು ಸಾಧ್ಯವಿಲ್ಲವೇ ಎಂಬ ಹೆಡ್ ಲೈನ್ ಹಾಕಿ ಪ್ರಸಾರ ಮಾಡಿದ್ದಾರೆ. ಇನ್ನು ಈ ವಿಷಯವನ್ನ ಟಿವಿಗಳಲ್ಲಿ ನೋಡಿದ ಅಲ್ಲಿನ ಕಮಿಷನರ್ ಆಟೋ ಚಾಲಕ ಧರಣಿ ಕುಳಿತಿದ್ದ ಜಾಗಕ್ಕೆ ಬಂದು, ದಂಡ ವಿಧಿಸಿದ ಪೊಲೀಸರಿಗೂ ಬುದ್ದಿ ಹೇಳಿ, ಬಳಿಕ ಆಟೋ ಚಾಲಕನಿಗೂ ಮತ್ತೆ ಈ ರೀತಿ ಮಾಡಬೇಡ ಎಂದು ಬುದ್ದಿ ಹೇಳಿ ಆಟೋವನ್ನ ವಾಪಾಸ್ ಕೊಡಿಸಿ ಅಲ್ಲಿಂದ ಕಳುಹಿಸಿಕೊಟ್ಟಿದ್ದಾರೆ. ಕೆಲವು ಅಧಿಕಾರಿಗಳು ಸರ್ಕಾರ ಮಾಡಿರುವ ಕಾನೂನುಗಳನ್ನೇ ದುರುಪಯೋಗಪಡಿಸಿಕೊಂಡು ಬಡವರ ಮೇಲೆ ದ’ಬ್ಬಾಳಿಕೆ ಮಾಡುವುದನ್ನ ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಅದೇ ರೀತಿ ನಾವು ಕೂಡ ಸೂಕ್ತ ದಾಖಲಾತಿಗಳನ್ನ ಇಟ್ಟುಕೊಂಡು ವಾಹನ ಚಾಲನೆ ಮಾಡುವುದು ಉತ್ತಮ. ಸ್ನೇಹಿತರೆ, ಇಲ್ಲಿ ಆಟೋ ಚಾಲಕನ ತಪ್ಪಿದೆಯೋ ಅಥ್ವಾ ದುಬಾರಿ ಮೊತ್ತದ ದಂಡ ವಿಧಿಸಿದ ಪೊಲೀಸರ ತಪ್ಪೋ..ಕಾಮೆಂಟ್ ಮಾಡಿ ತಿಳಿಸಿ..