ಒಂದೇ ಮರದಲ್ಲಿ 18 ತಳಿಯ ಮಾವಿನ ಹಣ್ಣನ್ನು ಬೆಳೆಯುತ್ತಿರುವ ರೈತ! ಈತನ ಟೆಕ್ನಿಕ್ ನೋಡಿ ಆಶ್ಚರ್ಯ ಪಟ್ಟ ಅಧಿಕಾರಿಗಳು..

Kannada Mahiti
Advertisements

ನಮಸ್ತೆ ಸ್ನೇಹಿತರೆ, ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ನಿವಾಸಿಯಾದ ಇವರ ಹೆಸರು ರಾಮ್ ಗೋಪಾಲಕೃಷ್ಣ ಅಂತ.. ಇವರಿಗೆ ಏಳು ಎಕರೆಯ ಮಾವಿನ ತೋಟವಿದ್ದು, ಇದೆ ಇವರ ಜೀವನದ ಆದಾರ, ಇವರು ಪ್ರತಿ ವರ್ಷ ಮಾವಿನ ಗಿಡಗಳಿಗೆ ಸುಮಾರು ಒಂದು ಲಕ್ಷದ ವರೆಗೆ ರಾಸಾಯನಿಕ ಗೊಬ್ಬರಗಳನ್ನು ಹಾಕುತ್ತಿದ್ದರು ಇನ್ನು ಈ ಮಾವಿನಹಣ್ಣನ್ನು ಮಾರಿದಾಗ ಇವರಿಗೆ ಸಿಗುತ್ತಿದ್ದು 2 ಲಕ್ಷ, ಆದರೆ ಇವರ ಸಂಪಾದನೆಯಿಂದ ವರ್ಷಕ್ಕೆ 35ರಿಂದ 50 ಸಾವಿರದಷ್ಟು ಹಣವನ್ನು ಉಳಿತಾಯ ಮಾಡಬಹುದಾಗಿತ್ತು, ಇನ್ನು ಇಷ್ಟು ಹಣ ಇವರ ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಗೋಪಾಲ್ ರವರ ಮನೆಯವರು ನಾವು ಈ ಮಾವಿನ ಹಣ್ಣು ನಮ್ಮ ಜೀವನ ರೂಪಿಸುವುದಿಲ್ಲ ಈ ಮಾವಿನ ಗಿಡವನ್ನು ಕಡಿದು ಹಾಕಿ ಬೇರೆ ಬೆಳೆಯನ್ನು ಹಾಕಬೇಕೆಂದು ಗೋಪಾಲ್ ರವರೆಗೆ ಮನೆಯವರು ಹೇಳುತ್ತಿದ್ದರು,

[widget id=”custom_html-4″]

Advertisements

ಆದರೆ ಗೋಪಾಲ್ ರವರು ಐದು ವರ್ಷದಿಂದ ಕಷ್ಟಪಟ್ಟು ಬೆಳೆಸಿದ ಮರವನ್ನು ಕಡಿಯಲು ಮನಸ್ಸಾಗದೆ ಇದಕ್ಕೆ ಏನಾದರೂ ಮಾಡಬೇಕೆಂದು ಆಲೋಚಿಸಿದರು, ನಂತರ ಇವರು ಕೃಷಿ ಹಾಗೂ ಹಾರ್ಟಿಕಲ್ಚರ್ ಆಫೀಸ್ಗೆ ಹೋಗಿ ಒಂದಷ್ಟು ಮಾಹಿತಿಯನ್ನು ರಾಮ್ ಗೋಪಾಲ್ ರವರು ಪಡೆಯುತ್ತಾರೆ, ನಂತರ ಇವರು ಎರಡು ನಿರ್ಧಾರ ಮಾಡಿ ಒಂದೇ ಮರದಲ್ಲಿ ಹಲವು ತಳಿಯ ಮಾವಿನ ಹಣ್ಣನ್ನು ಬೆಳೆಯುವುದು ಮತ್ತು ಈ ತಳಿಗೆ ಸಂಪೂರ್ಣವಾಗಿ ರಾಸಾಯನಿಕ ಗೊಬ್ಬರವನ್ನು ನಿಲ್ಲಿಸಿ ಕೇವಲ ಸಗಣಿಯನ್ನು ಮಾತ್ರ ಬಳಸುತ್ತಿದ್ದರು, ಅದೇ ರೀತಿ 18 ತಳಿಯ ಮಾವಿನ ಕೊಂಬೆಗಳನ್ನು ತಂದು ಒಂದೇ ಕೊಂಬೆಗೆ ಜೋಡಿಸಿ ನಂತರ ಅದನ್ನು ಘೋಷಣೆ ಮಾಡಿದರು ನಂತರ ಎಲ್ಲ ಕೊಂಬೆಗಳು ಚಿಗುರೊಡೆದವು ನಂತರ ಆ ಗಿಡಗಳನ್ನು ತಮ್ಮ ಜಮೀನಿನಲ್ಲಿ ಬೆಳೆಸಿ ಕೇವಲ ಸ್ವಾಭಾವಿಕ ಗೊಬ್ಬರಗಳಿಂದ ಗಿಡಗಳನ್ನು ಬೆಳೆಸಲು ಶುರುಮಾಡಿದರು,

[widget id=”custom_html-4″]

ನಂತರ ಗೋಪಾಲ್ ರವರು ಮಾಡಿದ ಹೊಸ ಪ್ರಯೋಗ ಸಕ್ಸಸ್ ಆಯ್ತು ಒಂದೇ ಮರದಲ್ಲಿ 18 ತಳಿಯ ಮಾವಿನಹಣ್ಣು ಬಿಡಲು ಶುರುವಾಯಿತು, ಇನ್ನು ಇದೇ ವಿಧವಾಗಿ ತಮ್ಮ ಜಮೀನಿನಲ್ಲಿ ಹಲವಾರು ಗಿಡಗಳನ್ನು ಬೆಳೆಸಲು ಶುರುಮಾಡಿದರು.. ಅಷ್ಟೇ ಅಲ್ಲದೆ ಇದಕ್ಕೂ ಮೊದಲು ಬೆಳೆಸಿದ ಮಾವಿನ ಗಿಡಗಳಿಗೂ ಸಾವಯವ ಗೊಬ್ಬರವನ್ನು ಮಿಶ್ರಣಮಾಡಿ ಹಾಕುತ್ತಿದ್ದರು ನಂತರ ಅವರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು ಅದೇನೆಂದರೆ ಕಡಿಯಬೇಕೆಂದಿದ್ದ ಮರಗಳು ಕೂಡ ಯಥೇಚ್ಛವಾಗಿ ಮಾವಿನ ಹಣ್ಣುಗಳನ್ನು ಬಿಡಲು ಶುರುವಾಯಿತು, ಅಷ್ಟೇ ಅಲ್ಲದೆ ಪ್ರತಿ ವರ್ಷ ಉತ್ತಮವಾದ ಫಲವು ಸಿಗುತ್ತಿತ್ತು, ಆದರೆ ರಾಮ್ ಗೋಪಾಲ್ ರವರು ಇನ್ನೊಂದು ಪ್ಲಾನ್ ಮಾಡಿದ್ದರು ಇನ್ನೇನು ಮಾವು ಎರಡು ಮೂರು ತಿಂಗಳಲ್ಲಿ ಬರುತ್ತೆ ಎಂದರೆ ಅದಕ್ಕೆ ಅವರು ಹಸುವಿನ ಸಗಣಿ ಹಾಗೂ ಗಂಜಲ ಮಿಶ್ರಣ ಮಾಡಿ ವಾರಕ್ಕೆ ಒಂದು ಬಾವಿ ಮಾವಿನ ಗಿಡಗಳಿಗೆ ಹಾಕುತ್ತಿದ್ದರು,

[widget id=”custom_html-4″]

ಇದರಿಂದ ಮಾವು ಅತಿ ಸಿಹಿಯಾಗಿ ಮತ್ತು ಪೌಷ್ಟಿಕವಾಗಿ ಬರಲು ಶುರುವಾಯಿತು, ವರ್ಷಕ್ಕೆ 35ರಿಂದ 50 ಸಾವಿರ ದುಡಿಯುತ್ತಿದ್ದ ಗೋಪಾಲ್ ರವರು ಈಗ ಎರಡು ಲಕ್ಷದವರೆಗೆ ಲಾಭವನ್ನು ಪಡೆಯುತ್ತಿದ್ದಾರೆ‌.. ಗೋಪಾಲ್ ಮಾಡಿದ ಒಂದೇ ಮರದಲ್ಲಿ 18 ತಳಿಯ ಮಾವಿನ ಹಣ್ಣು ಹೇಗಿರುತ್ತದೆ ಎಂದು ತಿಳಿಯಲು ಹಲವಾರು ರೈತರು ಅವರು ಬೆಳೆದಿರುವ ತೋಟಕ್ಕೆ ಬರುತ್ತಿದ್ದರು ಒಂದೇ ಒಂದು ಪ್ರಯತ್ನ ಹಾಗೂ ಆಲೋಚನೆಯಿಂದ ಗೋಪಾಲ್ ರವರ ಮಾವಿನ ಹಣ್ಣಿಗೆ ವಿದೇಶದಿಂದಲೂ ಕೂಡ ಬಹಳ ಬೇಡಿಕೆ ಬಂದಿದೆ.. ತಮ್ಮ ಒಂದು ಐಡಿಯಾದಿಂದ ಬಡತನವನ್ನು ನಿವಾರಿಸಿಕೊಂಡ ಗೋಪಾಲ್ ರವರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ