ಸೈಕಲ್ ನಲ್ಲಿ ತರಕಾರಿ ಮಾರುತ್ತಿದ್ದ ಬಾಲಕಿಯ ಫೋಟೋ ವೈರಲ್ ! ಪೊಲೀಸರು ಮಾಡಿದ್ದೇನು ಗೊತ್ತಾ?

News

ಮಹಾಮಾರಿ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು, ದೇಶದಾದ್ಯಂತ ಮೇ ೧೭ರವರೆಗೆ ಲಾಕ್ ಡೌನ್ ಮಾಡಲಾಗಿದೆ. ಆದರೆ ಇದರ ನೇರ ಪರಿಣಾಮ ಬಿದ್ದಿರುವುದು ಸಾಮಾನ್ಯ ಜನರ ಮೇಲೆ. ಅನೇಕರ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಅಸ್ಸಾಂ ರಾಜ್ಯದ ಬಾಲಕಿಯೊಬ್ಬಳು ತನ್ನ ಕುಟುಂಬ ನಿರ್ವಹಣೆ ಮಾಡುವ ಸಲುವಾಗಿ ಸೈಕಲ್ ನಲ್ಲಿ ಹೋಗಿ ತರಕಾರಿಗಳನ್ನ ಮಾರುತ್ತಿದ್ದಾ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿತ್ತು. ಇನ್ನು ಈ ಬಾಲಕಿಯ ಕಷ್ಟವನ್ನ ಕಂಡು ಮಾನವೀಯತೆ ಮೆರೆದಿರುವ ಅಸ್ಸಾಂ ನ ದಿಬ್ರುಗರ್ ಪೊಲೀಸರು ಬೈಕ್ ಒಂದನ್ನ ಆ ಬಾಲಕಿಗೆ ಉಡುಗೊರೆಯಾಗಿ ನೀಡಿದ್ದಾರೆ.

ದಿಬ್ರುಗರ್ ಜಿಲ್ಲೆಯ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರುವ ಬಾಲಕಿ ಜನ್ಮೋನಿ ಗೊಗೊಯ್ ಅವರ ತಂದೆ ಕಳೆದ ಎಂಟು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ತನ್ನ ಕುಟುಂಬದ ನಿರ್ವಹಣೆಯನ್ನ ಈ ಬಾಲಕಿಯೇ ವಹಿಸಿಕೊಂಡಿದ್ದಾಳೆ. ಪಿಯುಸಿ ಪಾಸ್ ಮಾಡಿರುವ ಈ ಬಾಲಕಿಗೆ ಉನ್ನತ ಶಿಕ್ಷಣ ಮಾಡುವ ಆಸೆ ಕೂಡ ಇದೆ. ಆದರೆ ಲಾಕ್ ಡೌನ್ ಆಗಿರುವ ಪರಿಣಾಮ ತನ್ನ ಕುಟುಂಬದ ನಿರ್ವಹಣೆ ಮಾಡಲೆಂದು ಸೈಕಲ್ ಮೇಲೆ ತಾರಕರು ವ್ಯಾಪಾರ ಮಾಡುತ್ತಿದ್ದಾಳೆ. ಇನ್ನು ಈಕೆ ತರಕಾರಿ ವ್ಯಾಪಾರ ಮಾರಾಟ ಮಾಡುತ್ತಿರುವ ಫೋಟೋವನ್ನ ಯಾರೋ ತೆಗೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇನ್ನು ಇದನ್ನ ಗಮನಿಸಿದ ದಿಬ್ರುಗರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಲ್ಲವಿ ಮಜೂಮ್ದಾರ್ ಅವರು ಆ ಬಾಲಕಿಯ ಮನೆಗೆ ಭೇಟಿ ಕೊಟ್ಟಿದ್ದು, ಆಕೆಗೆ ಸಹಾಯವಾಗಲೆಂದು ಟಿವಿಎಸ್ ಮೊಪೆಡ್ ಗಾಡಿಯನ್ನ ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಇದರ ಬಗ್ಗೆ ಮಾತನಾಡಿರುವ ಮಹಿಳಾ ಪೊಲೀಸ್ ಅಧಿಕಾರಿ ಡಿಜಿಪಿ ನಿರ್ದೇಶನದಂತೆ ತರಕಾರಿ ಮಾರುತ್ತಿದ್ದ ಬಾಲಕಿಗೆ ಆರ್ಥಿಕವಾಗಿ ಸಹಾಯ ಮಾಡುವುದಾಗಿ ಹೇಳಿದ್ದು, ಡಿವೈಎಸ್‍ಪಿಯವರು ಮೊಪೆಡ್ ನ್ನ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಪೋಲೀಸರ ಈ ಮಾನವೀಯತೆಗೆ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.