ತನ್ನ ಎಲ್ಲಾ ಆಸ್ತಿಯನ್ನ ದಾನ ಮಾಡಿರುವ ನಟಿ ಆರತಿ, ಈಗ ಮಾಡುತ್ತಿರುವ ಕೆಲಸವಾದ್ರೂ ಏನು ಗೊತ್ತಾ ?

Cinema

ಕನ್ನಡ ಚಿತ್ರರಂಗದ ಕಂಡ ಅದ್ಭುತ ನಟಿಯರಲ್ಲಿ ಆರತಿ ಕೂಡ ಒಬ್ಬರು. ೮೦ರ ದಶಕದಲ್ಲಿ ಚಂದನವನದಲ್ಲಿ ಟಾಪ್ ನಟಿಯಾಗಿ ಮೆರೆದವರು ಈ ರಂಗನಾಯಕಿ. ತನ್ನ ಮನೋಜ್ಞ ಅಭಿನಯದ ಮೂಲಕ ಕನ್ನಡ ಸಿನಿರಸಿಕರನ್ನ ಸೆಳೆದ ಅದ್ಭುತ ನಟಿ. ಆಗಿನ ಕಾಲದ ಕನ್ನಡ ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದಾಗಲೇ ಅಭಿನಯಕ್ಕೆ ಗುಡ್ ಬೈ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಆಗಿನ ಮೇರು ನಟಿಯರಲ್ಲಿ ಆರತಿ ಕೂಡ ಒಬ್ಬರಾಗಿದ್ದರು. ಅಂದಿನಿಂದ ಇಂದಿನವರೆಗೂ ಸಿನಿಮಾ ರಂಗದಿಂದ ದೂರ ಸರಿದಿರುವ ನಟಿ ಆರತಿ ಅವರು ತುಂಬಾ ಸರಳ ಜೀವನ ನಡೆಸುತ್ತಿದ್ದಾರೆ ಎಂದರೆ ನೀವು ನಂಬೋದಿಲ್ಲ. ಹಣ ಎಷ್ಟಿದ್ದರೂ ಸಹ ಯಾರಿಗೆ ತಾನೇ ಸಾಕೆನಿಸುತ್ತೆ ಹೇಳಿ..ಆದರೆ ಹಣ ಎಂದರೆ ಬಾಯಿ ಬಿಡುವ ಜನರ ನಡುವೆ ನಟಿ ಆರತಿ ಅವರು ಭಿನ್ನವಾಗಿದ್ದಾರೆ.

ಇನ್ನು ನಟಿ ಆರತಿ ಅವರು ಮಾಡುವೆ ಆಗಿದ್ದು ಕನ್ನಡ ಚಿತ್ರರಂಗವಷ್ಟೇ ಅಲ್ಲದೆ ಭಾರತೀಯ ಸಿನಿಮಾರಂಗ ಕಂಡ ಖ್ಯಾತ ನಿರ್ದೇಶಕ ಚಂದನವನದ ಚಿತ್ರಬ್ರಹ್ಮ ಎನಿಸಿದ್ದ ಪುಟ್ಟಣ್ಣ ಕಣಗಾಲ್ ಅವರು. ಆರತಿ ಅವರು ಸಿನಿಮಾ ರಂಗದಿಂದ ದೂರ ಸರಿಯಲು ಕರಣ ಅವರು ಮಗಳು ಎಂದು ಹೇಳಲಾಗಿದೆ. ತಾವು ಕನ್ನಡ ಚಿತ್ರರಂಗದಿಂದ ದೂರವಾದರೂ ಕೂಡ ಅವರು ಯಾರಿಗೆ ಗೊತ್ತಿಲ್ಲದೇ ಮಾಡುತ್ತಿರುವ ಸಾಮಾಜಿಕ ಸೇವೆ ಮಾತ್ರ ಬಣ್ಣಿಸಲಾಗದ್ದು. ತನ್ನ ಎರಡನೇ ಪತಿಯಾಗಿರುವ ಚಂದ್ರಶೇಖರ್ ದೇಶಿಗೌಡರ್ ಜೊತೆ ಅಮೆರಿಕದಲ್ಲಿದ್ದು, ಬಡವರ ಸೇವೆಯಲ್ಲಿ ನಿರತರಾಗಿದ್ದಾರೆ. ದೀನ ದಯಾಳು ಎಂಬ ಆಶ್ರಯವನ್ನ ನಡೆಸುತ್ತಿರುವ ಆರತಿಯವರು ಬರೋಬ್ಬರಿ ಎರಡು ಕೋಟಿ ಹಣವನ್ನ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದು ಆ ಹಣದಿಂದ ಬರುತ್ತಿರುವ ಬಡ್ಡಿಯ ಹಣದಿಂದ ವಿದ್ಯಾರ್ಥಿ ವೇತನದ ರೂಪದಲ್ಲಿ ಬಡ ವಿದ್ಯಾರ್ಥಿಗಳಿಗೆ ನೀಡಿ ಅವರ ವಿಧ್ಯಭ್ಯಾಸಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆ.

ತಮ್ಮ ಪ್ರೀತಿಯ ಮನೆಯಾದ ಬೆಳ್ಳಿ ಮನೆಯಲ್ಲಿ ಹದಿನೈದು ಕೋಟಿಗೆ ಮಾರಿ ಅದನ್ನ ವಿದ್ಯಾರ್ಥಿಗಳಿಗಾಗಿ ಬಳಸುತ್ತಿದ್ದಾರೆ. ಇಷ್ಟೇ ಅಲ್ಲದೆ ನಲವತ್ತಕ್ಕಿಂತ ಹೆಚ್ಚು ಶಾಳೆಗಳನ್ನ ದತ್ತು ಪಡೆದಿದ್ದು, ವಿದ್ಯಾರ್ಥಿಗಳಿಗೆ ತಗಲುವ ವೆಚ್ಚವನ್ನ ಆರತಿಯವರು ತಮಮ್ ಹಣದಿಂದ ಬಳಸುತ್ತಿದ್ದಾರೆ. ಇನ್ನು ಉತ್ತರಕರ್ನಾಟಕದ ಕೆಲ ಹಳ್ಳಿಗಳನ್ನ ದತ್ತು ಪಡೆದಿರುವ ನಟಿ ಆರತಿ, ಅಲ್ಲಿನ ಮೂಲ ಸೌಲಭ್ಯಗಳನ್ನ ಪೂರೈಸಿಕೊಡುವಲ್ಲಿ ಶ್ರಮಿಸುತ್ತಿದ್ದಾರೆ. ಕಿಂಚಿತ್ತೂ ಪ್ರಚಾರ ಪಡೆದುಕೊಳ್ಳದೇ ತಾವು ಕಷ್ಟಪಟ್ಟು ದುಡಿದ ಹಣವನ್ನೆಲ್ಲಾ ಬಡವರಿಗಾಗಿ ಖರ್ಚು ಮಾಡುತ್ತಿದ್ದು ನೊಂದವರ ಪಾಲಿಗೆ ಆಶಾಕಿರಣವಾಗಿ ನಿಂತಿದ್ದಾರೆ ಖ್ಯಾತ ನಟಿ ಆರತಿಯವರು. ಸ್ನೇಹಿತರೆ, ಆರತಿಯವರು ನಟಿಸಿರುವ ಯಾವ ಚಿತ್ರ ನಿಮಗೆ ತುಂಬಾ ಇಷ್ಟವಾಯಿತು ಎಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..