14 ದಿನಗಳ ಗೃಹಬಂಧನದಲ್ಲಿ ಬಾಹುಬಲಿ ಪ್ರಭಾಸ್..

Cinema

ಕೊರೋನಾ ವೈರಸ್ ಭೀತಿ ಈಗ ಸ್ಟಾರ್ ನಟ, ನಟಿಯರಿಗೂ ತಟ್ಟಿದ್ದು, ವಿದೇಶಗಳಲ್ಲಿ ಚಿತ್ರಕರಣದಲ್ಲಿ ಬ್ಯುಸಿಯಾಗಿದ್ದವರು ಈಗ ಭಾರತಕ್ಕೆ ಹಿಂದಿರುಗುತ್ತಿದ್ದಾರೆ. ಹೌದು, ತೆಲಗು ಚಿತ್ರರಂಗದ ಡಾರ್ಲಿಂಗ್ ಪ್ರಭಾಸ್ ಈ ಸೋಂಕು ಹೆಚ್ಚಾಗುವ ಮೊದಲೇ ತಮ್ಮ ಮುಂದಿನ ‘ಜಾನ್’ ಚಿತ್ರದ ಚಿತ್ರೀಕರಣಕ್ಕಾಗಿ ಜಾರ್ಜಿಯಾ ದೇಶಕ್ಕೆ ಹೋಗಿದ್ದರು.

ಈಗ ಕೊರೋನಾ ಸೋಂಕಿನ ಕಾಟ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕೇಂದ್ರ ಸರ್ಕಾರ ಕೂಡ ಹಲವಾರು ನಿರ್ಧಾರಗಳನ್ನ ತೆಗೆದುಕೊಂಡಿತು. ಈಗ ವಿದೇಶದಿಂದ ಭಾರತಕ್ಕೆ ಬರುತ್ತಿರುವವರ ಮೇಲೆ ಹೆಚ್ಚಿನ ನಿಗಾವಹಿಸಲಾಗುತ್ತಿದ್ದು,ಅಂತಾರಾಷ್ಟ್ರೀಯ ವಿಮಾನಗಳನ್ನ ದೇಶದ ಒಳಗೆ ಬರದಂತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆ, ನಟ ಪ್ರಭಾಸ್, ನಟಿ ಪೂಜಾ ಹೆಗ್ಡೆ ಸೇರಿದಂತೆ ಜಾರ್ಜಿಯಾದಲ್ಲಿದ್ದ ಜಾನ್ ಚಿತ್ರ ತಂಡ ಚಿತ್ರೀಕರಣವನ್ನ ಪ್ಯಾಕಪ್ ಮಾಡಿ ಭಾರತಕ್ಕೆ ಮರಳಿದೆ.

ಇನ್ನು ಸ್ವದೇಶಕ್ಕೆ ಮರಳಿರುವ ನಟ ಪ್ರಭಾಸ್, ಜಾನ್ ಚಿತ್ರದ ನಾಯಕಿ ಪೂಜಾ ಹೆಗ್ಡೆ ಸೇರಿದಂತೆ ನಾನು ಕೂಡ ಸ್ವಯಂ ಗೃಹ ನಿರ್ಬಂದಲಲ್ಲಿ ಇರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಶೂಟಿಂಗ್ ಮುಗಿಸಿ ಸುರಕ್ಷಿತವಾಗಿ ಭಾರತಕ್ಕೆ ಆಗಮಿಸಿರುವ ನಾನು ಕೊರೋನಾ ಸೋಂಕು ಹಿನ್ನಲೆಯಲ್ಲಿ’ಸೆಲ್ಫ್ ಕ್ವಾರಂಟೈನ್’ ಆಗಲು ನಿರ್ಧಾರ ಮಾಡಿದ್ದೇನೆ, ನೀವೂ ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡಿದ್ದೀರಿ ಎಂದು ನಾನು ಭಾವಿಸಿದ್ದೇನೆ ಎಂದು ಪ್ರಭಾಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಸ್ವಯಂ ಗೃಹ ಬಂಧನದಲ್ಲಿರುವ ನಟಿ ಪೂಜಾ ಹೆಗ್ಡೆ ಜಾರ್ಜಿಯಾ ದೇಶದಿಂದ ಹಿಂತಿರುಗುವಾಗ ಮುಖಕ್ಕೆ ಮಾಸ್ಕ್ ಧರಿಸಿರುವ ಫೋಟೋವೊಂದನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.