ಪ್ರಣಯರಾಜ ನಟ ಶ್ರೀನಾಥ್ ಅವರ ಕುಟುಂಬ ಹೇಗಿದೆ ಗೊತ್ತಾ ?ಮಗ ಮಗಳು ಹೇಗಿದ್ದಾರೆ ಏನ್ಮಾಡ್ತಿದ್ದಾರೆ ನೋಡಿ..

Cinema Uncategorized
Advertisements

ಸ್ನೇಹಿತರೇ, ಕನ್ನಡ ಚಿತ್ರರಂಗದ ಪ್ರಣಯ ರಾಜ ಎಂದರೆ ನೆನಪಿಗೆ ಬರೋದು ಹಿರಿಯ ನಟ ಶ್ರೀನಾಥ್. ೮೦ರ ದಶಕದಲ್ಲಿ ಮಹಿಳೆಯರ ಫ್ಯಾವರೀಟ್ ಆಗಿದ್ದ ನಟ ಶ್ರೀನಾಥ್ ಅವರು ಜನಿಸಿದ್ದು ೧೯೪೩ರಲ್ಲಿ. ಕರ್ನಾಟಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನಿಸಿದ ಶ್ರೀನಾಥ್ ಅವರ ಮೂಲ ನಾಮದೇಯ ನಾರಾಯಣಸ್ವಾಮಿ ಎಂದು. ಹಿರಿಯ ನಟ ಸಿಆರ್. ಸಿಂಹ ಅವರ ಇವರ ಅಣ್ಣ. ೭೦ ಹಾಗೂ ೮೦ರ ದಶಕಗಳಲ್ಲಿ ಹಿಟ್ ಚಿತ್ರಗಳನ್ನ ಕೊಟ್ಟ ಶ್ರೀನಾಥ್ ಅವರು ೧೯೬೭ರಲ್ಲಿ ಬಿಡುಗಡೆಯಾದ ಲಗ್ನಪತ್ರಿಕೆ ಎನ್ನುವ ಸಿನಿಮಾದಲ್ಲಿ ಪುಟ್ಟ ಪಾತ್ರವೊಂದರಲ್ಲಿ ಅಭಿನಯಿಸುವ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು. ಇನ್ನು ೧೯೬೯ರಲ್ಲಿ ಬಿಡುಗಡೆಗೊಂಡ ಮಧುರ ಮಿಲನ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ರು. ಆಗಿನ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಬೆಳೆದ ಶ್ರೀನಾಥ್ ಅವರು ಇದುವರೆಗೂ ೩೫೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

[widget id=”custom_html-4″]

Advertisements

ಇನ್ನು ಅಂದಿನ ಕಾಲಕ್ಕೆ ಶ್ರೀನಾಥ್ ಮತ್ತು ನಟಿ ಮಂಜುಳಾ ಅವರ ಜೋಡಿ ಸೂಪರ್ ಹಿಟ್ ಜೋಡಿ ಆಗಿತ್ತು. ಇನ್ನು ಮಾನಸ ಸರೋವರ ಸೇರಿದಂತೆ ಹೆಚ್ಚಾಗಿ ಲವ್ ಕಥಾಹಂದರವುಳ್ಳ ಹೆಚ್ಚಾಗಿ ನಟಿಸಿದ್ದ ಶ್ರೀನಾಥ್ ಅವರಿಗೆ ಪ್ರಣಯ ರಾಜ ಎಂಬ ಬಿರುದು ಬಂತು. ಜೊತೆಗೆ ಜೀವಮಾನ ಪ್ರಶಸ್ತಿ ಸೇರಿದಂತೆ ಫಿಲ್ಮಿ ಫಾರ್ ಅವಾರ್ಡ್ ಪ್ರಶಸ್ತಿಗಳನ್ನ ಪಡೆದುಕೊನಿದ್ದಾರೆ. ಇನ್ನು ಶ್ರೀನಾಥ್ ಅವರು ಕಿರುತೆರೆಯಲ್ಲಿ ನಡೆಸಿಕೊಟ್ಟ ಆದರ್ಶ ದಂಪತಿಗಳು ಕಾರ್ಯಕ್ರಮದ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದವರು. ಹೀಗಾಗಿ ನಟ,ನಿರ್ಮಾಪಕ, ನಿರೂಪಣೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ ಶ್ರೀನಾಥ್ ಅವರು.

[widget id=”custom_html-4″]

ಇನ್ನು ಶ್ರೀನಾಥ್ ಅವರ ಕೌಟಂಬಿಕ ಜೀವನದ ಬಗ್ಗೆ ಹೇಳಬೇಕೆಂದರೆ, ಪ್ರಣಯರಾಜನಿಗೆ ಜೊತೆಯಾದ ಪತ್ನಿಯ ಹೆಸರು ಗೀತಾ ಎಂದು. ಇನ್ನು ಈ ದಂಪತಿಗೆ ಒಂದು ಗಂಡು ಒಂದು ಹೆಣ್ಣು ಸೇರಿದಂತೆ ಇಬ್ಬರು ಮಕ್ಕಳಿದ್ದಾರೆ. ಮಗನ ಹೆಸರು ರೋಹಿತ್ ಆದರೆ ಮಗಳ ಹೆಸರು ಅಮೂಲ್ಯ ಎಂದು. ಇನ್ನು ಮಗ ರೋಹಿತ್ ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದ್ದಾರೆ. ಈ ರೋಹಿತ್ ಅವರ ಪತ್ನಿಯ ಹೆಸರು ಮಂಗಳ. ರೋಹಿತ್ ಅವರು ಬೆಂಗಳೂರಿನಲ್ಲೇ ನೆಲೆಸಿದ್ದು, ಸ್ವಂತದ್ದಾದ ಬ್ಯುಸಿನೆಸ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಶ್ರೀನಾಥ್ ಅವರ ಮುದ್ದಿನ ಮಗಳು ಅಮೂಲ್ಯ ದೀಪಕ್ ಎಂಬುವವರನ್ನ ಮದುವೆಯಾಗಿದ್ದು ಈ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಇನ್ನು ಶ್ರೀನಾಥ್ ಅಳಿಯ ದೀಪಕ್ ಅವರು ಅಮೆರಿಕಾದಲ್ಲಿ ವಾಸ ಮಾಡುತ್ತಿದ್ದು ಅಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ೮೦ರ ದಶಕದಿಂದಾಚೆಗೆ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಶ್ರೀನಾಥ್ ಅವರು ಈಗೀಗ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸುತ್ತಿಲ್ಲ.