ನಂಬಬೇಡಿ ಎಂದು ಕೊನೆಗೂ ಮೌನ ಮುರಿದ ನಟಿ ಪ್ರೇಮಾ ! ನಿಜಕ್ಕೂ ಆಗಿರೋದೇನು ಗೊತ್ತಾ ?

Cinema

ನಮಸ್ತೇ ಸ್ನೇಹಿತರೇ, ಓಂ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟು ಹಲವು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ನಟಿ ಪ್ರೇಮಾ ತಮಗೆ ಸಂಬಂಧ ಪಟ್ಟ ಹಾಗೆ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಾಡಿದಾಡುತ್ತಿರುವ ಸುದ್ದಿಗಳ ಕುರಿತು ತಮ್ಮ ಮೌನ ಮುರಿದಿದ್ದಾರೆ. ತಮ್ಮ ವೈಯುಕ್ತಿಕ ಜೀವನದ ಕುರಿತಾದ ಸುದ್ದಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಇದೆಲ್ಲಾ ಸುಳ್ಳು ಎಂದು ಮನಬಿಚ್ಚಿ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಒಂದರ ಹಿಂದೆ ಒಂದಂತೆ ಹಿಟ್ ಸಿನಿಮಾಗಳನ್ನ ನೀಡಿದ್ದ ನಟಿ ಸದ್ಯಕ್ಕೆ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಇನ್ನು ಇವರು ಕೊನೆಯದಾಗಿ ಬಣ್ಣ ಹಚ್ಚಿದ್ದು ೨೦೧೭ರಲ್ಲಿ ತೆರೆಕಂಡಿದ್ದ ಉಪ್ಪಿ ಅಭಿನಯದ ಉಪೇಂದ್ರ ಮತ್ತೆ ಬಾ ಸಿನಿಮಾದಲ್ಲಿ.

ಹಿರಿಯ ನಟಿ ಪ್ರೇಮಾ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸದಿದ್ದ ರೂ ಕೂಡ ಅವರ ಬಗ್ಗೆ ಕುರಿತಾದ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಇಷ್ಟು ದಿವಸ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಮೌನವಹಿಸಿದ್ದ ಪ್ರೇಮಾ ಅವರು ಬಹಿರಂಗವಾಗಿ ಮಾತನಾಡಿದ್ದಾರೆ. ಹೌದು, ಪ್ರೇಮಾ ಅವರ ಮೊದಲ ದಾಂಪತ್ಯ ಜೀವನ ಮುರಿದುಬಿದ್ದಿದ್ದು, ಬಳಿಕ ಅವರ ತಂದೆ ಇಹಲೋಕ ತ್ಯಜಸಿದ್ರು. ಇನ್ನು ಅವರ ಮನೆಯವರು ಪ್ರೇಮಾ ಎರಡನೇ ಮದುವೆ ಮಾಡಿಕೊಳ್ಳಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಇನ್ನು ಪ್ರೇಮಾ ಅವರಿಗೆ ಖಿ’ನ್ನತೆ ಕಾಡುತ್ತಿದ್ದು, ಅವರು ಮತ್ತೊಂದು ಮದ್ವೆಯಾಗಲಿದ್ದಾರೆ ಎಂಬಂತಹ ಸುದ್ದಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಈ ಸುದ್ದಿಗಳ ಬಗ್ಗೆ ಬಾಯಿಬಿಟ್ಟಿರುವ ಪ್ರೇಮಾ ಅವರು..

ಇದೆಲ್ಲಾ ಫೇಕ್, ಸುಳ್ಳು ಸುದ್ದಿಗಳಾಗಿವೆ. ಇದನ್ನೆಲ್ಲಾ ನಂಬಲೇಬೇಡಿ. ಇದನ್ನೆಲ್ಲಾ ನಂಬಿ ನನಗೆ ಮೆಸೇಜ್ ಮಾಡಬೇಡಿ. ನಾನು ನನ್ನ ವೈಯುಕ್ತಿಕ ಜೀವನದ ಬಗ್ಗೆ ಎಷ್ಟೇ ಸ್ಪಷ್ಟನೆ ಕೊಟ್ಟರೂ ಕೂಡ ಇಂತಹ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ ಎಂದು ಅವರು ಹೇಳಿದ್ದಾರೆ. ಇನ್ನು ಇದಕ್ಕೂ ಮೊದಲು ಕೂಡ ಈ ರೀತಿಯಾದ ಸುಳ್ಳು ಗಾಸಿಪ್ ಗಳು ಕೇಳಿಬಂದಾಗ ಆಗಲು ಕೂಡ ಸ್ಪಷ್ಟನೆ ಕೊಟ್ಟಿದ್ದ ನಟಿ ಪ್ರೇಮಾ ಅವರು ನನ್ನ ಮದ್ವೆಯ ಬಗ್ಗೆ ಹೇಳಲು ನನಗೆ ಇಷ್ಟವಿಲ್ಲ. ನನಗೆ ಮಕ್ಕಳು ಕೂಡ ಇಲ್ಲ. ನಾನು ಆರೋಗ್ಯವಾಗಿಯೇ ಇದ್ದೇನೆ ಎಂದು ಸ್ಫಷ್ಟನೇ ಕೊಟ್ಟಿದ್ದರು. ಇನ್ನು ಈ ರೀತಿಯ ಸುಳ್ಳು ಸುದ್ದಿಗಳು ಹರಿದಾಡುತ್ತಿರುವುದು ಪ್ರೇಮಾ ಸೇರಿದಂತೆ ಅವರ ಅಭಿಮಾನಿಗಳಿಗೂ ಕೂಡ ಬೇಸರ ತಂದಿರುವದಂತು ಸತ್ಯ. ಇನ್ನು ಮತ್ತೆ ಪ್ರೇಮಾ ಅವರು ಸ್ಯಾಂಡಲ್ವುಡ್ ಗೆ ಹಿಂದಿರುಗುತ್ತಾರಾ ಎಂಬ ಕುತೂಹಲ ಅಭಿಮನಿಗಳಲ್ಲಿ ಇದ್ದೆ ಇದೆ.