ಕನ್ನಡ ಕಿರುತೆರೆ ಲೋಕದಲ್ಲಿ ಟಾಕಿಂಗ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ಫೇಮಸ್ ನಿರೂಪಕ ಅಕುಲ್ ಬಾಲಾಜಿ ಲಾಕ್ ಡೌನ್ ನಿಯಮಗಳನ್ನ ಉಲ್ಲಂಘಿಸಿದ್ದಾರೆ ಎಂದು ಅವರ ಮೇಲೆ ಪ್ರಕರಣ ದಾಖಲಾಗಿದೆ.

ಹೌದು, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ಲಗುಮೇನಹಳ್ಳಿ ಗ್ರಾಮದಲ್ಲಿ ಸನ್ ಶೈನ್ ಎಂಬ ರೆಸಾರ್ಟ್ ನ್ನ ನಡೆಸುತ್ತಿದ್ದಾರೆ. ಇನ್ನು ಈ ರೆಸಾರ್ಟ್ ನಲ್ಲಿ ಬೆಂಗಳೂರಿನ ಥಣಿಸಂದ್ರ ನಿವಾಸಿಗಳ ಮದುವೆಯೊಂದರ ಕಾರ್ಯಕ್ರಮಕ್ಕೆ ಭಾನುವಾರ ರಾತ್ರಿ ಅವಕಾಶ ನೀಡಲಾಗಿತ್ತು. ಆದರೆ ಮಧ್ಯರಾತಿಯ್ರ ವೇಳೆಗೆ ಈ ರೆಸಾರ್ಟ್ ಗೆ ೨೦ಕ್ಕೂ ಹೆಚ್ಚು ಮಂದಿ ಬಂದಿದ್ದಾರೆ.

ಇನ್ನು ಯಾವುದೇ ಅನುಮತಿ ಇಲ್ಲದೆ ಸನ್ ಶೈನ್ ರೆಸಾರ್ಟ್ ಗೆ ೨೦ಕ್ಕೂ ಹೆಚ್ಚು ಮಂದಿ ಬಂದಿದ್ದು, ಮದುವೆಗೆ ಸಿದ್ಧತೆಗಳನ್ನ ನಡೆಸುತ್ತಿದ್ದರು ಎನ್ನಲಾಗಿದೆ. ಇನ್ನು ಇದು ಆ ಗ್ರಾಮದವರ ಕಣ್ಣಿಗೆ ಬಿದ್ದಿದ್ದು, ಲಾಕ್ ಡೌನ್ ನಿಯಮಗಳನ್ನ ಉಲ್ಲಂಘನೆ ಮಾಡಿ ಅಕುಲ್ ಬಾಲಾಜಿ ರೆಸಾರ್ಟ್ ನಡೆಸಿದ್ದಾರೆ ಎಂದು ಅಕುಲ್ ಮೇಲೆ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.