ತನ್ನ ಮಗಳ ಹುಟ್ಟುಹಬ್ಬಕ್ಕಾಗಿ ಅಂಜಲಿ ಚಿತ್ರದ ಹಾಡನ್ನೇ ರಿಕ್ರಿಯೇಟ್ ಮಾಡಿದ ಅಲ್ಲು ಅರ್ಜುನ್ ! ವಿಡಿಯೋ ನೋಡಿ ನೆಟ್ಟಿಗರು ಫಿದಾ..

Cinema

ಸ್ನೇಹಿತರೇ, ತಮ್ಮ ನೆಚ್ಚಿನ ನಟ ನಟಿಯರ ಕುಟುಂಬದಲ್ಲಾಗುವ ಸಂಭ್ರಮದ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅವರ ಅಭಿಮಾನಿಗಳಲ್ಲಿ ಇದ್ದೆ ಇರುತ್ತದೆ. ಇನ್ನು ಚಿತ್ರರಂಗದ ಸೆಲೆಬ್ರೆಟಿಗಳ ಮನೆಗಳಲ್ಲಿ ನಡೆಯುವ ಕಾರ್ಯಕ್ರಮಗಳಾ ಅದ್ದೂರಿತನದ ಬಗ್ಗೆ ಹೇಳುವ ಹಾಗೇ ಇಲ್ಲ ಬಿಡಿ. ಹುಟ್ಟಿದ ಹಬ್ಬ ಸೇರಿದಂತೆ ಮದುವೆ ಮುಂಜಿ ಶುಭ ಸಮಾರಂಭಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಡಗರ ಸಂಭ್ರಮಗಳಿಂದ ಆಚರಣೆ ಮಾಡುತ್ತಾರೆ. ಇನ್ನು ಈಗ ಲಕ್ಷಾಂತರ ಅಭಿಮಾನಿ ಬಳಗವನ್ನ ಹೊಂದಿರುವ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ನಟ ಅಲ್ಲೂ ಅರ್ಜುನ್ ಅವರಿಗೆ ತಮ್ಮ ಮುದ್ದುಮಗಳ ಹುಟ್ಟು ಹಬ್ಬದ ಸಂಭ್ರಮ.

ಇನ್ನು ಈಗಾಗಲೇ ಪುಷ್ಪ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಅಲ್ಲು ಅರ್ಜುನ್ ಇದರ ನಡುವೆಯೇ ತಮ್ಮ ಮುದ್ದಿನ ಮಗಳ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನ ವಿಶೇಶವಾಗಿ ತಮ್ಮ ಮನೆಯಲ್ಲೇ ಕುಟುಂಬದವರು ಹಾಗೂ ಆಪ್ತರ ನಡುವೆ ಆಚರಿಸಿದ್ದಾರೆ. ಇನ್ನು ಮಗಳ ಹುಟ್ಟುಹಬ್ಬಕ್ಕೆ ಅಲ್ಲು ಅರ್ಜುನ್ ಗಿಫ್ಟ್ ಅಂತೂ ಕೊಡಲೇಬೇಕಲ್ಲವೇ. ಅದರಂತೆ ತಮ್ಮ ಇನ್ಸ್ಟಾಗ್ರಾಮ್ ಫೋಟೋವೊಂದನ್ನ ಹಂಚಿಕೊಡಿದ್ದು ಅದರಲ್ಲಿ ತಮ್ಮ ಮಗಳಿಗೆ ರೆಡ್ ಬಾಕ್ಸ್ ಒಂದರಲ್ಲಿ ಮಗಳಿಗೆ ಗಿಫ್ಟ್ ಕೊಡುತ್ತಿರುವುದನ್ನ ನೋಡಬಹುದಾಗಿದೆ.

ಆದರೆ ಅಲ್ಲೂ ಅರ್ಜುನ್ ತಮ್ಮ ಮಗಳಿಗೆ ಈ ಗಿಫ್ಟ್ ನ ಹೊರತಾಗಿಯೂ ಮತ್ತೊಂದು ವಿಶೇಷವಾದ ಗಿಫ್ಟ್ ಒಂದನ್ನ ಕೊಟ್ಟಿದ್ದಾರೆ. ಇನ್ನು ಈ ಗಿಫ್ಟ್ ತಮ್ಮ ಮಗಳಿಗೆ ಕೊಟ್ಟಿದ್ದಾರೆ ಎನ್ನುವುದಕ್ಕಿಂತ ಅಭಿಮಾನಿಗಳಿಗೆ ಕೊಟ್ಟಿರುವ ಗಿಫ್ಟ್ ಎಂದು ಹೇಳಬಹುದು. ಹೌದು, ಈ ಗಿಫ್ಟ್ ನ ವಿಶೇಷ ಏನೆಂದರೆ ೧೯೯೦ರ ಸಮಯದಲ್ಲಿ ಬಲ ನಟಿಯಾಗಿ ಮಿಂಚಿದ್ದ ಬಾಲನಟಿ ಬೇಬಿ ಶ್ಯಾಮಲಿ ಅಭಿನಯದ ಖ್ಯಾತ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶನ ಮಾಡಿದ್ದ ಅಂಜಲಿ ಚಿತ್ರದ ಹಾಡೊಂದನ್ನ ತಮ್ಮ ಮಗಳಿಗಾಗಿ ಅಲ್ಲು ಅರ್ಜುನ್ ರಿಕ್ರಿಯೇಟ್ ಮಾಡಿಸಿದ್ದಾರೆ. ಇನ್ನು ವಿಶೇಷ ಎಂದರೆ ಅಲ್ಲು ಅರ್ಜುನ್ ಅವರ ಮಗ ಹಾಗೂ ಇತರ ಮಕ್ಕಳು ಕೂಡ ಈ ವಿಡಿಯೋದಲ್ಲಿ ನಟಿಸಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ..

ಇನ್ನು ಆಗಿನ ಕಾಲದಲ್ಲಿ ಮೂಡಿಬಂದಿದ್ದ ಅಂಜಲಿ ಚಿತ್ರದಲ್ಲಿ ನಟಿಸಿರುವ ಬೇಬಿ ಶ್ಯಾಮಲಿ ಬುದ್ದಿ ಮಾಂಧ್ಯ ಬಾಲಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಆ ಚಿತ್ರದಲ್ಲಿ ಬೇಬಿ ಶ್ಯಾಮಲಿ ಧಾರಿಸಿದ್ದ ಬಟ್ಟೆ ಸೇರಿದಂತೆ ಎಲ್ಲವನ್ನು ಮರುಸೃಷ್ಟಿ ಮಾಡಲಾಗಿದೆ. ಇನ್ನು ಅಲ್ಲು ಅರ್ಜುನ್ ಮಗಳು ಅರ್ಹಾ ಕೂಡ ಬೇಬಿ ಶ್ಯಾಮಲಿ ನಟಿಸಿದಂತೆ ನಟನೇ ಮಾಡಿರುವುದನ್ನ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಇನ್ನು ತಮ್ಮ ಮಗಳಿನ ಮುದ್ದಾದ ವಿಡಿಯೋವನ್ನ ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದು ಒಂದೇ ದಿನಕ್ಕೆ ಎಂಟು ಲಕ್ಷಕ್ಕೂ ಅತ್ಯಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.