ಅಮೆರಿಕಾ ಅಮೆರಿಕಾ ಸಿನಿಮಾದಿಂದ ಕಿಚ್ಚ ಸುದೀಪ್ ರಿಜೆಕ್ಟ್ ಆಗಿದ್ದೇಕೆ ಗೊತ್ತಾ ?ಕಾರಣ ಕೇಳಿದ್ರೆ ನೀವು ನಂಬೋಲ್ಲ..

Cinema
Advertisements

ಬಾನಲ್ಲಿ ಓಡೋ ಮೇಘಾ, ಗಿರಿಗೋ ನಿಂತಲ್ಲೇ ಯೋಗ, ಎಲ್ಲೂಂಟು ಒಲವಿರದ ಜಾಗ ಬಾ ಬಾ ಗೆಳೆಯ ಬೇಗ ಅಂತಲೇ ಭಾರೀ ಹಿಟ್ ಆಗಿದ್ದ ಸಿನಿಮಾ ಅಂದ್ರೆ ಅದು ಅಮೆರಿಕಾ ಅಮೆರಿಕಾ ಸಿನಿಮಾ. ಫೇಮಸ್ ಡೈರೆಕ್ಟರ್ ನಾಗತೀಹಳ್ಳಿ ಚಂದ್ರಶೇಖರ್ ನಿರ್ಮಾಣದಲ್ಲಿ ಸಿನಿಮಾ ಆ ಕಾಲದಲ್ಲೇ ಸೂಪರ್ ಹಿಟ್ ಆಗಿತ್ತು. ಅಮೆರಿಕಾ ಅಮೆರಿಕಾ ಸಿನಿಮಾದಲ್ಲಿ ಇಬ್ಬರು ಹೀರೋಗಳು. ಒಬ್ಬಳು ಹೀರೋಯಿನ್. ಒಬ್ರು ನಟ ರಮೇಶ್ ಅರವಿಂದ್, ಮತ್ತೊಬ್ರು ಶಶಾಂಕ್. ಇವರಿಬ್ಬರಿಗೆ ನಟಿ ಹೇಮಾ ಪ್ರಭಾತ್ ಹೀರೋಯಿನ್. ಆದ್ರೆ, ನಿಮಗಿದೂ ಗೊತ್ತೆ. ಈ ಸಿನಿಮಾದಲ್ಲಿ ನಟ ಕಿಚ್ಚ ಸುದೀಪ್ ನಟಿಸಬೇಕಿತ್ತಂತೆ. ಆದ್ರೆ, ಮಿಸ್ ಆಯ್ತು ಅಂತ ಸ್ವತಃ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಸುದ್ದಿವಾಹಿನಿ ಒಂದಕ್ಕೆ ನೀಡಿರೋ ಸಂದರ್ಶನಲ್ಲಿ ಹೇಳಿಕೊಂಡಿದ್ದಾರೆ. ಕಿಚ್ಚ ಸುದೀಪ್ ಗೆ ಅಮೆರಿಕಾ ಅಮೆರಿಕಾ ಸಿನಿಮಾ ಮಿಸ್ ಆಗಿದ್ದು, ಕೇವಲ ಹೈಟ್ ಪ್ರಾಬ್ಲಮ್ ಗೆ.

[widget id=”custom_html-4″]

Advertisements

ಹೌದು, ನಟ ರಮೇಶ್ ಅರವಿಂದ್ ಜೊತೆ ನಟಿಸಬೇಕಿದ್ದ ಸುದೀಪ್ ಹೈಟ್ ಪ್ರಾಬ್ಲಮ್ ನಿಂದ ಅವರನ್ನ ಸಿನಿಮಾದಿಂದ ಕೈ ಬಿಡಲಾಯ್ತಂತೆ. ಕಿಚ್ಚ ಸುದೀಪ್ ಜಾಗದಲ್ಲಿ ಶಶಾಂಕ್ ಎಂಬುವವರನ್ನ ತಂದು ಪಾತ್ರ ಸಿನಿಮಾದಲ್ಲಿ ಪಾತ್ರ ಮಾಡಲಾಗಿದೆ. ರಮೇಶ್ ಅರವಿಂದ್ ಹಾಗೂ ಸುದೀಪ್ ಇಬ್ಬರಲ್ಲಿ ತುಂಬಾ ಎತ್ತರಕ್ಕೆ ಇರೋದು ಸುದೀಪ್. ಹೀಗಾಗಿ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ಪಾತ್ರವಹಿಸಲು ಸಾಧ್ಯವಾಗಲಿಲ್ಲ. ಅಮೆರಿಕಾ ಅಮೆರಿಕಾ ಸಿನಿಮಾ ಸೆಟ್ಟೇರುವಾಗ ಮೊದಲು ರಮೇಶ್ ಜೊತೆ ಸುದೀಪ್ ಅವರನ್ನ ಹಾಕಿಕೊಂಡು ಸಿನಿಮಾ ಮಾಡಬೇಕೆಂದು ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಸಹ ತೀರ್ಮಾನಿಸಿದ್ದರು. ಕಿಚ್ಚ ಸುದೀಪ್ ಸಹ ಬಹಳ ಉತ್ಸುಹಕರಾಗಿದ್ದರು. ಯಾಕೆಂದ್ರೆ, ಆಗ ಸುದೀಪ್ ನಟನೆಯ ಕೆಲ ಸಿನಿಮಾಗಳು ಸಹ ಅರ್ಧಕರ್ಧ ನಿಂತಿದ್ದವು. ಹೀಗಾಗಿ, ಬಹಳ ಉತ್ಸುಹಕನಾಗಿದ್ದ ನಟ ಕಿಚ್ಚ ಸುದೀಪ್ ಅವರನ್ನ ತಮ್ಮ ಸಿನಿಮಾದಲ್ಲಿ ಹಾಕಿಕೊಳ್ಳಬೇಕೆಂದು ನಿರ್ದೇಶಕರು ನಿರ್ಧರಿಸಿದ್ದರು.

[widget id=”custom_html-4″]

ಆದ್ರೆ, ಸೀನಿಯರ್ ಟೆಕ್ನಿಷಿಯನ್ ಸನ್ನೀ ಜೋಸೆಫ್ ಎಂಬುವವರು ಬೇಡ ಅಂದಿದ್ದರಂತೆ. ಇದರಲ್ಲಿ ಯಾವುದೇ ವೈಯಕ್ತಿಕ ದ್ವೇಷವಿರಲ್ಲಿ ಅಂತಲೂ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಹೇಳಿಕೊಂಡಿದ್ದಾರೆ. ಯಾಕಂದ್ರೆ, ನಟ ರಮೇಶ್ ಅರವಿಂದ್ ಒಂದು ಹೈಟ್ ಇದ್ರೆ, ನಟಿ ಹೇಮಾ ಪ್ರಭಾತ್ ಇನ್ನೊಂದು ಹೈಟ್ ಇದ್ರು. ಕಿಚ್ಚ ಸುದೀಪ್ ಅಂತೂ ತುಂಬಾ ಎತ್ತರಕ್ಕೆ ಇದ್ರು. ಈ ಮೂವರನ್ನು ಒಂದೇ ಫ್ರೇಮ್ ನಲ್ಲಿ ತರಬೇಕಿದ್ದರಿಂದ ಹೈಟ್ ಪ್ರಾಬ್ಲಮ್ ಆಗ್ತಿತ್ತು. ಈ ಹಿನ್ನೆಲೆ ಕಿಚ್ಚ ಸುದೀಪ್ ಅವರನ್ನು ಅಮೆರಿಕಾ ಅಮೆರಿಕಾ ಸಿನಿಮಾದಿಂದ ಕೈ ಬಿಡಬೇಕಾಯಿತು ಅಂತ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಹೇಳಿಕೊಂಡಿದ್ದಾರೆ. ಇದರಿಂದ ಸುದೀಪ್ ಗೆ ಬಹಳ ನಿರಾಸೆಯಾಯಿತು. ನನಗೂ ಕೂಡ ತುಂಬಾ ಬೇಸರವಾಯಿತು. ಸುದೀಪ್ ಗೆ ನನ್ನ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಕೊಡಲು ಆಗಲಿಲ್ಲ ಅಂತ ಬೇಸರವಾಯಿತು. ಸಿನೀಯರ್ ಟೆಕ್ನಿಷಿಯನ್ ಸನ್ನೀ ಜೋಸೆಫ್ ಅವರಿಗೆ ಸುದೀಪ್ ಮೇಲೆ ಯಾವುದೇ ಪೂರ್ವಗ್ರಹ ಇರಲಿಲ್ಲ.

[widget id=”custom_html-4″]

ಸುದೀಪ್ ಅಭಿನಯ ಸಾಮರ್ಥ್ಯದ ಬಗ್ಗೆ ಏನು ತಕರಾರು ಇರಲಿಲ್ಲ. ಒಬ್ಬ ಸಿನೀಯರ್ ಟೆಕ್ನಿಷಿಯನ್ ಅವರ ಮಾತನ್ನು ಕೇಳಲೇಬೇಕಾಯಿತು ಅಂತ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಸುದ್ದಿವಾಹಿನಿ ಒಂದಕ್ಕೆ ನೀಡಿರೋ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅದಲ್ದೇ, ಆ ಕೊರತೆಯನ್ನು ಮಾತಾಡು ಮಾತಾಡು ಮಲ್ಲಿಗೆ ಸಿನಿಮಾದಲ್ಲಿ ನೀಗಿಸಲಾಯಿತು ಅಂತಲೂ ಹೇಳಿದ್ದಾರೆ. ಆದ್ರೆ, ಕಿಚ್ಚ ಸುದೀಪ್ ಈಗ ದೊಡ್ಡ ಕಲಾವಿದರಾಗಿ ಬೆಳೆದಿದ್ದಾರೆ. ಅಮೆರಿಕಾ ಅಮೆರಿಕಾ ಸಿನಿಮಾ ಕಥೆ ಸಿದ್ಧವಾಗಿದ್ದು ಅಮೆರಿಕಾ ದೇಶದಲ್ಲಿಯೇ. ಕೆಲ ದೊಡ್ಡ ದೊಡ್ಡವರು ಕುಚೋದ್ಯದ ಮಾತುಗಳನ್ನಾಡಿದ್ದರು. ಕ್ಯಾಮೆರಾ ತಗೊಂಡು ಹೋಗ್ತಿದ್ದೀರಾ? ಗೊತ್ತಾ ನಿಮಗೆ ಅಮೆರಿಕಾ ಎಲ್ಲಿದೆ ಅಂತ ಆಡಿಕೊಂಡಿದ್ದರು. ಅಮೇರಿಕಾ ಅಮೇರಿಕಾ ಸಿನಿಮಾ ಮಾಡಿ, ಅದ್ರಲ್ಲಿ ಫೇಲ್ಯೂರ್ ಆಗಿದ್ರೆ ಸರ್ವನಾಶವಾಗಿ ಬಿಡ್ತಿದ್ದೆ ಅಂತಲೂ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಅವರು ಹೇಳಿಕೊಂಡಿದ್ದಾರೆ.