ಬೆಂಗಳೂರು ಪೊಲೀಸರಿಂದ ಹೀರೋಸ್ ಎನಿಸಿಕೊಂಡ ಅಮೂಲ್ಯ ದಂಪತಿ.ಇವರು ಮಾಡಿದ್ದೇನು ಗೊತ್ತಾ.?

Advertisements

ಲಾಕ್ ಡೌನ್ ಈ ಸಮಯದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸಿನಿಮಾ ಸೆಲೆಬ್ರೆಟಿಗಳು ಸೇರಿದಂತೆ ವಿವಿಧ ರಂಗದವರು ಸಮಾಜಕ್ಕೆ ಮಾದರಿಯಾಗುವಂತಹ ಕೆಲಸ ಮಾಡುತ್ತಿದ್ದಾರೆ. ಇನ್ನು ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಪೊಲೀಸರು, ವೈದ್ಯರು, ನರ್ಸ್ ಗಳು, ಸ್ವಚ್ಛತೆ ಮಾಡುವವರು ಸೇರಿದಂತೆ ಅನೇಕರು ತಮ್ಮ ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ.

Advertisements

ಇನ್ನು ಇಂತಹ ವಾರಿಯರ್ಸ್ ಗಳ ಕಾಳಜಿ ವಹಿಸುವುದು ನಮ್ಮೆಲ್ಲರ ಕರ್ತವ್ಯ. ಹೌದು, ಈಗ ಇದೇ ರೀತಿ ಕೊರೋನಾ ವಿರುದ್ಧ ಹೋರಾಡುತ್ತಿರುವವರ ಆರೋಗ್ಯದ ದೃಷ್ಟಿಯಿಂದ ಬರೋಬ್ಬರಿ 10 ಸಾವಿರ ಮಾಸ್ಕ್ ಗಳನ್ನ ತಯಾರಿಸುವ ಕೆಲಸ ಮಾಡುತ್ತಿದ್ದಾರೆ ನಟಿ ಅಮೂಲ್ಯ ಮತ್ತು ಪತಿ ಜಗದೀಶ್.

ಇನ್ನು ವಿಡಿಯೋವೊಂದನ್ನ ಹಂಚಿಕೊಂಡಿರುವ ಜಗದೀಶ್ ರವರು ಕೊರೋನಾ ವಾರಿಯರ್ಸ್ ಗೋಸ್ಕರ ೧೦ ಸಾವಿರ ಬಟ್ಟೆ ಮಾಸ್ಕ್ ಗಳನ್ನ ತಯರಿಸಿ ಉಚಿತವಾಗಿ ಹಂಚುವ ಕೆಲಸ ಮಾಡುತ್ತಿದ್ದು, ಇದೊಂದು ನಮ್ಮ ಕಡೆಯಿಂದ ಸಣ್ಣ ಕಾಣಿಕೆ ಎಂದು ಹೇಳಿದ್ದಾರೆ. ಇನ್ನು ಅಮೂಲ್ಯ ಮತ್ತು ಜಗದೀಶ್ ರವರು ತಾವಿರುವ ಏರಿಯಾದ ಮನೆಯಲ್ಲಿಯೇ ಬಟ್ಟ್ಟೆ ಹೊಲಿಯುವ ಮಹಿಳೆಯರನ್ನ ಗುರುತಿಸಿದ್ದು, ಅದರಂತೆ ೨೫ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿಯೇ ಹತ್ತು ಸಾವಿರ ಮಾಸ್ಕ್ ಗಳನ್ನ ತಯಾರಿಸಿದ್ದಾರೆ.

ಇನ್ನು ಹೀಗೆ ಉಚಿತವಾಗಿ ಕೊರೋನಾ ಯೋಧರಿಗೆ ಮಾಸ್ಕ್ ಗಳನ್ನ ಕೊಡುವುದಲ್ಲದೆ, ಸಂಕಷ್ಟದಲ್ಲಿದ್ದ ಮಹಿಳೆಯರಿಗೆ ಮಾಸ್ಕ್ ಹೊಲೆಯಲು ಹಣ ಕೊಟ್ಟು ಅವರ ಕುಟುಂಬಕ್ಕೆ ಸಹಾಯವಾಗುವ ಹಾಗೆ ಸಣ್ಣದೊಂದು ಸಹಾಯ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಇಂತಹ ಸಂಕಷ್ಟದ ಸಮಯದಲ್ಲಿ ಸಾಮಾಜಿಕ ಕೆಲಸ ಮಾಡಿ ಮಾದರಿಯಾಗಿರುವ ಜಗದೀಶ್ಅ ಮೂಲ್ಯ ತಂಡದ ಕಾರ್ಯವನ್ನ ಬೆಂಗಳೂರು ನಗರ ಪೊಲೀಸರು ಶ್ಲಾಘಿಸಿದ್ದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.