ಕೊಟ್ಟ ಮಾತಿನಂತೆ 1ರೂ ಇಡ್ಲಿ ಅಜ್ಜಿಗಾಗಿ ಮಹೀಂದ್ರ ಅವರು ಮಾಡಿರುವ ಕೆಲಸಕ್ಕೆ ಇಡೀ ದೇಶವೇ ಸಲಾಂ !

Advertisements

ನಮಸ್ತೇ ಸ್ನೇಹಿತರೇ, ಕಳೆದ ಎರಡು ವರ್ಷಗಳ ಹಿಂದಷ್ಟೇ ಒಂದು ರುಪಾಯಿಗೆ ಇಡ್ಲಿ ಮಾರಾಟ ಮಾಡುವ ಅಜ್ಜಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೌದು, ತಮಿಳುನಾಡಿನ ಕಮಲಥಾಲ್ ಅನ್ನೋ ೮೦ ವರ್ಷದ ಅಜ್ಜಿ ಬೆಳಗಿನ ವೇಳೆ ಇಡ್ಲಿ ತಯಾರಿ ಮಾಡಿ ಅದನ್ನ ಕೇವಲ ಒಂದು ರೂಗೆ ಮಾರಾಟ ಮಾಡುತ್ತಾ ಬಡವರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದರು. ಇನ್ನು ಇದರಿಂದಲೇ ಬರುತ್ತಿದ್ದ ಆದಾಯದಿಂದ ಅಜ್ಜಿ ಜೀವನ ನಡೆಸುತ್ತಿದ್ದರು. ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಒಲೆಯ ಮೇಲೆ ಇಡ್ಲಿ ಮಾಡುತ್ತಿರುವ ಅಜ್ಜಿಯ ವಿಡಿಯೋವನ್ನ ನೋಡಿದ್ದ ಖ್ಯಾತ ಉದ್ಯಮಿ ಆನಂದ್ ಮಹಿಂದ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಜ್ಜಿಯ ಕಾರ್ಯಕ್ಕೆ ನೆರವಾಗುವುದಾಗಿ ಹೇಳಿದ್ದರು.

[widget id=”custom_html-4″]

Advertisements

ಹೌದು, ಆಗ ಅಜ್ಜಿಯ ವಿಡಿಯೋ ಶೇರ್ ಮಾಡಿ ಟ್ವೀಟ್ ಮಾಡಿದ್ದ ಆನಂದ್ ಮಹಿಂದ್ರಾ ಅವರು, ಒಲೆಯಲ್ಲಿ ಇಡ್ಲಿ ಮಾಡುತ್ತಿದ್ದ ಅಜ್ಜಿಗೆ ಗ್ಯಾಸ್ ಹಾಗು ಸ್ಟವ್ ಜೊತೆಗೆ ಅಜ್ಜಿಯ ಇಡ್ಲಿ ವ್ಯವಹಾರದಲ್ಲಿ ಬಂಡವಾಳ ಹೂಡಿಕೆ ಮಾಡುವುದಾಗಿ ಹೇಳಿದ್ದರು. ಈಗ ತಾವು ಹೇಳಿದ ಮಾತಿನಂತೆ ನಡೆದುಕೊಂಡಿರುವ ಉದ್ಯಮಿ ಆನಂದ್ ಮಹಿಂದ್ರಾ ಅವರು ಅಜ್ಜಿಯ ವ್ಯವಹಾರದಲ್ಲಿ ಬಂಡವಾಳ ಹೂಡಲು ಮುಂದಾಗಿದ್ದರು. ಆದರೆ ಅಜ್ಜಿಗೆ ಮನೆಯಿಲ್ಲದ ಕಾರಣ ಮನೆ ಕಟ್ಟಿ ಕೊಡಲು ಮುಂದಾಗಿದ್ದು ಮನೆಯ ಜಾಗ ಕೂಡ ಅಜ್ಜಿಯ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಕೊಟ್ಟಿದ್ದಾರೆ. ಇನ್ನು ಸದ್ಯದಲ್ಲೇ ಮನೆಯ ನಿರ್ಮಾಣ ಕಾರ್ಯಗಳು ಶುರುವಾಗಲಿವೆ ಎಂದು ಉದ್ಯಮಿ ಆನಂದ್ ಮಹಿಂದ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

[widget id=”custom_html-4″]

ಈಗಾಗಲೇ ಅಜ್ಜಿಗೆ ಗ್ಯಾಸ್ ಏಜೆನ್ಸಿ ಒಂದರಿಂದ ಫ್ರೀ ಆಗಿ ಗ್ಯಾಸ್ ಕನೆಕ್ಷನ್ ಕೂಡ ಸಿಕ್ಕಿದೆ. ಇನ್ನು ಬರೋಬ್ಬರಿ ೩೭ ವರ್ಷಗಳಿಂದ ಒಂದು ರುಪಾಯಿಗೆ ಇಡ್ಲಿ ಮಾಡಿ ಬಡವರ ಹಸಿವು ನೀಗಿಸುತ್ತಿರುವ ಅಜ್ಜಿ ಕಮಲಥಾಲ್ ಅವರಿಗೆ ಮನೆಯ ಜೊತೆಗೆ ಹೊಸದಾದ ಕ್ಯಾಂಟೀನ್ ಕೂಡ ನಿರ್ಮಿಸಿ ಕೊಡಲಿದ್ದಾರೆ ಆನಂದ್ ಮಹಿಂದ್ರಾ ಅವರು. ಒಟ್ಟಿನಲ್ಲಿ ಒಂದು ರೂಪಾಯಿಯ ಇಡ್ಲಿ ಅಮ್ಮನಿಗಾಗಿ ಉದ್ಯಮಿ ಆನಂದ್ ಮಹಿಂದ್ರಾ ಅವರು ಮಾಡುತ್ತಿರುವ ಸಹಾಯ ನೋಡಿ ಇಡೀ ದೇಶವೇ ಸಲಾಂ ಹೊಡೆಯುತ್ತಿದೆ. ಅಜ್ಜಿ ಕಮಲಥಾಲ್ ಮತ್ತಷ್ಟು ವರ್ಷಗಳ ಕಾಲ ಬಡವರ ಹಸಿವನ್ನ ನೀಗಿಸುವ ಶಕ್ತಿ ನೀಡಲಿ ಎಂದು ಆ ದೇವರಲ್ಲಿ ನಾವೆಲ್ಲಾ ಕೇಳಿಕೊಳ್ಳೋಣ ಸ್ನೇಹಿತರೆ..