ಒಂದೇ ಬಾರಿಗೆ 1088 ಆಂಬ್ಯುಲೆನ್ಸ್ ಗಳನ್ನ ಲಾಂಚ್ ಮಾಡಿ ಇತಿಹಾಸ ಕ್ರಿಯೇಟ್ ಮಾಡಿದ ಜಗನ್ ಸರ್ಕಾರ !

News
Advertisements

ಎಷ್ಟೋ ತುರ್ತು ಸಂಧರ್ಭಗಳಲ್ಲಿ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗದೇ ಸಾ’ವಿಗೀಡಾಗುವ ಘಟನೆಗಳನ್ನ ನಾವು ನೋಡುತ್ತಲೇ ಇದ್ದೇವೆ. ಕೇವಲ ಆಂಬ್ಯುಲೆನ್ಸ್ ಸಿಗದ ಕಾರಣ ಹಲವಾರು ರಾಜ್ಯಗಳಲ್ಲಿ ಸಾ’ವಿನ ಪ್ರಕರಣಗಳು ಹೆಚ್ಚಾಗಿರುವುದು ನಡೆದಿದೆ. ಇನ್ನು ಇದನ್ನ ಗಂಭೀರವಾಗಿ ಪರಿಗಣಿಸಿರುವ ಅಂದ್ರ ಪ್ರದೇಶದ ಸಿಎಂ ಜಗಮೋಹನ್ ರೆಡ್ಡಿ ಬರೋಬ್ಬರಿ 1088 ಆಂಬ್ಯುಲೆನ್ಸ್ ಗಳನ್ನ ರೋಗಿಗಳ ಸೇವೆಗೆ ಲಾಂಚ್ ಮಾಡಿದೆ.

ಇನ್ನು ಇದಕ್ಕಾಗಿ ೨೦೦ ಕೋಟಿಯನ್ನ ವೆಚ್ಚ ಮಾಡಿರುವ ಜಗನ್ ಸರ್ಕಾರ ಈ ಯೋಜನೆಯಿಂದ ಪ್ರತಿ ೭೫ ಸಾವಿರ ಜನರಿಗೆ ಒಂದು ಆಂಬ್ಯುಲೆನ್ಸ್ ಲಾಭವಾಗಲಿದೆ ಎಂದು ಸಿಎಂ ಜಗನ್ ಹೇಳಿದ್ದಾರೆ. ಇನ್ನು 108 ಮತ್ತು 104 ತುರ್ತು ಆಂಬ್ಯುಲೆನ್ಸ್ ಗಳ ಸೇವೆ ಸಲ್ಲಿಸಲಿದ್ದು ಹಳ್ಳಿಗಳಿಂದ ಕರೆ ಬಂದರೆ ೨೦ ನಿಮಿಷ ಹಾಗೂ ನಗರ ಪ್ರದೇಶದಲ್ಲಿ ಕರೆ ಬಂದರೆ ಕೇವಲ ೧೫ ನಿಮಿಷಗಳಲ್ಲಿ ಸೇವೆ ಒದಗಿಸಲಾಗುವುದು ಎಂದು ಜಗನ್ ಹೇಳಿದೆ.

ಇನ್ನು ೧೦೮ ಸಂಖ್ಯೆಯ ೪೧೨ ಆಂಬ್ಯುಲೆನ್ಸ್ ಗಳು ಲಭ್ಯವಿದ್ದು ಇದರಲ್ಲಿ ೨೬ ಆಂಬ್ಯುಲೆನ್ಸ್ ಗಳನ್ನ ನವಜಾತ ಮಕ್ಕಳಿಗೋಸ್ಕರವೇ ಮೀಸಲಿಡಲಾಗಿದೆ ಎಂದು ಹೇಳಲಾಗಿದ್ದು ಅಗತ್ಯ ಸೌಕರ್ಯ ಕೂಡ ಕಲ್ಪಿಸಲಾಗಿದೆ. ಇನ್ನುಳಿದ ೨೮೨ ಆಂಬ್ಯುಲೆನ್ಸ್ ಗಳಲ್ಲಿ ಸಾಮಾನ್ಯ ಜೀವರಕ್ಷಣಾ ವ್ಯವಸ್ಥೆಯನ್ನ ಮಾಡಲಾಗಿದ್ದು ೧೦೨ ಆಂಬ್ಯುಲೆನ್ಸ್ ಗಳಲ್ಲಿ ಅತ್ಯಾಧುನಿಕ ಜೀವ ರಕ್ಷಣಾ ವ್ಯವಸ್ಥೆಯನ್ನ ಮಾಡಲಾಗಿದೆ. ಇನ್ನು ಈ ಆಂಬ್ಯುಲೆನ್ಸ್ ಗಳ ಮೂಲಕ ಡಾಕ್ಟರ್ ಗಳು ತಿಂಗಳಿಗೆ ಒಂದು ಬಾರಿ ಕುಗ್ರಾಮಗಳಿಗೆ ಹೋಗಿ ಜನರ ಆರೋಗ್ಯ ತಪಾಸಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.