ತನ್ನ ಮಾಂಗಲ್ಯ ಸರ ಅಡವಿಟ್ಟು ಈ ಮಹಿಳೆ ಮಾಡುತ್ತಿರುವ ಕೆಲಸ ನೋಡಿ ! ಗೊತ್ತಾದ್ರೆ ಗ್ರೇಟ್ ಅಂತೀರಾ..

Kannada News

ಈಗಿನ ಕಾಲದಲ್ಲಿ ನಾವು ನಮ್ಮ ಮನೆಯವರು ಚೆನ್ನಾಗಿದ್ದರೆ ಸಾಕು ಏನುವವರೇ ಹೆಚ್ಚಾಗಿದ್ದಾರೆ. ಆದರೆ ಇಲ್ಲೊಬ್ಬರು ಮಹಾ ತಾಯಿ ಮಾಡುತ್ತಿರುವ ಕೆಲಸ ನೋಡಿದ್ರೆ ಗ್ರೇಟ್ ಅಂತ ಹೇಳ್ತೀರಾ..ಹೌದು, ಅಂಗನವಾಡಿಯ ಕಾರ್ಯಕರ್ತೆಯಾಗಿರುವ ಉಡುಪಿ ಜಿಲ್ಲೆಯ ಮಹಿಳೆಯೊಬ್ಬರು ತನ್ನ ಮಾಂಗಲ್ಯ ಸರವನ್ನ ಅಡಿವಿಟ್ಟು ಫಲಾನುಭವಿಗಳಿಗೆ ಸರ್ಕಾರ ಕೊಡಬೇಕಾದ ಮೊಟ್ಟೆಗಳನ್ನ ತಾವೇ ವಿತರಣೆ ಮಾಡುತ್ತಿದ್ದಾರೆ. ಹೌದು, ಸರ್ಕಾರವು ಮಕ್ಕಳು ಮತ್ತು ಗರ್ಭಿಣಿಯಾದವರಿಗೆ ಪೌಷ್ಟಿಕಾಂಶದ ಕೊರತೆಯಾಗಬಾರದೆಂದು ಮೊಟ್ಟೆಗಳನ್ನ ನೀಡಲಾಗುತ್ತದೆ. ಆದರೆ ಸಮಯಕ್ಕೆ ಸರಿಯಾಗಿ ಸರ್ಕಾರದಿಂದ ಬಿಲ್ ಹಣ ಬಂದಿಲ್ಲ.

ಆದರೂ ಕೂಡ ಉಡುಪಿ ಜಿಲ್ಲೆಯ ಅಂಬಲಪಾಡಿಯ ಇಂದಿರಾ ಎನ್ನುವ ಈ ಅಂಗವಾಡಿ ಕಾರ್ಯಕರ್ತೆ ಸರ್ಕಾರದಿಂದ ಹಣ ಬರದಿದ್ದರೂ ಸಹ ಮಕ್ಕಳು ಮತ್ತು ಗರ್ಭಿಣಿಯರ ಆರೋಗ್ಯದ ಕಾಳಜಿಯಿಂದ ತಾವೇ ತಮ್ಮ ಮಾಂಗಲ್ಯ ಸರವನ್ನ ಅಡವಿಟ್ಟು ಫಲಾನುಭವಿಗಳಾದವರಿಗೆ ಮೊಟ್ಟೆಗಳನ್ನ ನೀಡುತ್ತಿದ್ದಾರೆ. ಇನ್ನು ಅಂಗವಾಡಿ ಕಾರ್ಯಕರ್ತೆ ಇಂದಿರಾ ಅವರು ತಮ್ಮ ಮನೆಯ ಸಂಪೂರ್ಣ ಜವಾಬ್ದಾರಿಯನ್ನ ತಾವೇ ನಿಭಾಯಿಸುತ್ತಿದ್ದ ಗಂಡ ಅನಾರೋಗ್ಯದಲ್ಲಿದ್ದಾರೆ ಎಂದು ಹೇಳಲಾಗಿದೆ.

ಇನ್ನು ತಾವೇ ಮಗಳಿಗೆ ಮದುವೆ ಮಾಡಿದ್ದು, ಅವರ ಮಗ ಇತ್ತೀಚೆಗಷ್ಟೇ ಉದ್ಯೋಗಕ್ಕೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಇದೆಲ್ಲದರ ನಡುವೆಯೂ ಸರ್ಕಾರದಿಂದ ಸರಿಯಾದ ಸಮಯಕ್ಕೆ ಹಣ ಬಾರದ ಕಾರಣ ೨೦ ಮಕ್ಕಳು ಮತ್ತು ೩೦ ಗರ್ಭಿಣಿ ಸ್ತ್ರೀಯರಿಗೆ ತಿಂಗಳಿಗೆ ೪ ಸಾವಿರ ಖರ್ಚು ಮಾಡಿ ಅಂಗವಾಡಿ ಕಾರ್ಯಕರ್ತೆ ಇಂದಿರಾ ಅವರು ಮೊಟ್ಟೆಗಳನ್ನ ನೀಡುತ್ತಿದ್ದಾರೆ. ಸಾಮಾಜಿಕ ಕಳ ಕಳಿ ಹೊಂದಿರುವ ಇಂದಿರಾ ಅವರು ತಾವು ಕಷ್ಟದಲ್ಲಿದ್ದರೂ ಸಹ ಸರ್ಕಾರದ ಹಣಕ್ಕೆ ಕಾಯದೆ ಮಾಡುತ್ತಿರುವ ಕೆಲಸ ತುಂಬಾ ಗ್ರೇಟ್ ಅಲ್ಲವೇ..ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ತಿಳಿಸಿ..