ಒಂದು ದಿನವೂ ಕೂಡ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ ಈ ವ್ಯಕ್ತಿಗೆ ಈ ಕಂಪನಿ ಮಾಡಿದ ಕೆಲಸ ಕೇಳಿದ್ರೆ ಶಾಕ್ ಆಗ್ತೀರಾ !

Kannada News
Advertisements

ಸ್ನೇಹಿತರೇ, ಬೆಳಿಗ್ಗೆಯಿಂದ ರಾತ್ರಿವರೆಗೆ ದುಡಿಯುವ ಯಾವುದೇ ವ್ಯಕ್ತಿಗೆ ವಿಶ್ರಾಂತಿ ಅನ್ನೋದು ಬೇಕೇ ಬೇಕು. ಹಾಗಾಗಿಯೇ ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡುವವರು ರಜೆ ತಗೆದುಕೊಳ್ಳುವುದು ಸಾಮಾನ್ಯ. ನಾನು ಒಂದು ದಿನವೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತೇನೆ ಎನ್ನುವವರು ಈ ಇಡೀ ಜಗತ್ತಿನಲ್ಲಿ ಸಿಗುವುದೇ ಇಲ್ಲ. ಒಂದು ವೇಳೆ ಅಂತಹವರು ಯಾರಾದರೂ ಇದ್ದರೆ, ಅಂತಹವರನ್ನ ಮಿರಾಕಲ್ ವ್ಯಕ್ತಿ ಎನ್ನಬಹುದು. ಒಂದು ವೇಳೆ ಒಂದು ರಜೆ ಕೂಡ ತೆಗೆದುಕೊಳ್ಳದೆ ಸಂಸ್ಥೆಗೋಸ್ಕರ ನಿಯಾತ್ತಾಗಿ ದುಡಿಯುವ ಎಂದರೆ ರಿಟರ್ಡ್ ಆದ ವೇಳೆ ಒಂದು ಎರಡು ಮೂರೂ ಲಕ್ಷ ಹೆಚ್ಚು ಹಣ ಸಿಗಬಹುದು ಎಂದರೆ, ಅದು ನಮ್ಮ ಮೂರ್ಖತನ ಎಂದರೆ ತಪ್ಪಾಗೊದಿಲ್ಲ..ಹೌದು, ನಾವಿಲ್ಲಿ ಹೇಳುವ ವ್ಯಕ್ತಿಯ ಬಗ್ಗೆ ತಿಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ..

[widget id=”custom_html-4″]

Advertisements

ಹೌದು, ಪ್ರೈವೇಟ್ ಕಂಪನಿಯೊಂದರ ಉದ್ಯೋಗಿ ಒಂದು ರಜೆ ಕೂಡ ತೆಗೆದುಕೊಳ್ಳದೆ ವರ್ಷವಿಡಿ ಕೆಲಸ ಮಾಡಿದ್ದಾನೆ. ಹೀಗೆ ರಜೆಯೇ ಇಲ್ಲದೆ ಕೆಲಸ ಮಾಡಿದ ವ್ಯಕ್ತಿಯ ಹೆಸರು ಅನಿಲ್ ಮಣಿಭಾಯಿ ನಾಯಕ್ ಎಂದು. ಹಳ್ಳಿಯೊಂದರ ಶಿಕ್ಷಕನ ಮಗನಾಗಿದ್ದ ಮಣಿಬಾಯ್ ೧೯೬೫ರಲ್ಲಿ L&Tಕಂಪನಿಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಉದ್ಯೋಗಕ್ಕೆ ಸೇರುತ್ತಾರೆ. ಬಳಿಕ L&T ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದುವರಿದ ಮಣಿಭಾಯ್ ನಾಯಕ್ ಅವರು ಒಂದು ದಿನವೂ ಕೂಡ ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಾರೆ. ಇನ್ನು ತಮ್ಮ ಕೆಲಸದಿಂದ ನಿವೃತ್ತಿಯಾದ ಅನಿಲ್ ಮಣಿಭಾಯಿ ನಾಯಕ್ ಅವರಿಗೆ ಸಿಕ್ಕ ಹಣದ ಬಗ್ಗೆ ಕೇಳಿದ್ರೆ ನೀವು ಅಚ್ಚರಿಪಡುತ್ತೀರಾ..

[widget id=”custom_html-4″]

ಹೌದು, ಒಂದು ದಿನವೂ ರಜೆ ತೆಗೆದುಕೊಳ್ಳದೆ ನಿವೃತ್ತಿಯಾದ L&Tಕಂಪನಿಯಿಂದ ಮಣಿಭಾಯಿ ಅವರು ಪಡೆದಿದ್ದು ಬರೋಬ್ಬರಿ ೨೧ ಕೋಟಿ ರೂಗಳು. ಇಷ್ಟು ಹಣ ಬಂದ ಮೇಲೆ ಸ್ವತಃ ಮಣಿಭಾಯ್ ನಾಯಕ್ ಅವರೇ ಶಾಕ್ ಆಗಿದ್ದಾರಂತೆ. ಒಂದು ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ ಮಣಿಭಾಯಿ ನಾಯಕ್ ಅವರಿಗೆ ಎಲ್ ಅಂಡ್ ಟಿ ಕಂಪನಿ ಇಷ್ಟೊಂದು ಹಣ ಕೊಟ್ಟು ಗೌರವ ನೀಡಿದೆ ಎಂದು ಹೇಳಲಾಗಿದೆ. ಇನ್ನು ಎಲ್ ಅಂಡ್ ಟಿ ಸಂಸ್ಥೆಯನ್ನ ಇಷ್ಟೊಂದು ಎತ್ತರಕ್ಕೆ ಬೆಳೆಸಿರುವ ಮಣಿಭಾಯ್ ನಾಯಕ್ ಅವರಿಗೆ ರಜಾದಿನಗಳನ್ನ ಬಳಸದ ಕಾರಣ ೨೧.೩೩ಕೋಟಿ ರೂಪಾಯಿ, ಒಟ್ಟು ಗ್ರ್ಯಾಚುಟಿ ಎಲ್ಲಾ ಸೇರಿ ನೂರು ಕೋಟಿಗಿಂತ ಹೆಚ್ಚು ಹಣ ಅವರ ಕೈಸೇರಿದೆ. ಇನ್ನು ಮಣಿಭಾಯ್ ನಾಯಕ್ ಅವರಿಗೆ ದೇಶದ ಎರಡನೇ ಅತಿ ದೊಡ್ಡ ಪ್ರಶಸ್ತಿ ಪದ್ಮವಿಭೂಷಣ ಅವಾರ್ಡ್ ಕೂಡ ಸಿಕ್ಕಿದೆ. ನೋಡಿದ್ರಾ, ಒಬ್ಬ ವ್ಯಕ್ತಿ ನಿವೃತ್ತಿ ಬಳಿಕವೂ ಎಷ್ಟೆಲ್ಲಾ ಹಣ ಸಿಗಬಹುದು ಎಂಬುದಕ್ಕೆ ಮಣಿಭಾಯ್ ನಾಯಕ್ ಅವರೇ ಒಂದು ನೈಜ ನಿದರ್ಶನ..ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ತಿಳಿಸಿ..