ಟ್ಯಾಕ್ಷಿ ಆಟೋ ಕ್ಯಾಬ್ ಚಾಲಕರಿಗೆ ಸರ್ಕಾರದಿಂದ 5ಸಾವಿರ ಬಂಪರ್ ಆಫರ್..ತಿಳಿಯಲು ಮುಂದೆ ನೋಡಿ..

News
Advertisements

ದೇಶದಾದ್ಯಂತ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಸಾಮಾನ್ಯ ಜನರು ಸೇರಿದಂತೆ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಕ್ಯಾಬ್ ಚಾಲಕರು, ಆಟೋ ರಿಕ್ಷಾದವರು,ಈ ರಿಕ್ಷಾ ಚಾಲಕರು ಅತೀ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದಾರೆ.

Advertisements

ಹಾಗಾಗಿ ಇವರ ನೆರವಿಗೆ ಧಾವಿಸಿರುವ ಸಿಎಂ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ವಿಶೇಷವಾದ ಪ್ಯಾಕೇಜ್ ಒಂದನ್ನ ಘೋಷಣೆ ಮಾಡಿದ್ದಾರೆ. ಹೌದು, ದಿನಪ್ರತಿ ದುಡಿದರಷ್ಟೇ ಚಾಲಕರಿಗೆ ಜೀವನ ಸಾಗುವುದು. ಆದರೆ ೨೧ದಿನಗಳ ಲಾಕ್ ಡೌನ್ ಘೋಷಣೆ ಆಗಿರುವುದರಿಂದ ಚಾಲಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ.

ಹಾಗಾಗಿಯೇ ಚಾಲಕರಿಗೆ ವಿಶೇಷ ಪ್ಯಾಕೇಜ್ ನ ಅಡಿಯಲ್ಲಿ 5ಸಾವಿರ ಕೊಡುವುದಾಗಿ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. ಇನ್ನು ಸರ್ಕಾರ ಚಾಲಕರ ಪರ ನಿಲ್ಲಲಿದ್ದು, ಪ್ರತಿಯೊಬ್ಬ ಚಾಲಕರಿಗೂ ಹತ್ತು ದಿನಗಳ ಒಳಗಡೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ೫ಸಾವಿರ ಹಣವನ್ನು ವರ್ಗಾಯಿಸಲಾಗುವುದು ಎಂದು ಹೇಳಿದ್ದಾರೆ.

ಇನ್ನು ಸದ್ಯಕ್ಕೆ ನಮ್ಮ ಸರ್ಕಾರದ ಬಳಿ ಡ್ರೈವರ್ ಗಳ ಬ್ಯಾಂಕ್ ಖಾತೆಗಳ ಮಾಹಿತಿ ಇಲ್ಲ. ಹಾಗಾಗಿ ಬಳಿಕ ೫ಸಾವಿರ ಚಾಲಕರ ಬ್ಯಾಂಕ್ ಖಾತೆಗಳಿಗೆ ತಲುಪಲಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಒಟ್ಟಿನಲ್ಲಿ ಚಾಲಕರ ಪರವಾಗಿನ ದೆಹಲಿ ಸರ್ಕಾರದ ಈ ನಡೆ ಬಹಳ ಉತ್ತಮವಾದದ್ದು. ಇನ್ನು ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..