ಬಿಗ್ ಬಾಸ್ ಸ್ಪರ್ದಿ ಅರವಿಂದ್ ಅವರ ರಿಯಲ್ ಲೈಫ್ ಬಗ್ಗೆ ಕೇಳಿದ್ರೆ ಅಚ್ಚರಿ ಆಗುತ್ತೆ !

Entertainment
Advertisements

ಸ್ನೇಹಿತರೇ, ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟು ಶುರುವಾಗಿ ಈಗಾಗಲೇ ೫ ವಾರಗಳು ಮುಗಿದಿವೆ. ಇನ್ನು ಈ ಸಲದ ಬಿಗ್ ಬಾಸ್ ಮನೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಸ್ಪರ್ಧಿಗಳ ಸಂಗಮವಾಗಿದೆ. ಅದರಲ್ಲಿ ಒಬ್ಬರು ಬೈಕ್ ರೇಸರ್ ಆಗಿರುವ ಕೆಪಿ. ಅರವಿಂದ್ ಅವರು. ಬಿಗ್ ಮನೆಯಲ್ಲಿ ಚೆನ್ನಾಗಿಯೇ ಆಟ ಆಡುತ್ತಿರುವ ಅರವಿಂದ್ KP ಅವರು ಕರ್ನಾಟಕದ ಜನತೆಗೆ ಅಷ್ಟೇನೂ ಚಿರಪರಿಚಿತರಲ್ಲ. ಈಗ ಬಿಗ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಅವರಿಗೂ ಕೂಡ ದೊಡ್ಡದಾದ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಇನ್ನು ಕೆಲ ದಿನಗಳಿಂದೀಚೆಗೆ ಸಹ ಸ್ಪರ್ಧಿ ದಿವ್ಯ ಉರುಡುಗ ಅವರೊಂದಿಗೆ ಹೆಚ್ಚು ಆತ್ಮೀಯರಾಗಿರುವ ಕಾರಣ ಇವರಿಬ್ಬರ ನಡುವೆ ಏನೋ ಇದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

[widget id=”custom_html-4″]

Advertisements

ಇನ್ನು ಇದಲ್ಲದರ ಜೊತೆಗೆ ಬಿಗ್ ಬಾಸ್ ವೀಕ್ಷಕರಿಗೆ ಸ್ಪರ್ಧಿಗಳ ರಿಯಲ್ ಲೈಫ್ ಹೇಗಿದೆ ಅನ್ನೋದ್ರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಹಾಗಾದ್ರೆ ವೃತ್ತಿಯಲ್ಲಿ ಬೈಕ್ ರೇಸರ್ ಆಗಿರುವ ಅರವಿಂದ್ ಅವರ ರಿಯಲ್ ಲೈಫ್ ಹೇಗಿದೆ ಅನ್ನೋದ್ರ ಬಗ್ಗೆ ತಿಳಿಯೋಣ ಬನ್ನಿ..33 ವರ್ಷದ ಅರವಿಂದ್ ಅವರು ಉಡುಪಿ ಜಿಲ್ಲೆಯ ಮಣಿಪಾಲ್ ನಿವಾಸಿಯಾಗಿದ್ದು, ಈಗ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಇನ್ನು ಇವರ ತಂದೆ ಹೆಸರು ಪ್ರಭಾಕರ್ ಉಪಾಧ್ಯ, ತಾಯಿಯ ಹೆಸರು ಉಷಾ ಉಪಾಧ್ಯ ಎಂದು. ಇನ್ನು ಅರವಿಂದ್ ಅವರಿಗೆ ಪ್ರಶಾಂತ್ ಎನ್ನುವ ಒಬ್ಬ ಸಹೋದರ ಕೂಡ ಇದ್ದಾರೆ. ೨೦೦೪ರಿಂದಲೂ ಬೈಕ್ ರೇಸರ್ ಆಗಿರುವ ಅರವಿಂದ್ ಅವರು ಇಂಟರ್ನ್ಯಾಷನಲ್ ಸೇರಿದಂತೆ ಹಲವಾರು ಬೈಕ್ ರೇಸ್ ಗಳಲ್ಲಿ ಭಾಗವಹಿಸಿ ಪ್ರಶಸ್ತಿ, ಪದಕಗಳನ್ನ ಪಡೆದುಕೊಂಡಿದ್ದಾರೆ.

[widget id=”custom_html-4″]

ಬೈಕ್ ರೇಸರ್ ಮಾತ್ರವಲ್ಲದೆ ಈಜು ಹಾಗೂ ಪೋಲ್ ನಂತಹ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನ ಮುಡುಗೇರಿಸಿಕೊಂಡಿದ್ದಾರೆ. ಇನ್ನು ೧೯ನೇ ವರ್ಷದಿಂದಲೇ ಅರವಿಂದ್ ಅವರು ಬೈಕ್ ರೇಸರ್ ಆಗಿದ್ದಾರೆ. ೨೦೦೬ರಿಂದ ಟಿವಿಎಸ್ ರೇಸಿಂಗ್ ತಂಡದ ಭಾಗವಾಗಿರುವ ಅರವಿಂದ್ ಅವರು ಎಲ್ಲೇ ರೇಸಿಂಗ್ ನಡೆದರೂ TVS ತಂಡದ ಪರವಾಗಿ ಪ್ರತಿನಿಧಿಸುತ್ತಾರೆ. ಅತ್ಯಂತ ಕಠಿಣವಾಗಿರುವ ಡಾಕರ್ ರೇಸಿಂಗ್ ನಲ್ಲಿ ಪ್ರತಿನಿಧಿಸಿ ೩೭ನೇ ಸ್ಥಾನ ಪಡೆದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ ಇವರ ಹೆಸರಲ್ಲಿದೆ. ಇನ್ನು ೨೦೧೨ರಲ್ಲಿ ತೀವ್ರವಾಗಿ ಗಾ’ಯಗೊಂಡಿದ್ದು ಅರವಿಂದ್ ಅವರು ಹಾಸಿಗೆ ಹಿಡಿದಿದ್ದರು ಎಂದು ಹೇಳಲಾಗಿದೆ. ಮತ್ತೆ ಸುಧಾರಿಸಿಕೊಂಡಿದ್ದ ಅರವಿಂದ್ ಅವರು ೨೦೧೩ರ ಬೈಕ್ ರೇಸಿಂಗ್ ನಲ್ಲಿ ವಿನ್ ಆಗಿದ್ದರು.

ಇನ್ನು ೨೦೧೫ರಲ್ಲಿ ನಡೆದ ರೇಡ್ ದೇ ಹಿಮಾಲಯನ್ ಬೈಕ್ ರೇಸಿಂಗ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡಿರುವ ಅರವಿಂದ್ ಅವರು ಜಗತ್ತಿನಲ್ಲಿರುವ ಕೆಲವೇ ಕೆಲವು ಅತ್ತ್ಯತ್ತಮ ಬೈಕ್ ರೇಸರ್ ಗಳ ಬಳಿ ತರಭೇತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದರ ಜೊತೆಗೆ ಬೆಂಗಳೂರ್ ಡೇಸ್ ಎಂಬ ಮಲಯಾಳಂ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದಾರೆ ಕೆಪಿ.ಅರವಿಂದ್. ಇನ್ನು ಬಿಗ್ ಮನೆಯ ಮೂರನೇ ವಾರದಲ್ಲಿ ಟಾಸ್ಕ್ ಗಳಲ್ಲಿ ಅತ್ತ್ಯತ್ತಮವಾಗಿ ಆಡಿದ್ದು ಅರವಿಂದ್ ಅವರು ಕಿಚ್ಚನ ಚಪ್ಪಾಳೆಗೆ ಪಾತ್ರರಾಗಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಯ ನಾಲ್ಕನೇ ವಾರದ ಕ್ಯಾಪ್ಟನ್ ಆಗಿಯೂ ಕಾರ್ಯ ನಿರ್ವಹಿಸಿರುವ ಅರವಿಂದ್ ಅವರು ಬಿಗ್ ಮನೆಯ ಟಪ್ ಕಾಂಪಿಟೇಟರ್ ಗಳಲ್ಲಿ ಒಬ್ಬರು ಎಂದರೆ ತಪ್ಪಾಗೊದಿಲ್ಲ. ಸ್ನೇಹಿತರೇ, ಇನ್ನೆಷ್ಟು ವಾರಗಳ ಕಾಲ ಅರವಿಂದ್ ಅವರು ಬಿಗ್ ಬಾಸ್ ಮನೆಯಲ್ಲಿ ಇರಬಹುದು ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..