ಆಟೋ, ಟ್ಯಾಕ್ಸಿ ಚಾಲಕರು 5ಸಾವಿರ ಸಹಾಯಧನ ಪಡೆದುಕೊಳ್ಳಲು ಏನು ಮಾಡಬೇಕು ಗೊತ್ತಾ??

News
Advertisements

ಲಾಕ್ ಡೌನ್ ಇರುವ ಕಾರಣ ಆಟೋ, ಟ್ಯಾಕ್ಸಿ ಚಾಲಕರ ಆದಾಯ ನಿಂತುಹೋಗಿದ. ಹಾಗಾಗಿ ಚಾಲಕರ ನೆರವಿಗೆ ನಿಂತಿರುವ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ಬಾರಿ ಪರಿಹಾರದ ರೂಪವಾಗಿ 5 ಸಾವಿರ ರೂಪಾಯಿಗಳ ಸಹಾಯ ಧನ ಕೊಡುವುದಾಗಿ ಘೋಷಣೆ ಮಾಡಿದೆ. ಹಾಗಾದ್ರೆ ಈ ಹಣವನ್ನ ಸಂಕಷ್ಟದಲ್ಲಿರುವ ಚಾಲಕರು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ..

Advertisements

ಟ್ಯಾಕ್ಸಿ, ಆಟೋ ಚಾಲಕರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ 5ಸಾವಿರದ ಸಹಾಯಧನ ನೀಡುವ ಕುರಿತಂತೆ ಸಾರಿಗೆ ಇಲಾಖೆ ಮಾರ್ಗ ಸೂಚಿಗಳನ್ನ ಸಿದ್ದ ಮಾಡಿದೆ. ಬ್ಯಾಡ್ಜ್, ಚಾಲನಾ ಪರವಾನಗಿ ಪತ್ರ ಹೊಂದಿರಬೇಕು. ಇನ್ನು ಮಾರ್ಚ್ ಒಂದಕ್ಕೆ ಚಾಲ್ತಿಯಲ್ಲಿರುವಂತೆ, ಆಧಾರ್ ಕಾರ್ಡ್ ನಂಬರ್, ಚಾಲನಾ ಅನುಜ್ಞಾ ಪತ್ರದ ವಿವರ ಸೇರಿದಂತೆ ವಾಹನ ರಿಜಿಸ್ಟ್ರೇಷನ್ ಸಂಖ್ಯೆ, ಬ್ಯಾಂಕ್ ಖಾತೆಯ ವಿವರಗಳನ್ನ ಕೊಡ್ಬೇಕಿದೆ.

ಇನ್ನು ಇದೆಲ್ಲದರ ಜೊತೆ ಆದಾಯ ಇಲದಿರಿರುವ ಬಗ್ಗೆ ಸೆಲ್ಫ್ ಡಿಕ್ಲೆರೇಷನ್ ಕೂಡ ನೀಡಾಬೇಕಾಗಿದೆ.ಇನ್ನು ಪರಿಹಾರದ ಹಣ ಸ್ವೀಕರಿಸಲು ಸರ್ಕಾರದ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನ ಸಲ್ಲಿಸಬೇಕು ಎಂದು ಸಾರಿಗೆ ಇಲಾಖೆ ಹೇಳಿದ್ದು, ಇನ್ನೇನು ಸರ್ಕಾರದಿಂದ ಅಧಿಕೃತವಾಗಿ ಆದೇಶ ಬರಬೇಕಾಗಿದೆ ಎಂದು ಹೇಳಲಾಗಿದೆ.