35ವರ್ಷಗಳ ಬಳಿಕ ಹೆಣ್ಣು ಮಗು ಹುಟ್ಟಿದಕ್ಕೆ ಈ ರೈತ ಕುಟುಂಬ ಮಾಡಿದ್ದೇನು ಗೊತ್ತಾ ? ಇಡೀ ದೇಶದಲ್ಲಿ ಯಾರೂ ಹೀಗೆ ಮಾಡಿರೋದಿಲ್ಲ !

Advertisements

ಸ್ನೇಹಿತರೇ, ಹೆಣ್ಣುಮಗು ಹುಟ್ಟಿದ್ರೆ ಹೆತ್ತ ತಾಯಿಯನ್ನೇ ನಿಂ’ಧಿಸುವ, ತಾಯಿ ಮಗುವನ್ನ ಮನೆಯಿಂದ ಹೊರ ಹಾಕುವ ಎಷ್ಟೋ ಘಟನೆಗಳು ಇಂದಿಗೂ ನಡೆಯುತ್ತಲೇ ಇರುತ್ತವೆ. ಇಂತಹವರ ನಡುವೆ ಇಲ್ಲೊಂದು ಕುಟುಂಬ ಹೆಣ್ಣು ಮಗು ಹುಟ್ಟಿದಕ್ಕೆ ಮಾಡಿದ ಕೆಲಸ ನೋಡಿದ್ರೆ ನೀವು ಅಚ್ಚರಿಪಡುತ್ತೀರಾ..ಹೌದು, ೩೫ ವರ್ಷಗಳ ಬಳಿಕ ತಮ್ಮ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿದಕ್ಕೆ ಮಗುವನ್ನ ಕುಟುಂಬಸ್ಥರು ಹೆಲಿಕಾಪ್ಟರ್ ಮೂಲಕ ತಮ್ಮ ಊರಿಗೆ ಸಂಭ್ರಮದಿಂದ ಕರೆದುಕೊಂಡು ಬಂದಿದ್ದಾರೆ. ಇನ್ನು ಈ ಘಟನೆ ನಡೆದಿರುವುದು ರಾಜಸ್ಥಾನದ ನಾಗಪುರ ಜಿಲ್ಲೆಯ ಚಂದವತ ಎಂಬ ಗ್ರಾಮದಲ್ಲಿ.

[widget id=”custom_html-4″]

ಇಲ್ಲಿನ ಹನುಮಾತ್ ಪ್ರಜಾಪತ್ ಎಂಬ ರೈತರ ಕುಟುಂಬದಲ್ಲಿ ೩೫ವರ್ಷಗಳ ಬಳಿಕ ಹೆಣ್ಣು ಮಗು ಜನಿಸಿದ್ದು ಕುಟುಂಬದವರು ತುಂಬಾ ಖುಷಿಯಿಂದ ಹೆಣ್ಣು ಮಗುವಿನ ಸ್ವಾಗತಕ್ಕೆ ವಿವಿಧ ರೀತಿಯ ಸಿದ್ಧತೆಗಳನ್ನ ಮಾಡಿ ಹಬ್ಬದಂತೆ ಸಂಭ್ರಮಪಟ್ಟಿದ್ದಾರೆ. ಹಲವಾರು ವರ್ಷಗಳ ಬಳಿಕ ತಮ್ಮ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದಕ್ಕೆ ಮಗುವಿನ ಸ್ವಾಗತ ಮಾಡುವ ಸಲುವಾಗಿ ಹೆಲಿಕಾಪ್ಟರ್ ನ್ನ ಬಾಡಿಗೆಗೆ ಪಡೆದು ತಂದು ಹೆಣ್ಣುಮಗುವನ್ನ ಮನೆಗೆ ಸಂಭ್ರಮದಿಂದ ಕರೆದು ತಂದಿದ್ದಾರೆ. ೩೫ ವರ್ಷಗಳ ಬಳಿಕ ಹೆಣ್ಣು ಮಗು ಜನಿಸಿದ ಕಾರಣ ಹೆಣ್ಣು ಮಗುವನ್ನ ತುಂಬಾ ಅದ್ದೂರಿಯಾಗಿ ಸ್ವಾಗತ ಮಾಡಬೇಕೆಂದು ಕುಟುಂಬ ನಿರ್ಧಾರ ಮಾಡಿದೆ. ಹೆಲಿಕಾಪ್ಟರ್ ನಲ್ಲಿ ಹೆಣ್ಣುಮಗುವನ್ನ ಹೇಗೆ ಕರೆದುಕೊಂಡು ಬಂದರು ಎಂಬುದನ್ನ ಈ ವಿಡಿಯೋದಲ್ಲಿ ನೋಡಿ..

[widget id=”custom_html-4″]

ಇನ್ನು ಕುಟುಂಬದ ಹಿರಿಯ ವ್ಯಕ್ತಿ ಹೆಣ್ಣು ಮಗುವಿನ ತಾತ ತನ್ನ ಮೊಮ್ಮಗಳ ಅದ್ದೂರಿ ಸ್ವಾಗತಕ್ಕಾಗಿ ತಾನು ಬೆಳೆದ ಬೆಳೆಯನ್ನ ೫ ಲಕ್ಷಕ್ಕೆ ಮಾರಿ, ಹೆಲಿಕಾಪ್ಟರ್ ಬಾಡಿಗೆ ಪಡೆದು ತಂದು ಅದರಲ್ಲಿಯೇ ತಮ್ಮ ಮೊಮ್ಮಗಳನ್ನ ತಮ್ಮ ಮನೆಗೆ ಅದ್ದೂರಿಯಾಗಿ ಸಂಭ್ರಮದಿಂದ ಸ್ವಾಗತ ಮಾಡಿದ್ದಾರೆ. ಇನ್ನು ಹೆಣ್ಣು ಮಗುವಿಗೆ ಸಿದ್ದಾಧತ್ರಿ ಎಂದು ನಾಮಕರಣ ಮಾಡಿದ್ದಾರೆ ಈ ಕುಟುಂಬ. ಹೆಣ್ಣು ಮಗು ಹುಟ್ಟಿತು ಎಂದು ಮೂಗುಮುರಿಯುವ ಎಷ್ಟೋ ಜನರಿಗೆ, ನಾವು ಮಾಡಿರುವ ಈ ಕೆಲಸ ಪ್ರೇರಣೆಯಾದ್ರೆ ಅಷ್ಟೇ ಸಾಕು ಎಂದು ಹನುಮಾನ್ ಪ್ರಜಾತ್ ಅವರು ಹೇಳಿದ್ದಾರೆ. ಇನ್ನು ಈ ವಿಷಯ ಸಾಮಾಜಿಕ ಜಾಲತಾಣಗಳ್ಲಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕುಟುಂಬದ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಸ್ನೇಹಿತರೇ, ಹೆಣ್ಣು ಮಗು ಹುಟ್ಟಿದ್ರೆ ಶಾಪ ಅನ್ನೋ ಎಷ್ಟೋ ಜನರಿಗೆ ಇವರು ಮಾಡಿರುವ ಕೆಲಸ ಒಂದು ಪಾಠವಾಗುವುದರಲಿ ಸಂಶಯವೇ ಇಲ್ಲ. ಇದ್ರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ತಿಳಿಸಿ..