ಅಬ್ಬಬ್ಬಾ..ಇಷ್ಟೆಲ್ಲಾ ಓದಿರೋ ಈ ದಂಪತಿ ಈಗ ಮಾಡ್ತಾ ಇರೋ ಕೆಲಸ ಏನ್ ಗೊತ್ತಾ ! ಕೆಲಸನೇ ಸಿಕ್ತಿಲ್ಲ ಅನ್ನೋರು ಒಮ್ಮೆ ನೋಡಿ..

Inspire

ಸ್ನೇಹಿತರೇ, ನಾವು ಕಷ್ಟಪಟ್ಟು ಓದಿ ಪದವಿಗಳನ್ನ ಮಾಡೋದು ನಮಗೆ ಜೀವನದ ಜ್ನ್ಯಾನದ ಜೊತೆಗೆ ಒಳ್ಳೆಯ ಉದ್ಯೋಗ ಸಿಕ್ಕಿ ಜೀವನದಲ್ಲಿ ಸುಖವಾಗಿ ಜೀವನ ನಡೆಸಬೇಕು ಎಂದು. ಇನ್ನು ನಮ್ಮ ತಂದೆ ತಾಯಿಗಳು, ಕುಟುಂಬದವರು ಕೂಡ ಚೆನ್ನಾಗಿ ಓದಿ ಒಳ್ಳೆಯ ಮಾರ್ಕ್ಸ್ ತೆಗೆದ್ರೆ ಮಾತ್ರ ನಿಮಗೆ ಒಳ್ಳೆಯ ಕೆಲಸ ಸಿಗೋದು, ನೀವು ಲೈಫ್ ನಲ್ಲಿ ಸೆಟ್ಲ್ ಆಗೋಕೆ ಆಗೋದು ಅಂತ ಬುದ್ದಿ ಹೇಳ್ತಿರ್ತಾರೆ. ಆದರೆ ಈಗ ಕಾಲ ಬದಲಾಗಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೇ ಓದಿದ್ದರೂ ಕೂಡ ಕೆಲಸ ಸಿಗೋದು ತುಂಬಾನೇ ಕಷ್ಟ. ಇನ್ನು ಸರ್ಕಾರೀ ಕೆಲಸ ಸಿಗೋದ್ರೆ ಬಗ್ಗೆ ಹೇಳೋದೇ ಬೇಡ..ಲಂಚ ಇದ್ರೇನೆ ಸರ್ಕಾರಿ ಕೆಲಸ ಸಿಗೋದು ಎನ್ನುವಷ್ಟರ ಮಟ್ಟಿಗೆ ಕಾಲ ಬದ್ಲಾಗಿದೆ. ಇದಕ್ಕೆ ಪಿಎಚ್ಡಿ ಓದಿಕೊಂಡಿರುವ ಈ ಇಬ್ಬರೂ ದಂಪತಿಗಳೇ ಸಾಕ್ಷಿ.

ಹೌದು, ಬಾಗಲಕೋಟೆ ಜಿಲ್ಲೆಗೆ ಸೇರಿದ ಅಮೀನಗಡದವರಾಗಿರುವ ಈ ದಂಪತಿಯ ಹೆಸರು ಪ್ರಶಾಂತ್ ನಾಯಕ್,ಕಾವ್ಯ ನಾಯಕ್ ಎಂದು. ವಿಶೇಷ ಎಂದರೆ ಇವರಿಬ್ಬರು PhD ಪದವೀಧರರು. ಇನ್ನು ಡಾ. ಪ್ರಶಾಂತ್ ಓದಿರುವವ ಪದವಿಗಳನ್ನ ಕೇಳಿದ್ರೆ ನೀವೇ ಶಾಕ್ ಆಗ್ತೀರಾ..ಎಂಎಸ್ಸಿ, ಎಂಎಡ್, ಬಿಎಡ್, ಪಿಜಿಡಿಸಿ,SET, NET,ಪಿಎಚ್ಡಿ. ಅಬ್ಬಬ್ಬಾ ಇಷ್ಟೆಲ್ಲಾ ಓದಿರುವ ವ್ಯಕ್ತಿಗೆ ಉದ್ಯೋಗವೇ ಇಲ್ಲ ಎಂಬುದೇ ಬೇಸರದ ಸಂಗತಿ. ಆದರೆ ಜೀವನವನ್ನಂತೂ ಮಾಡಲೇಬೇಕಲ್ಲವಾ..ಹಾಗಾಗಿ ತಮ್ಮ ಗ್ರಾಮದಲ್ಲಿಯೇ ಟೀ ಅಂಗಡಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನು ಇವರ ಟೀ ಅಂಗಡಿ ಬ್ಯುಸಿನೆಸ್ ಚೆನ್ನಾಗಿಯೇ ನಡೆಯುತ್ತಿದ್ದು ತಿಂಗಳಿಗೆ ೫೦ ಸಾವಿರದವರೆಗೆ ಹಣ ದುಡಿಯುತ್ತಿದ್ದಾರೆ ಎಂದು ಹೇಳಲಾಗಿದೆ.ಇನ್ನು ಪ್ರಶಾಂತ್ ಅವರು ಸಸ್ಯಶಾಸ್ತ್ರ ವಿಭಾಗದಲ್ಲಿ ಕಲ್ಬುರ್ಗಿಯ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದು. ಕಾಲೇಜೊಂದರಲ್ಲಿ ಕೆಲ ತಿಂಗಳುಗಳ ಕಾಲ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.

ಆದರೆ ಎರಡು ಮೂರೂ ಕಾಲೇಜುಗಳಲ್ಲಿ ಕೆಲಸ ಮಾಡಿದ್ರೂ ಕೂಡ ಅವರಿಗೆ ಖಾಯಂ ಉದ್ಯೋಗ ಸಿಗಲಿಲ್ಲ. ಇನ್ನು ಗುತ್ತಿಗೆ ಆಧಾರದ ಮೇಲೆ ಮಾಡುತ್ತಿದ್ದ ಕೆಲಸದಲ್ಲಿ ಬರುತ್ತಿದ್ದ ಸಂಬಳ ಅಷ್ಟಕಷ್ಟೇ. ಇನ್ನು ಪ್ರಶಾಂತ್ ಅವರ ಪತ್ನಿ ಕಾವ್ಯಾ ಅವರು ಕೂಡ PhD ಪದವಿ ಪಡೆದಿದ್ದರು, ಸರಿಯಾದ ಉದ್ಯೋಗ ಸಿಗದೇ ನಿರುದ್ಯೋಗಿಯಾಗಿದ್ದರು. ಇನ್ನು ಇವರ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚಾದ ಕಾರಣ ಪ್ರಶಾಂತ್ ಅವರು ತನ್ನದೇ ಊರಿನಲ್ಲಿ ಟೀ ಅಂಗಡಿಯೊಂದನ್ನ ತೆರೆಯುತ್ತಾರೆ. ಪತ್ನಿ ಕೂಡ ತನ್ನ ಪತಿ ಪ್ರಶಾಂತ್ ಅವರ ಜೊತೆ ಕೈ ಜೋಡಿಸಿದ್ದು, ಟೀ ಅಂಗಡಿ ವ್ಯವಹಾರದಲ್ಲಿ ಉತ್ತಮ ಆಧಾಯ ಗಳಿಸುತ್ತಿರುವ ಇವರ ಜೀವನ ಸುಖವಾಗಿ ಸಾಗುತ್ತಿದೆ.

ಇನ್ನು ಡಾ. ಪ್ರಶಾಂತ್ ಅವರು ಮುಂದೊಂದು ದಿನ ಮಹಿಳೆಯರ ಕಾಲೇಜನ್ನ ತೆರೆಯಬೇಕು ಎಂಬ ಬಲವಾದ ಕನಸನ್ನು ಹೊಂದಿದ್ದಾರೆ. ಇನ್ನು ತಮ್ಮ ಟೀ ಅಂಗಡಿಯಲ್ಲಿ ಕೆಲವರಿಗೆ ಕೆಲಸ ಕೂಡ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಸ್ನೇಹಿತರೇ,ನಾನು ಅಷ್ಟು ಓದಿದ್ದೇನೆ, ಇಷ್ಟು ಓದಿದ್ದೇನೆ..ನಾನು ಆ ಕೆಲಸ ಮಾಡಿದ್ರೆ ಅವಮಾನ ಆಗುತ್ತೆ ಅಂತ ಸುಮ್ಮನೆ ಕೂರುವ ಬದಲು, ಮನಸಿದ್ದರೆ ಮಾರ್ಗ ಅಂತ ಯೋಚನೆ ಮಾಡಿದಲ್ಲಿ ಸಣ್ಣ ವ್ಯಾಪಾರಿ ಆಗುವ ಮೂಲಕ ಉತ್ತಮ ಆಧಾಯ ಕೂಡ ಗಳಿಸಬಹುದು ಎಂಬುದಕ್ಕೆ ಡಾ. ಪ್ರಶಾಂತ್ ಅವರೇ ಅತ್ತ್ಯತ್ತಮ ನಿದರ್ಶನ ಎಂದರೆ ತಪ್ಪಾಗೊದಿಲ್ಲ.