ಖ್ಯಾತ ಹಿರಿಯ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಅವರ ಕುಟುಂಬ ಹೇಗಿದೆ ಮಕ್ಕಳೆಷ್ಟು ಗೊತ್ತಾ ?

Cinema

ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಸ್ಯ ನಟರಲ್ಲಿ ಬ್ಯಾಂಕ್ ಜನಾರ್ಧನ್ ಅವರು ಕೂಡ ಒಬ್ಬರು. ಹಾಸ್ಯ ಪಾತ್ರಗಳಲ್ಲಿ ಎತ್ತಿದ ಕೈ ಆಗಿರುವ ಬ್ಯಾಂಕ್ ಜನಾರ್ಧನ್ ಅವರು ಕನ್ನಡದ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಲ್ಲಯವರೆಗೆ 850ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಈ ನಟನಿಗಿದೆ. ಬ್ಯಾಂಕ್ ಜನಾರ್ಧನ್ ಅವರು ಜನಿಸಿದ್ದು 1948ರಲ್ಲಿ. ಇನ್ನು ಸಿನಿಮಾರಂಗಕ್ಕೆ ಬರುವುದಕ್ಕೂ ಮುಂಚೆ ಜನಾರ್ಧನ್ ಅವರು ಹೊಳಲ್ಕೆರೆಯ ವಿಜಯಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಬ್ಯಾಂಕ್ ಜನಾರ್ಧನ್ ಎಂಬ ಹೆಸರು ಬಂದಿದೆ. ಬ್ಯಾಂಕ್ ಉದ್ಯೋಗದಲ್ಲಿರುವಾಗಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಬ್ಯಾಂಕ್ ಜನಾರ್ಧನ್ ಅವರು ಬಳಿಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ.

ಸಿನಿಮಾಗಳಲ್ಲೂ ಅಭಿನಯಿಸುತ್ತಿದ್ದಾಗಲೂ ಕೂಡ ಬ್ಯಾಂಕ್ ಜನಾರ್ಧನ್ ಅವರು ತಮ್ಮ ಬ್ಯಾಂಕ್ ಉದ್ಯೋಗ ಬಿಟ್ಟಿರಲಿಲ್ಲ. ಹೆಸರಿಗೆ ಮಾತ್ರ ಬ್ಯಾಂಕ್ ಗೆ ಹೋಗುತ್ತಿದ್ದರು ಅಲ್ಲಿ ಕೆಲಸ ಮಾಡುತ್ತಿರಲಿಲ್ಲ. ಬದಲಿಗೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಹಾಗಾಗಿ ಅವರಿಗೆ ಬ್ಯಾಂಕ್ ನಲ್ಲಿ ಸಂಬಳ ಕೂಡ ಸಿಗುತ್ತಿರಲಿಲ್ಲ. ಇನ್ನು ದಿನಕಳೆದಂತೆ ಬ್ಯಾಂಕ್ ಕೆಲಸ ಬಿಟ್ಟು ಪೂರ್ತಿಯಾಗಿ ಸಿನಿಮಾದಲ್ಲಿ ತಮ್ಮನ್ನ ತೊಡಗಿಸಿಕೊಂಡರು ಬ್ಯಾಂಕ್ ಜನಾರ್ಧನ್ ಅವರು. ಬಳಿಕ ಸ್ಟಾರ್ ನಟರ ಜೊತೆಗೆ ನಟಿಸುವ ಅವಕಾಶ ಬ್ಯಾಂಕ್ ಜನಾರ್ಧನ್ ಅವರಿಗೆ ಸಿಕ್ಕಿದ್ದು ಅವರು ನಟಿಸಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗಿದ್ದವು. ಕಾಮಿಡಿ ಪಾತ್ರಗಳಲ್ಲೇ ಹೆಚ್ಚಾಗಿ ಅಭಿನಯಿಸಿದ್ದ ಬ್ಯಾಂಕ್ ಜನಾರ್ಧನ್ ಅವರು ನವರಸ ನಾಯಕ ಜಗ್ಗೇಶ್ ಅವರ ಜೊತೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬ್ಯಾಂಕ್ ಜನಾರ್ಧನ್ ಅವರು 1991ರಲ್ಲಿ ಬಿಡುಗಡೆಯಾದ ಆಜಗಾಜಂತರ ಸಿನಿಮಾದಲ್ಲಿ ಕಾಶಿನಾಥ್ ಹಾಗು ರಾಮ್ ಕುಮಾರ್ ಜೊತೆಯಾಗಿ ಬ್ರೋಕರ್ ಆಗಿ ನಟಿಸಿದ್ದ ಬ್ರೋಕರ್ ಪಾತ್ರ ಅವರಿಗೆ ದೊಡ್ಡ ಹೆಸರನ್ನೇ ತಂದುಕೊಟ್ಟಿತ್ತು. ಇನ್ನು ಉಪೇಂದ್ರ ನಿರ್ದೇಶನದ ಶ್ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರಧಾರಿಯಾಗಿ ಅದ್ಭುತವಾಗಿ ಅಭಿನಯಿಸಿದ್ದರು. ಇನ್ನು ಅಣ್ಣಾವ್ರ ಪಕ್ಕದಲ್ಲಿ ನಿಂತು ಅಭಿನಯಿಸಿರುವ ಬ್ಯಾಂಕ್ ಜನಾರ್ಧನ್ ಅವರು ಅಂದಿನ ಸ್ಟಾರ್ ನಟರಿಂದ ಹಿಡಿದು ಹಿಂದಿನ ಯುವನಟರ ಜೊತೆಗೂ ಅಭಿನಯಿಸಿದ್ದಾರೆ. ಇನ್ನು ಬ್ಯಾಂಕ್ ಜನಾರ್ಧನ್ ಅವರ ವೈಯುಕ್ತಿಕ ವಿಚಾರದ ಬಗ್ಗೆ ಹೇಳಬೇಕಾದರೆ, ಪತ್ನಿ ಜೊತೆಗೆ ಒಂದು ಗಂಡು ಹಾಗೂ ಮೂರು ಹೆಣ್ಣುಮಕ್ಕಳಿದ್ದು ಸುಖಜೀವನ ನಡೆಸುತ್ತಿದ್ದಾರೆ. ಆದರೆ ಮಕ್ಕಳು ಯಾರೂ ಕೂಡ ಸಿನಿಮಾ ರಂಗದಲ್ಲಿ ಇಲ್ಲ. ಇನ್ನು ಬ್ಯಾಂಕ್ ಜನಾರ್ಧನ್ ಅವರು ತಮ್ಮ ಕುಟುಂಬದ ಫೋಟೋಗಳನ್ನ ಎಲ್ಲಿಯೂ ಹಂಚಿಕೊಂಡಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಹಾಸ್ಯ ನಟ ಪ್ರತಿಭಾನ್ವಿತ ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರಿಗೆ ಅವಕಾಶಗಳು ಇಲ್ಲದಂತಾಗಿರುವಂದಂತೂ ನಿಜ..