ಲಸಿಕೆ ಹಾಕಿಸಿಕೊಳ್ಳಿ ಎಂದಿದ್ದೆ ತಡ ಈ ಹಳ್ಳಿಯ ಜನ ಮಾಡಿದ ಕೆಲಸ ನೋಡಿ ಬೆಚ್ಚಿಬಿದ್ದ ಅಧಿಕಾರಿಗಳು ! ಅಸಲಿಗೆ ಈ ಗ್ರಾಮದ ಜನ ಮಾಡಿದ್ದೇನು ಗೊತ್ತಾ ?

Kannada News
Advertisements

ನಮಸ್ತೇ ಸ್ನೇಹಿತರೇ, ಇಡೀ ದೇಶದಲ್ಲಿ ಕೊ’ರೋನಾ ಸೋಂಕಿನ ಹಾವಳಿ ಹೆಚ್ಚಾಗಿದ್ದು ಸಾ’ವು ನೋವುಗಳು ಹೆಚ್ಚಾಗುತ್ತಲೇ ಇವೆ. ಇನ್ನು ಇದರಿಂದ ಪಾರಾಗಲು ಇರುವ ಮಾರ್ಗ ಒಂದೇ ಮಾಸ್ಕ್ ಧರಿಸಿಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಇದರ ಜೊತೆಗೆ ಮುಖ್ಯವಾಗಿ ಲಸಿಕೆ ಹಾಕಿಸಿಕೊಳ್ಳುವುದು. ಆದರೆ ವೈದ್ಯರ ಪ್ರಕಾರ ಲಸಿಕೆ ಹಾಕಿಸಿಕೊಂಡರೆ ಕೊ’ರೋನಾ ಬರೋದಿಲ್ಲ ಅಂತ ಏನೂ ಇಲ್ಲ. ಒಂದು ವೇಳೆ ಲಸಿಕೆ ಹಾಕಿಸಿಕೊಂಡವರಿಗೆ ಸೋಂಕು ತಗುಲಿದಲ್ಲಿ, ಲಸಿಕೆ ಹಾಕಿಸಿಕೊಳ್ಳದಿರುವವರ ಮೇಲೆ ಆಗುವಂತಹ, ದೊಡ್ಡದಾದ ಪರಿಣಾಮ ಬೀರುವುದಿಲ್ಲ, ಸಾ’ವು ಸಂಭವಿಸುವುದಿಲ್ಲ ಎಂಬುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ. ಇನ್ನು ಈಗ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲೆಂದೇ ಸಾರ್ವಜನಿಕರು ಆಸ್ಫತ್ರೆಗಳ ಮುಂದೆ ಸಾಲು ಸಾಲು ನಿಂತು ಬೆಳಿಗ್ಗೆಯಿಂದ ಸಂಜೆಯವರೆಗೆ ಕಾಯುತ್ತಿದ್ದಾರೆ. ಆದರೆ ಲಸಿಕೆಯ ಲಭ್ಯ ಕಡಿಮೆ ಇರೋ ಕಾರಣ ಸಮಯಕ್ಕೆ ಸರಿಯಾಗಿ ಸಿಗದ ಕಾರಣ ಜನರು ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ನಿಮಗೆಲ್ಲಾ ಗೊತ್ತಿರೋ ವಿಷಯವೇ..

[widget id=”custom_html-4″]

Advertisements

ಆದರೆ, ಇಲ್ಲೊಂದು ಹಳ್ಳಿ ಇದೆ. ಅಲ್ಲಿಗೆ ಹೋದ ಆರೋಗ್ಯ ಅಧಿಕಾರಿಗಳು ಲಸಿಕೆ ಹಾಕಿಸಿಕೊಳ್ಳಿ ಎಂದಿದ್ದಕ್ಕೆ ಆ ಗ್ರಾಮದ ಜನ ಮಾಡಿದ್ದದ್ದನ್ನ ನೋಡಿ ಆರೋಗ್ಯಾಧಿಕಾರಿಗಳೇ ಶಾಕ್ ಆಗಿದ್ದಾರೆ ! ಇನ್ನು ಆ ಗ್ರಾಮದ ಜನರಿಗೆ ಲಸಿಕೆ ಬಗ್ಗೆ ಏನೂ ಗೊತ್ತಿಲ್ಲ ಅನ್ನಿಸುತ್ತೆ. ಇಂತಹ ವಿಚಿತ್ರ ಘಟನೆ ನಡೆದಿರೋದು ಉತ್ತರ ಪ್ರದೇಶಕೆ ಸೇರಿದ ಬಾರಬಂಕಿ ಎಂಬ ಜಿಲ್ಲೆಯುಲ್ಲಿ ಬರುವ ಸಿಸೌಡ ಎಂಬ ಹಳ್ಳಿಯಲ್ಲಿ. ಇನ್ನು ಈಗ ಕೊ’ರೋನಾ ಎರಡನೆಯ ಅಲೆಯ ಪ್ರಕೋಪ ಹಳ್ಳಿಗಳ ಕಡೆ ತಿರುಗಿರುವುದು ಗೊತ್ತಿರುವ ವಿಚಾರವೇ. ಹಲವಾರು ರಾಜ್ಯಗಳ ಹಳ್ಳಿಗಳಲ್ಲಿ ಸಾ’ವು ನೋವು ಹೆಚ್ಚಾಗಿದ್ದು ಎಷ್ಟೋ ಹಳ್ಳಿಗಳನ್ನ ಸೀಲ್ ಡೌನ್ ಕೂಡ ಮಾಡಲಾಗಿದೆ. ಹಾಗಾಗಿ ಹಳ್ಳಿಗಳಿಗೆ ನೇರವಾಗಿ ಹೋಗಿ ಜನರಿಗೆ ಲಸಿಕೆ ನೀಡಬೇಕೆಂದು ಸರ್ಕಾರಗಳು ನಿರ್ಧಾರ ಮಾಡಿವೆ. ಅದರಂತೆ, ಬರಾಬಂಕಿ ಜಿಲ್ಲೆಯ ಆರೋಗ್ಯಾಧಿಕಾರಿಗಳು ಸಿಸೌಡ ಗ್ರಾಮಕ್ಕೆ ಹೋಗಿದ್ದು ಕೊರೋನಾ ಲಸಿಕೆ ಹಾಕಿಸಿಕೊಳ್ಳಿ ಎಂದು ಊರಿನ ಜನಕ್ಕೆ ಮನವಿ ಮಾಡಿದ್ದಾರೆ.

[widget id=”custom_html-4″]

ಆದ್ರೆ ಈ ಮಾತನ್ನ ಕೇಳಿದ್ದೇ ಹಳ್ಳಿಯ ಜನ ಯಾರೂ ನಿರೀಕ್ಷಣೆ ಮಾಡದ ಕೆಲಸ ಮಾಡಿದ್ದಾರೆ. ಹೌದು, ಲಸಿಕೆ ಹಾಕಿಸಿಕೊಳ್ಳಿ ಎಂದಿದ್ದೆ ತಡ ಆ ಊರಿನ ಬಹುತೇಕ ಜನ ಗ್ರಾಮದ ಸಮೀಪದಲ್ಲೇ ಇದ್ದ ನದಿ ಕಡೆ ಓಡಿ ಹೋಗಿ ನದಿಗೆ ಹಾ’ರಲು ಶುರು ಮಾಡಿದ್ದಾರೆ. ವಿಚಿತ್ರದಲಿ ವಿಚಿತ್ರ ಎನಿಸಿದರೂ ಇದು ನಡೆದಿದ್ದು ಸತ್ಯ. ಗ್ರಾಮಕ್ಕೆ ಹೋದ ವೈದ್ಯಾಧಿಕಾರಿಗಳು ಆ ಹಳ್ಳಿಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಆ ಗ್ರಾಮದ ಜನ ಒಪ್ಪದಿದ್ದಾಗ, ಲಸಿಕೆ ಏತಕ್ಕೆ ಹಾಕಿಸಿಕೊಳ್ಳಬೇಕು, ಅದರಿಂದ ಏನಾಗುತ್ತೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಗ್ರಾಮದ ಜನರಲ್ಲಿ ಅರಿವು ಮೂಡಿಸಿದ್ದಾರೆ. ಆದರೆ ಅಧಿಕಾರಿಗಳ ಯಾವ ಮಾತಿಗೂ ಜನ ಒಪ್ಪದಿದ್ದಾಗ, ಆರೋಗ್ಯಾಧಿಕಾರಿಗಳೇ ಜನರ ಹತ್ತಿರಕ್ಕೆ ಹೋಗುತ್ತಿದಂತೆ ಆ ಗ್ರಾಮದ ೨೦೦ಕ್ಕೂ ಹೆಚ್ಚು ಜನ ಮನೆಯಿಂದ ನದಿ ಕಡೆ ಓಡಿದ್ದಾರೆ.

[widget id=”custom_html-4″]

ಆರೋಗ್ಯಾಧಿಕಾರಿಗಳು ಗ್ರಾಮದ ಜನರ ಹಿಂದೆ ಹಿಂದೆಯೇ ಹೋಗಿ ಅವರಿಗೆ ಎಷ್ಟೇ ತಿಳಿ ಹೇಳಿ, ಮನವಿ ಮಾಡಿ ಸಮಾಧಾನ ಮಾಡಿದ್ರು ಸಹ ಬಹುತೇಕ ಜನ ಲಸಿಕೆ ತೆಗೆದುಕೊಳ್ಳದೆ ಏಕದಮ್ ನದಿಗೆ ಹಾ’ರಿ ಬಿಟ್ಟಿದ್ದಾರೆ. ಜನರ ಈ ನಡುವಳಿಕೆ ಕಂಡು ಜನರನ್ನ ಹಿಂಬಾಲಿಸಿ ಕೊಂಡು ಹೋಗಿದ್ದ ಆರೋಗ್ಯಾಧಿಕಾರಿಗಳು ಒಂದು ಕ್ಷಣ ಇಲ್ಲಿ ಏನಾಗುತ್ತಿದೆ ಅಂತ ಬೆಚ್ಚಿಬಿದ್ದದ್ದು ಅಂತೂ ನಿಜ. ಇನ್ನು ಹೆಚ್ಚು ಸಮಯ ನಾವು ಇಲ್ಲೇ ಇದ್ದರೆ ಜನ ನೀರಿನಲ್ಲಿ ಜೀ’ವ ಕಳೆದುಕೊಳ್ಳಬಹುದು ಎಂದು ಅಲ್ಲಿಂದ ಅಧಿಕಾರಿಗಳು ಕಾಲ್ಕಿತ್ತಿದ್ದಾರೆ. ಇದರ ಬಳಿಕವೇ ನದಿ ನೀರಿನಿಂದ ಹೊರಬಂದಿದ್ದಾರೆ ಜನ. ಇನ್ನು ಸಾವಿರಕ್ಕಿಂತ ಹೆಚ್ಚು ಜನರಿರುವ ಆ ಗ್ರಾಮದ ಜನರಲ್ಲಿ ಕೇವಲ ೧೪ ರಿಂದ ೧೫ ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ನೇಹಿತರೇ, ಆ ಗ್ರಾಮದ ಜನರಲ್ಲಿ ಲಸಿಕೆ ಬಗ್ಗೆ ಅರಿವು ಇಲ್ಲದಿರುವುದೋ ತಪ್ಪೋ ? ಏಕದಮ್ ಗ್ರಾಮಕ್ಕೆ ಹೋಗಿ ಲಸಿಕೆ ಹಾಕಿಸ್ಕೊಳ್ಳಿ ಎಂದ ಅಧಿಕಾರಿಗಳ ತಪ್ಪೋ ? ಅಥ್ವಾ ನದಿಗೆ ಹಾರಲು ಹೋದ ಜನರ ತಪ್ಪೋ ? ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ..