ಲಾಕ್ ಡೌನ್ ವೇಳೆ ಭಿಕ್ಷುಕಿಯನ್ನ ಮದ್ವೆಯಾದ ಯುವಕ !ಅಪರೂಪದ ಲವ್ ಸ್ಟೋರಿ ಇದು

News
Advertisements

ಸರಳವಾಗಿ ಮದುವೆಯಾಗಲಿ ಇದು ಒಳ್ಳೆಯ ಸಮಯ. ಹೌದು, ಕರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ಅನೇಕರು ತುಂಬಾ ಸರಳವಾಗಿ ದಾಂಪತ್ಯಜೀವನಕ್ಕೆ ಕಾಲಿಡುತ್ತಿದ್ದಾರೆ. ಆದರೆ ಇಲ್ಲಿ ನಡೆದಿರುವ ಮದುವೆ ಬೇರೆ ಮದುವೆಗಳಿಗಿಂತ ವಿಭಿನ್ನ ಮತ್ತು ವಿಶೇಷವಾಗಿದೆ. ಪ್ರೀತಿಗೆ ಕಣ್ಣಿಲ್ಲ ಅನ್ನೋ ಮಾತನ್ನ ನಾವು ಸಿನಿಮಾಗಳಲ್ಲಿ ಹೆಚ್ಚಾಗಿ ಕೇಳುತ್ತೇವೆ. ಆದರೆ ನಿಜಜೀವನದಲ್ಲಿ ಈ ರೀತಿ ಆಗುವುದು ತುಂಬಾ ಕಡಿಮೆ.

Advertisements

ಹೌದು, ಉತ್ತರ ಪ್ರದೇಶದ ಕಾನ್ಪುರದ ಅನಿಲ್ ಎಂಬ ಯುವಕ, ಈ ಲಾಕ್ ಡೌನ್ ಸಮಯದಲ್ಲಿ ಭಿಕ್ಷೆ ಬೇಡುತ್ತಿದ್ದ ಯುವತಿಯನ್ನ ಮದುವೆಯಾಗಿ ಎಲ್ಲರೂ ಅಚ್ಚರಿಗೊಳ್ಳುವಂತೆ ಮಾಡಿದ್ದಾನೆ. ಲಾಕ್ ಡೌನ್ ಆಗಿರುವ ಕಾರಣ ಬಡವರು, ನಿರ್ಗತಿಕರು, ಭಿಕ್ಷುಕರು ಒಂದೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಹಾಗಾಗಿ ಅನಿಲ್ ತನ್ನ ಯಜಮಾನ ಹೇಳಿದಂತೆ ಕಾನ್ಪುರದಲ್ಲಿ ಪ್ರತೀ ದಿನ ನಿರ್ಗತಿಕರಿಗೆ, ಭಿಕ್ಷುಕರಿಗೆ ಊಟ ನೀಡಲು ಹೋಗುತ್ತಿದ್ದ.

ಇದೇ ವೇಳೆ ಅದೇ ನಗರದ ಫುಟ್ಪಾತ್ ನಲ್ಲಿ ಭಿಕ್ಷೆ ಬೇಡುತ್ತಿದ್ದ ನೀಲಂ ಎಂಬುವರನ್ನ ನೋಡಿದ್ದಾನೆ. ಇನ್ನು ಅಂದಿನಿಂದ ಇವರಿಬ್ಬರ ನಡುವೆ ಪರಿಚಯ ಆಗಿದ್ದು ಮಾತನಾಡಲು ಶುರುಮಾಡಿದ್ದಾರೆ. ಇನ್ನು ಇದೆ ಸಮಯದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ನೀಲಂ ತನ್ನ ಕಷ್ಟಗಳನ್ನ ಅನಿಲ್ ಬಳಿ ಹೇಳಿಕೊಂಡಿದ್ದಾಳೆ. ಇನ್ನು ಕೆಲವು ದಿನಗಳಲ್ಲೇ ಇವರಿಬ್ಬರು ಸ್ನೇಹಿತರಾಗಿದ್ದು, ಭಿಕ್ಷೆ ಮಾಡುವುದನ್ನ ಬಿಡುವಂತೆ ಅನಿಲ್ ನೀಲಂ ಬಳಿ ಹೇಳಿದ್ದಾನೆ.

ಇನ್ನು ಸ್ನೇಹ ಪ್ರೀತಿಗೆ ತಿರುಗಿದ್ದು, ಅನಿಲ್ ನೀಲಂ ಳನ್ನ ಲವ್ ಮಾಡಲು ಶುರುಮಾಡಿದ್ದಾನೆ. ಒಂದು ದಿನ ಅನಿಲ ನೀಲಂ ಬಳಿ ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾನೆ. ಇನ್ನು ಭಿಕ್ಷೆ ಬೇಡುತ್ತಿದ್ದ ನೀಲಂಗೆ ಇದ್ಕಕಿಂತ ಸಿಹಿಸುದ್ದಿ ಬೇರೆ ಇರಲು ಸಾಧ್ಯವಿಲ್ಲ. ನೀಲಂ ಕೂಡ ಒಪ್ಪಿ, ಸರಳವಾಯಿ ಬುದ್ಧನ ಆಶ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನು ವಧು ನೀಲಂ ಭಿಕ್ಷೆ ಬೇಡುವುದರ ಹಿಂದೆ ಒಂದು ಕರುಣಾಜನಕ ಕತೆಯೇ ಇದೆ. ಬಹಳ ವರ್ಷಗಳ ಹಿಂದೆಯೇ ತಂದೆಯನ್ನ ಕಳೆದುಕೊಂಡಿರುವ ನೀಲಂ ಗೆ ಪಾಶ್ರ್ವವಾಯು ಪೀಡಿತೆಯಾಗಿರುವ ತಾಯಿ ಇದ್ದು, ಅಣ್ಣನೂ ಇದ್ದಾನೆ. ಆದರೆ ಆ ದುಷ್ಟ ಅಣ್ಣ ಮತ್ತು ಆಕೆಯ ಅತ್ತಿಗೆ ನೀಲಂ ಮತ್ತು ಅವರ ತಾಯಿಯನ್ನ ಹಿಂದೂ ಮುಂದು ನೋಡದೆ ಆಚೆ ಹಾಕಿದ್ದಾರೆ. ಇನ್ನು ಇದರಿಂದ ತಿನ್ನಲು ಊಟವಿಲ್ಲದೆ, ವಾಸ ಮಾಡಲು ಜಾಗವಿಲ್ಲದೆ ಭಿಕ್ಷೆ ಬೇಡುವ ಪರಿಸ್ಥಿತಿ ನೀಲಂ ಗೆ ಬಂದಿತ್ತು. ಈಗ ನೀಲಂ ಬಾಳಿಗೆ ಬೆಳಕಾಗಿ ಬಂದಿರುವ ಅನಿಲ್ ಕುಟುಂಬದ ಸದಸ್ಯರು ಸ್ನೇಹಿತರು ಇಲ್ಲದೆ ವಿಭಿನ್ನವಾಗಿ ಆಶ್ರಮದಲ್ಲಿ ಮದುವೆಯಾಗಿದ್ದಾರೆ. ಸ್ನೇಹಿತರೆ, ಅನಿಲ್ ಮತ್ತು ನೀಲಂ ದಂಪತಿಗಳು ನೂರುಕಾಲ ಸುಖವಾಗಿ ಬಾಳಲಿ ಎಂದು ಶುಭ ಹಾರೈಸಿ..